ಬಿಗ್ ಬಾಸ್ ಕನ್ನಡ ಸೀಸನ್ 11 ,12ನೇ ವಾರಕ್ಕೆ ಕಾಲಿಟ್ಟಿದೆ. ಸದ್ಯಾ ಬಿಗ್ ಬಾಸ್ ಮನೆಯಲ್ಲಿ 10 ಸ್ಪರ್ಧಿಗಳಿದ್ದು ಕಾಂಪಿಟೇಶನ್ ಕೂಡ ಜೋರಾಗಿ ನಡಿತಾ ಇದೆ. ಇನ್ನು ನಿನ್ನೆ ಬಿಗ್ ಬಾಸ್ ಮನೆಯಿಂದ ನಾಮಿನೇಟ್ ಆದ ಕಂಟೆಸ್ಟೆಂಟ್ಗಳಲ್ಲಿ ಶಿಶಿರ್ ಹೊರ ಬಂದಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಒಂದು ಮಹತ್ವದ ಬೆಳವಣಿಗ ನಡೆದಿದ್ದು , ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಅದು ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ . ಹಾಗಾಗಿ ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಅವರು ದಿಢೀರನೆ ಹೊರಟಿದ್ದಾರೆ.
ಆದ್ರೆ ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಅವರು ನಿಜವಾಗ್ಲೂ ಹೊರ ಹೋಗಿದ್ದಾರ ಅಥವಾ ಸೀಕ್ರೆಟ್ ರೂಮಲ್ಲಿದ್ದಾರಾ ಎಂಬ ಕನ್ಫ್ಯೂಷನ್ ಪ್ರೇಕ್ಷಕರಲ್ಲಿ ಮನೆಮಾಡಿದೆ. ಕಾರಣ ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ಗೋಲ್ಡ್ ಸುರೇಶ್ ಅವರ ಬಗ್ಗೆ ಯಾವುದೇ ರೀತಿಯ ಮಾಹಿತಿ ಹೊರಬಂದಿಲ್ಲ.
ಇನ್ನು ಬಿಗ್ ಬಾಸ್ ಇಂದಿನ ಪ್ರೊಮೋ ಅವರ ಬರೆದಿದ್ದು ಗೌತಮಿ ಹಾಗೂ ರಜತ್ ನಡುವೆ ಜಗಳ ಜೋರಾಗಿದೆ. ಬಿಗ್ ಬಾಸ್ ಎಲ್ಲಾ ಸ್ಪರ್ಧಿಗಳಿಗೂ ಕೂಡ 60 ನಿಮಿಷದ ಒಳಗೆ ಮನೆಯನ್ನ ಸ್ವಚ್ಛಗೊಳಿಸಬೇಕು ಎಂಬ ಕೆಲಸವನ್ನ ಹೇಳಿರುತ್ತಾರೆ. ಎಲ್ಲಾ ಸ್ಪರ್ಧಿಗಳು ಕೂಡ ಕೆಲಸವನ್ನು ಮಾಡ್ತಾ ಇರ್ತಾರೆ ಆದ್ರೆ ರಜತ್ ಅವರು ಮಾತ್ರ ಸೋಫಾ ಮೇಲೆ ಕುಳಿತಿರ್ತಾರೆ.
ಇದನ್ನು ನೋಡಿ ಸಿಟ್ಟಿಗೆದ್ದ ಗೌತಮಿ ಡೈಲಾಗ್ ಹೊಡಿ, ಕೂತ್ಕೊ, ಒಂದಷ್ಟು ಹಣ್ಣು ತಿನ್ನು ಇಷ್ಟೇ ಆಗಿದೆ ಎನ್ನುತ್ತಾರೆ. ಇದನ್ನು ಕೇಳಿಸಿಕೊಂಡ ರಜತ್ ಕೋಪಗೊಂಡು ಇದೇನು ನಿನ್ನ ಮನೆ ಅಂದುಕೊಂಡಿದ್ಯಾ, ಡ್ರಾಮಾ ಮಾಡಿಕೊಂಡೆ 12 ವಾರಗಳನ್ನ ಕಳೆದುಬಿಟ್ಟೆ ಎಂಬ ಮಾತುಗಳನ್ನ ಆಡ್ತಾರೆ ಇದಕ್ಕೆ ನೀವು ಡೈಲಾಗ್ ಹೊಡ್ಕೊಂಡೆ ಇಷ್ಟು ದಿನ ಕಳೆದಿರಿ ಎಂಬ ಮಾತುಗಳನ್ನ ಆಡ್ತಾರೆ. ನಿನಗೆ ಆಟ ಆಡೋದಕ್ಕೆ ಇನ್ನೊಬ್ಬರ ಸಪೋರ್ಟ್ ಬೇಕು ಒಬ್ಬಳೇ ಆಟ ಆಡಿ ತೋರಿಸು ನೋಡೋಣ ಎಂಬ ಸವಾಲನ್ನು ಹಾಕುತ್ತಾರೆ. ಬಿಗ್ ಬಾಸ್ ಮನೆಯ ಬಕೇಟೆ ಇನ್ನೊಂದು ಬಕೆಟ್ ನ ಹಿಡಿದುಕೊಂಡಿರುವುದನ್ನ ಇದೇ ಫಸ್ಟ್ ಬಿಗ್ ಬಾಸ್ ಮನೆಯಲ್ಲಿ ನೋಡ್ತಾ ಇರೋದು ಎಂಬ ಮಾತುಗಳನ್ನು ಕೂಡ ಆಡ್ತಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆಯುತ್ತದೇ.
ಇಷ್ಟು ದಿನ ನನಗೆ ಕೋಪ ಕಮ್ಮಿ ನನಗೆ ಯಾರ ಮೇಲೂ ಸಿಟ್ಟಿಲ್ಲ ಎಂಬ ಮಾತುಗಳನ್ನ ನಿನ್ನೆ ಗೌತಮಿ ಕಿಚ್ಚ ಅವರ ಮುಂದೆ ಕೂಡ ಹೇಳಿದ್ರು, ಆದ್ರೆ ಇವತ್ತು ಗೌತಮಿಯ ವರಸೆ ಕಂಪ್ಲೀಟ್ ಚೇಂಜ್ ಆಗಿದ್ದು , ಸ್ಪರ್ಧಿಗಳಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಶಾಕ್ ನೀಡಿದೆ.