ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್ ಆಡಿ ಗೆದ್ದು ತ್ರಿ ವಿಕ್ರಂ ಹಾಗೂ ಐಶ್ವರ್ಯ ಅವರು ಕ್ಯಾಪ್ಟನ್ ಆಗಿದ್ರು.. ಹಾಗೂ ಆ ವಾರದ ಟಾಸ್ಕ್ ಕೂಡ ಎರಡು ಗುಂಪುಗಳ ನಡುವೆ ನಡೆದಿತ್ತು ಒಂದು ಗುಂಪಿನ ನಾಯಕ ತ್ರಿವಿಕ್ರಂ ಹಾಗೂ ಇನ್ನೊಂದು ಗುಂಪಿನ ನಾಯಕಿ ಐಶ್ವರ್ಯ ಅವರಾಗಿದ್ದರು. ಹಾಗೂ ಎಲ್ಲಾ ಟಾಸ್ಕ್ ಚೆನ್ನಾಗಿ ಆಡಿ ಐಶ್ವರ್ಯ ಅವರ ತಂಡ ಗೆದ್ದಿದ್ದಾರೆ.

ಇಂದು ಬಿಗ್ ಬಾಸ್ , ಎಲ್ಲಾ ಕಂಟೆಸ್ಟೆಂಟ್ ಗಳಿಗೂ ಐಶ್ವರ್ಯ ಮತ್ತು ತ್ರಿ ವಿಕ್ರಂ ಇವರಿಬ್ಬರಲ್ಲಿ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲದವರು ಯಾರು ಎಂಬ ಪ್ರಶ್ನೆಯನ್ನು ಕೇಳಿದಾಗ, ಒಂದಿಷ್ಟು ಜನ ತ್ರಿ ವಿಕ್ರಂ ಹೆಸರನ್ನ ಆಯ್ಕೆ ಮಾಡಿದರೆ ಇನ್ನು ಕೆಲವರು ಐಶ್ವರ್ಯ ಅವರ ಹೆಸರನ್ನು ಕೂಡ ಆಯ್ಕೆ ಮಾಡಿಕೊಳ್ಳುತ್ತಾರೆ.

ಸದ್ಯಾ ಬಿಗ್ ಬಾಸ್ ನ ಇಂದಿನ ಪ್ರೊಮೋ ರಿಲೀಸ್ ಆಗಿದ್ದು, ಕ್ಯಾಪ್ಟನ್ ಆಗಲು ತ್ರಿವಿಕ್ರಮ್ ಯಾಕೆ ಅರ್ಹರಲ್ಲ ಎಂಬ ವಿಚಾರವನ್ನ ಕೆಲವು ಕಂಟೆಸ್ಟೆಂಟ್ಗಳು ಮಾತನಾಡುತ್ತಾರೆ. ಅದರಲ್ಲಿ ಮೋಕ್ಷಿತ ಕ್ಯಾಪ್ಟನ್ ಆಗಿರುವವರು ಎಲ್ಲರನ್ನು ಒಂದೇ ರೀತಿ ಟ್ರೀಟ್ ಮಾಡಬೇಕು ಆದರೆ ತ್ರಿವಿಕ್ರಮ್ ಹಾಗೆ ಮಾಡಿಲ್ಲ ಎಂಬ ಮಾತುಗಳನ್ನಾಡಿ, ತ್ರಿ ವಿಕ್ರಂ ಫೋಟೋವನ್ನು ಹರಿದು ಕಸದ ಬುಟ್ಟಿಗೆ ಹಾಕ್ತಾರೆ. ಇದರ ನಡುವೆ ತ್ರಿ ವಿಕ್ರಂ ಹಾಗೂ ಮಂಜು ಅವರಿಗೂ ಕೂಡ ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆಯುತ್ತದೆ.

ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಹೆಚ್ಚಾಗ್ತಾ ಇದ್ದು, ಮನೆ ಮಂದಿಯಲ್ಲಿ ಮನಸ್ತಾಪಗಳು ಕೂಡ ಎದುರಾಗ್ತಾ ಇದೆ. ಅದ್ರಲ್ಲೂ ತ್ರಿ ವಿಕ್ರಂ ಹಾಗೂ ಮೋಕ್ಷಿತ ನಡುವಿನ ಜಗಳ ಪ್ರತಿದಿನವೂ ಕೂಡ ಜೋರಾಗುತ್ತಿದೆ..











