ಬೆಂಗಳೂರು: ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ Gold Smuggling) ಕೇಸ್‌ಗೆ ಸಂಬಂಧಿಸಿದಂತೆ ಇಂದು ಆರ್ಥಿಕ ಅಪರಾಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ..

ನಟಿಗೆ ಜಡ್ಜ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.. ನಟಿ ರನ್ಯಾರನ್ನ ಅಧಿಕಾರಿಗಳಿಂದ ಆಗಿದೀಯಾ ಎಂದು ಕೇಳಿದಾಗ ನಟಿ ಗಳಗಳನೇ ಅತ್ತಿದ್ದಾರೆ. ನನಗೆ ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ.. ಫಿಸಿಕಲಿ ಇಲ್ಲ, ವರ್ಬಲಿ ಟಾರ್ಚರ್ ಆಗ್ತಿದೆ ಅಂತಾ ಜಡ್ಜ್ ಬಳಿ ತನ್ನ ನೋವು ಹೇಳಿಕೊಂಡಿದ್ದಾಳೆ..

ಇಂದು ಕಸ್ಟಡಿ ಅವಧಿ ಮುಗಿದ ಕಾರಣ ಆಕೆಯನ್ನು ಕೋರ್ಟ್ ಮುಂದೆ ಡಿಆರ್‌ಐ ಅಧಿಕಾರಿಗಳು ಹಾಜರುಪಡಿಸಿದ್ರು. ಈ ವೇಳೆ, ನನಗೆ ಟಾರ್ಚರ್ ಕೊಡ್ತಿದ್ದಾರೆ ಎಂದು ರನ್ಯಾ ಕಣ್ಣೀರಿಟ್ರು.. ಆದ್ರೆ, ಇದನ್ನು ತನಿಖಾಧಿಕಾರಿಗಳು ಅಲ್ಲಗಳೆದ್ರು. ಪ್ರಶ್ನೆ ಕೇಳೋದು ಕಿರುಕುಳ ಹೇಗಾಗುತ್ತೆ ಎಂದು ಪ್ರಶ್ನೆ ಮಾಡಿದ್ರು. ಕಡೆಗೆ, ರನ್ಯಾ ತನಿಖೆಗೆ ಅಸಹಕಾರ ಕೊಡ್ತಿದ್ದಾರೆ ಎಂದು ತೀರ್ಮಾನಿಸಿದ ನ್ಯಾಯಾಧೀಶರು, ಆಕೆಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ರು.

ರನ್ಯಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಡಿಆರ್‌ಐಗೆ ಸೂಚಿಸಿದ್ರು. ಈ ನಡ್ವೆ, ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಸ್ಟಾರ್ ಹೋಟೆಲ್ ಮಾಲಿಕರೊಬ್ಬರ ಮೊಮ್ಮಗ ತರುಣ್‌ರಾಜ್‌ನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದು, ಐದು ದಿನ ಕಸ್ಟಡಿಗೆ ಪಡೆದಿದ್ದಾರೆ. ಈತ ರನ್ಯಾ ರಾವ್‌ಗೆ ತರುಣ್ ಗೆಳೆಯ ಎನ್ನಲಾಗಿದೆ.

ರನ್ಯಾ ರಾವ್ ಗೆಳೆಯನಾಗಿರುವ ತರುಣ್ ರಾಜ್‌ನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ.. ದುಬೈನಲ್ಲಿ ರನ್ಯಾ ಜೊತೆ ತರುಣ್ ರಾಜ್ ಇದ್ದ ಬಗ್ಗೆ ಡಿಆರ್‌ಐಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸ್ಮಗ್ಲಿಂಗ್ ಬಗ್ಗೆ ತರುಣ್‌ರಾಜ್‌ನನ್ನು ಡಿಆರ್‌ಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಕಳೆದ ಎರಡು ದಿನಗಳಿಂದ ತರುಣ್ ರಾಜ್‌ಗೆ ಫುಲ್ ಡ್ರಿಲ್ ಮಾಡಿದ್ದಾರೆ.
ರುಣ್ ರಾಜ್ ದುಬೈ ಅಲ್ಲಿ ಕೂಡ ಆರ್ಥಿಕ ವ್ಯವಹಾರ ಹೊಂದಿದ್ದ. ರನ್ಯಾ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ತರುಣ್ ರಾಜ್‌ನನ್ನು ಬಂಧಿಸಿದ ಡಿಆರ್‌ಐ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ತರುಣ್ ರಾಜ್‌ನನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಮಾ.15ರವರಗೆ ತರುಣ್ ರಾಜ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ತರುಣ್ ರಾಜ್ ದುಬೈ ಅಲ್ಲಿ ಕೂಡ ಆರ್ಥಿಕ ವ್ಯವಹಾರ ಹೊಂದಿದ್ದ. ರನ್ಯಾ ಜೊತೆ ನಿಕಟ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ತರುಣ್ ರಾಜ್‌ನನ್ನು ಬಂಧಿಸಿದ ಡಿಆರ್‌ಐ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ತರುಣ್ ರಾಜ್‌ನನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಮಾ.15ರವರಗೆ ತರುಣ್ ರಾಜ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.