ಬಿಗ್ ಬಾಸ್ ಮನೆಯಲ್ಲಿ ಜಗಳ ಅನ್ನೋದು ತುಂಬಾನೆ ಕಾಮನ್ ಆದಂತಹ ವಿಚಾರ ಆದರೆ ಹೊಡೆದಾಟ ಆಡೋಕೆ ಸ್ಪರ್ಧಿಗಳಿಗೆ ಭಯವಿದೆ ಕಾರಣ ಬಿಗ್ ಬಾಸ್ ಮನೆಯಿಂದ ಹೊರ ಕಳಿಸುತ್ತಾರೆ. ಈ ಹಿಂದೆ ವಿಚಾರವೊಂದಕ್ಕೆ ಜಗಳ ಆಡಿ ಹೊಡೆದಾಡಿದಂತಹ ಲಾಯರ್ ಜಗದೀಶ್ ಹಾಗೂ ರಂಜಿತ್ ಇವ್ರು ಮನೆಯಿಂದ ಹೊರಗಿದ್ದಾರೆ.
ಕಳೆದೆರಡುವ ದಿನಗಳಿಂದ ಬಿಗ್ ಬಾಸ್ ಧನರಾಜ್ ಹಾಗೂ ರಜತ್ ನಡುವೆ ಮಾತಿನ ಚಕಮಕಿ ಜೋರಾಾಗೆ ನಡಿತಾ ಇದೆ ಜೊತೆಗೆ ರಜತ್ ಧನ್ರಾಜ್ ಅವರ ಕೈಯನ್ನು ಮುರಿತಿನಿ ಅಂತ ಹೋಗಿದ್ದರು. ಆ ಟೈಮಲ್ಲಿ ಎಲ್ಲರೂ ಕೂಡ ಅವರಿಬ್ಬರ ಜಗಳವನ್ನ ಬಿಡಿಸಿದ್ರು.
ಇನ್ನೂ ಬಿಗ್ ಬಾಸ್ ಮನೆಯಲ್ಲಿ ಶುಕ್ರವಾರ ಬಂತು ಅಂದ್ರೆ ಕ್ಯಾಪ್ಟನ್ ಸಿ ಕಳಪೆ ಹಾಗೂ ಉತ್ತಮವನ್ನು ನೀಡುವುದು ಸಹಜ ಈ ಸಂದರ್ಭದಲ್ಲಿ ಧನರಾಜ್ ಅವರು ರಜತ್ ಅವರಿಗೆ ಕಳಪೆಯನ್ನ ಕೊಟ್ಟು ಕಾರಣಗಳನ್ನ ಹೇಳುತ್ತಾರೆ. ಕೈಕಾಲು ಮುರೀತಿನಿ ಅಂತಾರೆ, ಬೆದರಿಕೆ ಹಾಕೋ ಥರಾ ಅವರ ಮಾತುಗಳು ಇರುತ್ತದೆ ಎಂದಿದ್ದಾರೆ.
ಇದಕ್ಕೆ ಕೋಪಗೊಂಡ ರಜತ್ ನೀನು ನನ್ನ ಮುಖವನ್ನು ಟಚ್ ಮಾಡಿದಾಗ ಅದು, ಸಾಫ್ಟ್ ಆಗಿರಲಿಲ್ಲಾ ಎಂದಿದ್ದಾರೆ. ಇದಕ್ಕೆ ಧನರಾಜ್ ನನಗೆ ಗೊತ್ತು, ನಾನು ಎಷ್ಟು ಸಾಫ್ಟ್ ಆಗಿ ಮಾಡಿದ್ದೀನಿ ಎಂದು ಅಂತಾ ಹೇಳ್ತಾರೆ.ಬಳಿಕ ನಾನೇನು ನಿನ್ನೆ ಮೊನ್ನೆ ಹುಟ್ಟಿ ಬಿಗ್ ಬಾಸ್ ಗೆ ಬಂದಿಲ್ಲ. ನನಗೆ ಬರ್ತಿರೋ ಸಿಟ್ಟಿಗೆ ನಿನ್ನ ಮುಖ-ಮೂತಿ ಒಡೆದು ಹಾಕಿಯೇ ಆಚೆ ಹೋಗಬೇಕಾಗಿತ್ತು ಎನ್ನುತ್ತಾರೆ ರಜತ್.
ಅದಕ್ಕೆ ಕೋಪಿಸಿಕೊಂಡ ಅದೇನೋ ಮುಕ-ಮೂತಿ ಒಡೆಯುತ್ತೀನಿ ಅಂದ್ರಲ್ಲ, ಹೊಡೆಯಿರಿ ನೋಡೋಣ ಎನ್ನುತ್ತಾರೆ ಧನರಾಜ್. ಅದಕ್ಕೆ ನಿಂಗೆ ತಾಖತ್ತಿದ್ದರೆ ನನ್ನ ಮುಟ್ಟಿ ತೋರಿಸೋ ಎಂದು ಧನು ಮೇಲೆ ರಜತ್ ಮತ್ತಷ್ಟು ಕೋಪಗೊಂಡಿದ್ದಾರೆ. ಅದಕ್ಕೆ ಧನರಾಜ್ ಹೊಡೆಯುತ್ತೀರಾ.. ಹೊಡೆಯಿರಿ.. ಎಂದಿದ್ದಾರೆ .ಧನರಾಜ್ ಮಾತಿಗೆ ಗರಂ ಆದ ರಜತ್, ಕೈಮಾಡಲು ಹೋಗಿದ್ದಾರೆ, ಜಗಳ ಜೋರಾಗಿಯೆ ನಡೆದಿದೆ ಹಾಗೂ ಉಳಿದ ಸ್ಪರ್ಧಿಗಳು ಇವರ ತಡೆದಿದ್ದರೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ರಜತ್ ಹಾಗೂ ಧನರಾಜ್ ಅವರ ಜಗಳದಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎಂಬುದನ್ನ ಇವತ್ತಿನ ಎಪಿಸೋಡ್ ನೋಡಿ ತಿಳಿದುಕೊಳ್ಳಬೇಕಿದೆ