ಪಾಟ್ನಾ: ಬಿಹಾರ ಪೊಲೀಸರು ಸಾರ್ವಜನಿಕರನ್ನು ಮನಬಂದಂತೆ ನಡೆಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ವೃತ್ತಿಪರವಲ್ಲದ ಬಿಹಾರ ಪೊಲೀಸರ ವರ್ತನೆಯ ಮತ್ತೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಿಹಾರ ಪೊಲೀಸ್ ಅಧಿಕಾರಿಯೊಬ್ಬ ಕೊಂಚವೂ ಮಾನವೀಯತೆ ಇಲ್ಲದೇ ಗರ್ಭಿಣಿ ಮಹಿಳೆಯನ್ನು ಪಾಟ್ನಾದ ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಪೊಲೀಸರ ವರ್ತನೆ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಭಾರತೀಯ ಯುವ ಕಾಂಗ್ರೆಸ್ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಬಿಹಾರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿಜಿ ಅವರು 10,000 ರೂಪಾಯಿಗೆ ಮತಗಳ ಜೊತೆಗೆ ತಾಯಂದಿರು ಮತ್ತು ಸಹೋದರಿಯರ ಜೀವವನ್ನು ಕೂಡ ಖರೀದಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ये पटना की मरीन ड्राइव की तस्वीरें है,
डबल इंजन सरकार की पुलिस गर्भवती महिला को सड़कों पर गाड़ी से रौंद रही है,
मोदीजी ने ₹10,000 में वोट के साथ माँ – बहनों की जिंदगी भी खरीद ली है? pic.twitter.com/COy8Skh4Fx
— Indian Youth Congress (@IYC) November 18, 2025
ಆಗಿದ್ದೇನು..?
ಬಿಹಾರದ ಪಾಟ್ನಾದ ಮೆರೈನ್ ಡ್ರೈವ್‌ನಲ್ಲಿ ಈ ಘಟನೆ ನಡೆದಿದೆ. ಚಿಕ್ಕ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗರ್ಭಿಣಿ ಮಹಿಳೆ ತಮ್ಮ ತಪ್ಪು ಒಪ್ಪಿಕೊಂಡು ಪ್ರಕರಣವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಬೇಡಿಕೊಂಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಪೊಲೀಸರು ಆಕೆಯನ್ನು ಬೈಕ್ ಸಮೇತ ಎಳೆದೊಯ್ಯುತ್ತಿದ್ದಾರೆ. ಆಕೆ ಗರ್ಭಿಣಿ ಎನ್ನುವುದನ್ನು ಪರಿಗಣಿಸದೇ ಪೊಲೀಸರು ಬೈಕ್‌ನ ಸಮೇತ ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ರೀತಿ ಅಮಾನವೀಯವಾಗಿ ನಡೆದುಕೊಂಡಿರುವ ಪೊಲೀಸ್ ಅಧಿಕಾರಿಗೆ ಶಿಕ್ಷೆಯಾಗಬೇಕು ಹಾಗೂ ಬಿಹಾರ ಪೊಲೀಸರಿಗೆ ವೃತ್ತಿ ನೈತಿಕತೆಯ ಬಗ್ಗೆ ಸರ್ಕಾರವೇ ಪಾಠ ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.












