ಬಿಗ್ ಬಾಸ್ ಕನ್ನಡ ಸೀಸನ್ 11, 12ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಬಿಗ್ ಬಾಸ್ ನ ಈ ವಾರದ ಎಲ್ಲಾ ಟಾಸ್ಕ್ ಗಳು ಕೂಡ ವಿಭಿನ್ನವಾಗಿದ್ದು. ಎರಡು ತಂಡಗಳನ್ನ ವಿಭಜಿಸಿದ್ದಾರೆ , ಹಾಗೂ ಈ ಎರಡು ತಂಡಗಳ ನಡುವೆ ಕಾಂಪಿಟೇಶನ್ ಕೂಡ ಜೋರಾಗಿದೆ. ಇಲ್ಲಿ ತನಕ ಆದ ಎಲ್ಲ ಟಾಸ್ಕ್ ಗಳಲ್ಲೂ ಕೂಡ ತ್ರಿವಿಕ್ರಮ್ ತಂಡ ಗೆದ್ದು ,ರಜತ್ ಅವರ ತಂಡದ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ.
ಇನ್ನು ಪ್ರತಿದಿನಕ್ಕೆ ಹೋಲಿಸಿದರೆ ನೆನ್ನೆ ಬಿಗ್ ಬಾಸ್ ಮನೆಯಲ್ಲಿ ಜಗಳ ಜೋರಾಗಿಯೇ ನಡೆದಿದೆ. ನಿನ್ನೆ ಬಿಗ್ ಬಾಸ್ ನೀಡಿದ ಕೊನೆಯ ಟಾಸ್ಕಲ್ಲಿ ತ್ರಿ ವಿಕ್ರಂ ತಂಡದವರನ್ನ ಐಶ್ವರ್ಯ ಉಸ್ತುವಾರಿ ಮಾಡಿದ್ರೆ ರಜತ್ ತಂಡದವರನ್ನ ಚೈತ್ರ ಅವರು ಉಸ್ತುವಾರಿ ಮಾಡ್ತಾ ಇರ್ತಾರೆ. ಈ ಸಂದರ್ಭದಲ್ಲಿ ಚೈತ್ರ ಅವರು ಪದೇಪದೇ ಪಾಸ್ ನೀಡ್ತಾ ಇರ್ತಾರೆ.
ಹಾಗೂ ರೂಲ್ಸ್ ಬುಕ್ಕಲ್ಲಿ ಇಲ್ಲದಿರುವ ರೂಲ್ಸ್ ಹಾಗೂ ಐಶ್ವರ್ಯ ಮತ್ತು ಚೈತ್ರ ಅವರು ಮಾತನಾಡಿಕೊಳ್ಳದಿರುವಂತ ರೂಲ್ಸ್ ಅನ್ನ ತಂದು ಪಾಸ್ ನೀಡ್ತಾ ಇರ್ತಾರೆ. ಇದಕ್ಕೆ ಕೋಪಗೊಂಡ ರಜತ್ ಜೋರಾಗೆ ರೇಗಾಡುತ್ತಾರೆ. ರಜತ್ ರೇಗಾಡಿದ ಕಾರಣಕ್ಕೆ ಚೈತ್ರ ಧನರಾಜ ಆಡುತ್ತಿದ್ದ ಆಟಕ್ಕೆ ಪಾಸ್ ಅನ್ನು ನೀಡುತ್ತಾರೆ. ಈ ಪಾಸ್ ಅನ್ನುವಂತದ್ದು ನಿಮ್ಮ ಆಟದಲ್ಲಿ ಅತಿಯಾಗಿದ್ದು ಚೈತ್ರ ಮಾಡಿದ್ದು ಸರಿಯಲ್ಲ ಎಂಬುದು ಕಂಟೆಸ್ಟೆಂಟ್ಗಳ ಅಭಿಪ್ರಾಯ ಮಾತ್ರವಲ್ಲದೆ ಪ್ರೇಕ್ಷಕರ ಅಭಿಪ್ರಾಯ ಕೂಡ ಆಗಿದೆ.
ತಮ್ಮ ಸ್ವಾರ್ಥಕ್ಕಾಗಿ ಅಥವಾ ತಮ್ಮ ತಂಡದವರನ್ನ ಗೆಲ್ಲಿಸುವುದಕ್ಕಾಗಿ ಚೈತ್ರ ಅವರು ಉಸ್ತುವಾರಿಯನ್ನ ಕಳಪೆಯಾಗಿ ಮಾಡಿದ್ರು ಎಂಬುದು ಜನರ ಮಾತಾಗಿದೆ. ಬಳಿಕ ಈ ಟಾಸ್ಕ್ ಮುಗಿದು ತ್ರಿ ವಿಕ್ರಮ್ ಅವರ ತಂಡ ಗೆಲ್ಲುತ್ತದೆ. ಅದಾದ ನಂತರವೂ ಕೂಡ ಇವರಿಬ್ಬರ ನಡುವೆ ಜಗಳ ಜೋರಾಗಿಯೇ ಆಗುತ್ತದೆ ಹಾಗೂ ತಮಗೆ ಬೇಡದಿರುವ ವಿಚಾರಕ್ಕೆ ಮಂಜು ಎಂಟ್ರಿಕೊಟ್ಟು ರಜತ್ ಅವರ ಬಳಿ ಜೋರಾಗಿ ಜಗಳವಾಡುತ್ತಾರೆ. ನಿನ್ನೆಯ ಕೊನೆಯ ಟಾಸ್ಕ್ ನಲ್ಲಿ ತ್ರಿವಿಕ್ರಮ್ ಅವ್ರ ತಂಡ ಗೆಲ್ಲುವುದಕ್ಕೆ ಚೈತ್ರ ನೀಡಿದ ಪಾಸ್ ಕಾರಣ.
ಇನ್ನು ಬಿಗ್ ಬಾಸ್ ಇಂದಿನ ಪ್ರೋಮೊ ಅವರ ಬಿದ್ದಿದ್ದು ಇವತ್ತು ಕೂಡ ಇದೇ ವಿಚಾರಕ್ಕಾಗಿ ಬಿಗ್ ಬಾಸ್ ಮನೆಯಲ್ಲಿ ಜೋರು ಜಗನವಾಗುತ್ತದೆ. ತಪ್ಪು ಮಾಡದಿದ್ದರೂ ಕೂಡ ಚೈತ್ರಾ ಅವರು ಬಾಸ್ ನೀಡುವುದು ರಜತ್ ತಂಡಕ್ಕೆ ಇರಿಟೇಟ್ ಆಗುತ್ತದೆ. ಧನ್ರಾಜ್ ಹಾಗು ಚೈತ್ರ ನಡುವೆ ಮಾತಿನ ಚಕಮಕಿ ಜೋರಾಗೆ ನಡೆಯುತ್ತದೆ ಹಾಗೂ ಇಷ್ಟು ದಿನ ಹನುಮಂತ ಕೂಡ ಚೈತ್ರ ಬಗ್ಗೆ ಬೇಸರವನ್ನ ವ್ಯಕ್ತಪಡಿಸಿ ಜೋರು ಧ್ವನಿಯಲ್ಲಿ ಮಾತನಾಡುತ್ತಾರೆ.
ಕೊನೆಯಲ್ಲಿ ನೀಡಿದ ಟಾಸ್ಕ್ ನ ಬಿಗ್ ಬಾಸ್ ರದ್ದು ಮಾಡುತ್ತಾರೆ. ಒಟ್ಟಿನಲ್ಲಿ ಹೇಳೋದಾದ್ರೆ ನಿನ್ನಯ ಟಾಸ್ಕ್ ನಲ್ಲಿ ಕೂಡ ಚೈತ್ರ ಅವರ ಉಸ್ತುವಾರಿ ಕಳಪೆಯಾಗಿದ್ದು ಇವತ್ತು ಕೂಡ ಟಾಸ್ಕ್ ರದ್ದಾಗುವುದಕ್ಕೆ ಚೈತ್ರ ಅವರೇ ಕಾರಣ ಎಂಬುದು ಕಮೆಂಟ್ ಸೆಕ್ಷನಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟು ಮಾತು ಅಲ್ಲದೆ ಚೈತ್ರ ಅವರ ಉಸ್ತುವಾರಿಯ ಬಗ್ಗೆ ಕಿಚ್ಚ ಅವರು ಈ ವಾರ ಕ್ಲಾಸ್ ತೆಗೆದುಕೊಳ್ಳಲೇಬೇಕು ಎಂಬುದು ಜನರ ಮಾತಾಗಿದೆ.