ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಈ ವಾರ ಯಾರಪ್ಪ ಎಲಿಮಿನೇಟ್ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈ ವಾರ ಇವರು ಎಲಿಮಿನೇಟ್ ಆಗಬಹುದು ಎಂಬ ಚರ್ಚೆಗಳು ಕೂಡ ನಡಿತಾ ಇತ್ತು ಕೆಲವರ ಹೆಸರು ಜೋರಾಗಿ ಓಡ್ತಾ ಇತ್ತು. ಆದರೆ ಇದ್ದಕ್ಕಿದ್ದ ಹಾಗೆ ಬಿಗ್ ಬಾಸ್ ಮನೆಯಲ್ಲಿ ಒಂದು ಬೆಳವಣಿಗೆಯಾಗಿದೆ.
ಹೌದು ಬಿಗ್ ಬಾಸ್ ನ ಹೊಸ ಪ್ರೊಮೋ ಒಂದು ಹೊರ ಬಿದ್ದಿದ್ದು ಇವತ್ತಿನ ಪ್ರೋಮೋದಲ್ಲಿ ಬಿಗ್ ಬಾಸ್ ಮನೆ ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಅದು ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಕೇಳ್ತಾ ಇದ್ದಂತೆ ಗೋಲ್ಡ್ ಸುರೇಶ್ ತಕ್ಷಣ ಬಿಗ್ ಬಾಸ್ ಮನೆಯಿಂದ ಹೊರಟಿದ್ದಾರೆ. ಹಾಗೂ ಬಿಗ್ ಬಾಸ್ ನ ಇತರ ಸ್ಪರ್ಧಿಗಳು ಗೋಲ್ಡ್ ಸುರೇಶ್ ಅವರಿಗೆ ಸಮಾಧಾನ ಮಾಡಿದ್ದಾರೆ. ಇನ್ನು ಗೋಲ್ಡ್ ಸುರೇಶ್ ಇವರ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗಿದ್ದರು. ಆದ್ರೆ ಈ ಒಂದು ಪರಿಸ್ಥಿತಿ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳನ್ನು ಕೂಡ ಆತಂಕ ಉಂಟು ಮಾಡಿದೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ವಾರ ನಾಮಿನೇಟ್ ಆದವರಲ್ಲಿ ಯಾರಪ್ಪ ಎಲಿಮಿನೇಟ್ ಹಾಕ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು ಶಶಿರ್ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಹೆಚ್ಚು ಹರಿದಾಡುತ್ತಿದೆ.