ರಾಜ್ಯದ ಬಹುಕೋಟಿ ಬಿಟ್ ಕಾಯಿನ್ (Bit coin) ಹಗರಣ ಮತ್ತೊಂದು ಸ್ಪೋಟಕ ತಿರುವು ಪಡೆದುಕೊಳ್ತಿದೆ. ಈ ಸಂಬಂಧ ಎಸ್ಐಟಿ (SIT) ತನಿಖೆ ವೇಳೆ ಮತ್ತಷ್ಟು ಸತ್ಯ ಬಹಿರಂಗವಾಗಿದೆ. ಶ್ರೀತಿ ಸಿಸಿಬಿ (CCB) ಕಸ್ಟಡಿಯಲ್ಲಿ ಇದ್ದಾಗ ನಡೆದ ಹಗರಣದ ಒಂದು ಭಾಗ ಸದ್ಯ ಈ ತನಿಖೆಯಿಂದ ಬೆಳಕಿಗೆ ಬಂದಿದೆ.
ಕೇವಲ ಸಿಸಿಬಿ (CCB) ಕಸ್ಟಡಿ ಮಾತ್ರವಲ್ಲದೇ ಜೈಲಿನಲ್ಲಿಯೂ ಸಹ ಹಗರಣ ನಡೆದಿತ್ತು ಎನ್ನಲಾಗ್ತಿದೆ. ಈ ಪ್ರಕರಣದ ಕಿಂಗ್ ಪಿನ್ ಶ್ರೀಕಿ (King pin shreeki) ಬಳಸಿಕೊಂಡು ಅಧಿಕಾರಿಗಳು ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ ಅನ್ನೋ ಮಾಹಿತಿ ಇದೀಗ ತನಿಖೆಯಿಂದ ಲಭ್ಯವಾಗಿದೆ.
ಶ್ರೀಕಿ ಜೈಲಿನಲ್ಲಿದ್ದ ಸಂದರ್ಭದಲ್ಲಿ, ಅಲ್ಲಿನ ಜೈಲು ಅಧಿಕಾರಿ ಮತ್ತು ವಾರ್ಡನ್ಗಳು ಶ್ರೀಕಿಯನ್ನ ಬಳಸಿಕೊಂಡು ಭರ್ಜರಿಯಾಗಿ ಬಿಟ್ ಕಾಯಿನ್ ಲೂಟಿ ಮಾಡಿದ್ದಾರೆ ಅಂತ ಎಸ್ಐಟಿ(SIT) ತನಿಖಾ ತಂಡದ ಮೂಲಗಳಿಂದ ತಿಳಿದುಬಂದಿದ್ದು, ಸದ್ಯ ತಮ್ಮ ಬಂಡವಾಳ ಬಯಲಾಗುತ್ತಿದ್ದಂತೆ ಅಧಿಕಾರಿಗಳು ಎಸ್ಕೆಪ್ ಆಗಿದ್ದಾರೆ.