ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಈಗಾಗಲೇ ಆರಂಭವಾಗಿದ್ದು, ಸದ್ಯ ಬಿಜೆಪಿ 38, ಜೆಡಿಯು 35, ಆರ್‌ಜೆಡಿ 33, ಕಾಂಗ್ರೆಸ್ 9, ಜನ್ ಸುರಾಜ್ 2 ಇತರೆ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಸರ್ಕಾರ ರಚನೆ ಆಗುವ ಬಗ್ಗೆ ವರದಿ ನೀಡಿದ್ದು, ಸದ್ಯದ ಫಲಿತಾಂಶದ ಪ್ರಕಾರವು ಎನ್‌ಡಿಎ ಮೈತ್ರಿಕೂಟವು ಬಹುತೇಕ ಮುನ್ನಡೆ ಸಾಧಿಸುತ್ತಿದೆ.

ಇನ್ನು ಒಂದು ವೇಳೆ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟವು ಗೆಲುವು ಸಾಧಿಸಿದರೂ ಕೂಡ ಸಂಭ್ರಮಾಚರಣೆಗೆ ಬಿಜೆಪಿ ಬ್ರೇಕ್ ಹಾಕಿದೆ. ಸೋಮವಾರ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಹತ್ತಕ್ಕೂ ಅಮಾಯಕರು ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡದಿರಲು ಬಿಜೆಪಿ ನಿರ್ಧರಿಸಿದೆ.
ಈಗಾಗಲೇ ಬಿಹಾರ ರಾಜ್ಯದಾದ್ಯಂತ 38 ಜಿಲ್ಲೆಗಳ 46 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ.












