ಭಾರಿ ಕೂತೂಹಲ ಮೂಡಿಸಿದ್ದ ಕರ್ನಾಟಕದ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯ ಮತ ಎಣಿಕೆ ಶುರುವಾಗಿದ್ದು, ಹಾನಗಲ್ನಲ್ಲಿ 9 ಸುತ್ತಿಗೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಸಿಂದಗಿನಲ್ಲಿ 16 ನೇ ಸುತ್ತಿಗೆ ಬಿಜೆಪಿ ಮುನ್ನಡೆ ಸಾಧಿಸಿದೆ.
ಹೌದು, ಹಾನಗಲ್ ಒಂಬತ್ತನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 36416 ಓಟ್ ಪಡೆದು 4719 ಮತಗಳಿಂದ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ 36066 ಮತ ಪಡೆದಿದೆ. ಜೆಡಿಎಸ್ 432 ಮತ ಪಡೆದಿದ್ದಾರೆ. ಮತ ಎಣಿಕೆ ಮುಂದುವರೆದಿದೆ.
ಇನ್ನೂ ಸಿಂದಗಿ ಕ್ಷೇತ್ರ – 16ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 68444 ಮತಗಳು ಪಡೆದು 20 ಸಾವಿರ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 47483 ಓಟ್ ಪಡೆದಿದ್ದಾರೆ. ಜೆಡಿಎಸ್ 2865 ಮತಗಳು ಗಳಿಸಿದ್ದಾರೆ. 17 ನೇ ಸುತ್ತಿನ ಮತ ಎಣಿಕೆ ಮುಂದುವರೆದಿದ್ದು ಈ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸುವ ಎಲ್ಲಾ ಸಾಧ್ಯತೆಗಳಿವೆ.