ಸಚಿವ ಪ್ರೀಯಾಂಕ ಖರ್ಗೆ (Priyank kharge) ಮನೆಗೆ ಇಂದು ಬಿಜೆಪಿ (Bjp) ಮುತ್ತಿಗೆ ಹಾಕಲಿರುವ ಹಿನ್ನೆಲೆ ಪ್ರೀಯಾಂಕ ಖರ್ಗೆ ಮನೆಗೆ ಖಾಕಿ ಸರ್ಪಗಾವಲು ನಿಯೋಜಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (By vijayendra) ನೇತೃತ್ವದಲ್ಲಿ ಘಟಾನುಘಟಿ ನಾಯಕರಿಂದ ಪ್ರತಿಭಟನೆಗೆ ಪ್ಲಾನ್ ಮಾಡಿರುವುದರಿಂದ ಭದ್ರತೆ ನಿಯೋಜಿಸಲಾಗಿದೆ.

ಜಗತ್ ವೃತ್ತದಿಂದ ಡಿಸಿ ಕಚೇರಿ ಮಾರ್ಗಾವಗಿ ಪ್ರೀಯಾಂಕ ಖರ್ಗೆ ಮನೆಗೆ ವರೆಗೆ ಪ್ರತಿಭಟನಾ ರ್ಯಾಲಿ ಕೈಗೊಳ್ಳಲು ಬಿಜೆಪಿ ಪ್ಲಾನ್ ರೂಪಿಸಿದೆ.ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ಆಗಮಿಸಿ ಪ್ರೀಯಾಂಕ ಖರ್ಗೆ ಮನೆಗೆ ಮುತ್ತಿಗೆ ಹಾಕಲು ಮುಂದಾಗಲಿದ್ದಾರೆ.
ಪ್ರತಿಭಟನೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸುಮಾರು 1000 ಕ್ಕೂ ಅಧಿಕ ಪೊಲೀಸ್, ಹೋಮ್ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಿದ್ದು, ಜೊತೆಗೆ ಕೆಎಸ್ ಆರ್ ಪಿ, ಸಿಎಆರ್ ತುಕಡಿಗಳ ನಿಯೋಜನೆ ಆಗಿದೆ.

ಬಿಜೆಪಿ ಬೃಹತ್ ಪ್ರತಿಭಟನೆ ಹಿನ್ನೆಲೆ ಪ್ರತಿಭಟನೆ ಸಾಗುವ ಮಾರ್ಗದ ವಾಹನ ಸಂಚಾರ ಡೈವರ್ಟ್ ಮಾಡಲಾಗಿದೆ. ಪ್ರೀಯಾಂಕ ಖರ್ಗೆ ಅವರ ಲುಂಬಿನಿ ಮನೆ ಸುತ್ತಲೂ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದ್ದು,ಮನೆ ಸುತ್ತಲೂ ಬ್ಯಾರಿಕೆಡ್ ಗಳನ್ನ ಹಾಕಿರೋ ಖಾಕಿ ಪಡೆ ಸನ್ನದ್ದಗವಾಗಿದೆ.