ವಿಧಾನ ಪರಿಷತ್ ಚುನಾವಣೆಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬುಧವಾರ ಪ್ರಕಟಿಸಿದೆ.
ನವದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಶವ್ ಪ್ರಸಾದ್ ಮೌರ್ಯ, ಚೌಧರಿ ಭೂಪೇಂದ್ರ ಸಿಂಗ್, ದಯಾಶಂಕರ್ ಮಿಶ್ರಾ ದಯಾಲು, ಜೆಪಿಎಸ್ ರಾಥೋಡ್, ನರೇಂದ್ರ ಕಶ್ಯಪ್, ಜಸ್ವಂತ್ ಸೈನಿ, ಡ್ಯಾನಿಶ್ ಆಜಾದ್ ಅನ್ಸಾರಿ, ಬನ್ವಾರಿ ಲಾಲ್ ದೋಹ್ರೆ ಮತ್ತು ಮುಖೇಶ್ ಶರ್ಮಾ ಹೆಸರುಗಳಿವೆ.
ವಿಧಾನ ಪರಿಷತ್ ಸದಸ್ಯರಾಗಿ ಉಪ ಮುಖ್ಯಮಂತ್ರಿ ಮೌರ್ಯ ಮತ್ತು ಪಂಚಾಯತ್ ರಾಜ್ ಸಚಿವ ಚೌಧರಿ ಭೂಪೇಂದ್ರ ಸಿಂಗ್ ಅವರ ಅಧಿಕಾರಾವಧಿ ಜುಲೈ 6 ರಂದು ಕೊನೆಗೊಳ್ಳುತ್ತದೆ.

ಆದರೆ ಸಹಕಾರ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಜೆ ಪಿ ಎಸ್ ರಾಥೋಡ್, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ರಾಜ್ಯ ಸಚಿವ ನರೇಂದ್ರ ಕಶ್ಯಪ್, ಆಯುಷ್ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ದಯಾಶಂಕರ್ ಮಿಶ್ರಾ ದಯಾಳು, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಜಸ್ವಂತ್ ಸೈನಿ ಮತ್ತು ಸಚಿವ ಅಲ್ಪಸಂಖ್ಯಾತರ ಕಲ್ಯಾಣ ರಾಜ್ಯ ಡ್ಯಾನಿಶ್ ಆಜಾದ್ ಅನ್ಸಾರಿ ಎರಡೂ ಸದನಗಳ ಸದಸ್ಯರಲ್ಲ ಹಾಗಾಗಿ ಅವರಿಗೆ ಟಿಕೇಟ್ ನೀಡಲಾಗಿದೆ.







