ಬಿಗ್ ಬಾಸ್ ಮನೆಯಲ್ಲಿ ಇದೀಗ ಒಟ್ಟು 12 ಸ್ಪರ್ಧಿಗಳಿದ್ದು 11ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಪ್ರತಿವಾರವೂ ಸ್ಪರ್ಧಿಗಳಿಗೆ ಬಿಗ್ ಬಾಸ್ ವಿಭಿನ್ನವಾದ ಆಟವನ್ನು ನೀಡುತ್ತಾರೆ ಈ ವಾರದ ಟಾಸ್ಕ್ ಯಾವ ರೀತಿ ಇರುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಇನ್ನು ಬಿಗ್ ಬಾಸ್ ಇಂದಿನ ಪ್ರೋಮೋ ಹೊರ ಬಿದ್ದಿದ್ದು ಕಂಟೆಸ್ಟೆಂಟ್ ಗಳಿಗೆ ಕೊಂಚ ಶಾಕ್ ಆಗಿದೆ ಜೊತೆಗೆ ಖುಷಿ ಕೂಡ ಆಗಿದೆ .ಹೌದು ಬಿಗ್ ಬಾಸ್ ಮನೆಗೆ ಒಬ್ಬರಲ್ಲ ಇಬ್ಬರಲ್ಲ ಒಂದಿಷ್ಟು ಗೆಸ್ಟ್ ಗಳು ಆಗಮಿಸಿದ್ದಾರೆ.
ಈ ಗೆಸ್ಟ್ಗಳು ಮತ್ತ್ಯಾರು ಅಲ್ಲ ಬಿಗ್ ಬಾಸ್ ಕನ್ನಡ ಸೀಸನ್ ಹತ್ತರಲ್ಲಿ ತಮ್ಮದೇ ರೀತಿಯ ಪಾಠವನ್ನು ಆಡಿ ಪ್ರೇಕ್ಷಕರ ಮನ ಗೆದ್ದ ಹಳೆಯ ಕಂಟೆಸ್ಟೆಂಟ್ಗಳು. ಹೌದು ತನಿಶಾ ಕುಪ್ಪಂದ ,ಪ್ರತಾಪ್ ,ವರ್ತೂರ್ ಸಂತೋಷ್ ,ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಸೀನಿಯರ್ ಜೊತೆಗೆ ಜೂನಿಯರ್ಸ್ ಕಂಟೆಸ್ಟೆಂಟ್ಗಳ ಮಜಾ ಮಾಡಿದ್ದಾರೆ ಹಾಡು ,ಡ್ಯಾನ್ಸ್ ,ಮಾತುಕತೆ ಎಲ್ಲವೂ ಸೂಪರ್. ಈ ನಡುವೆ ನಿನ್ನೆ ಎಪಿಸೋಡ್ ನಲ್ಲಿ ಕನ್ವೇಷನ್ ರೂಮ್ನಲ್ಲಿ ಕುಳಿತಿದ್ದ ಚೈತ್ರ ಕುಂದಾಪುರ ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತಾರೆ ಒಳ ಬರ್ತಾರೆ ಎಂಬ ಕನ್ಫ್ಯೂಷನ್ ಕಂಟೆಸ್ಟೆಂಟ್ ಗಳಿಗೆ ಜೊತೆಗೆ ಪ್ರೇಕ್ಷಕರಿಗೂ ಕೂಡ ಇತ್ತು ಆದರೆ ಇವತ್ತಿನ ಪ್ರೋಮೋದಲ್ಲಿ ಚೈತ್ರ ಅವರು ಕೂಡ ಸೀನಿಯರ್ ಕಂಟೆಸ್ಟೆಂಟ್ಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಹಾಗಾದ್ರೆ ನಿನ್ನೆ ಯಾವುದೇ ಎಲಿಮಿನೇಷನ್ ಕೂಡ ಇಲ್ಲ ವೋಟಿಂಗ್ ಲೈನ್ ತೆರೆದಿಲ್ಲ ಎಂಬುದು ಒಂದು ರೀತಿಯ ಕ್ಲೂ ಸಿಕ್ಕಿತ್ತು. ಚೈತ್ರ ಅವರು ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಾಗ ಕಂಟೆಸ್ಟೆಂಟ್ಗಳು ಯಾವ ರೀತಿ ಸ್ವಾಗತಿಸಿದ್ರು ಅವರ ಎಕ್ಸ್ಪ್ರೆಶನ್ ಹೇಗಿತ್ತು ಎಂಬುದನ್ನ ನೋಡಲು ಇವತ್ತಿನ ಎಪಿಸೋಡ್ ನ ತಪ್ಪದೇ ವೀಕ್ಷಿಸಿ.