ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು 11ನೇ ವಾರಕ್ಕೆ ಕಾಲಿಡಲಿದೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು 12 ಸ್ಪರ್ಧಿಗಳಿದ್ದು,ಅದರಲ್ಲಿ ಎಂಟು ಸ್ಪರ್ಧಿಗಳು ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಮೋಕ್ಷಿತ, ಚೈತ್ರ, ಭವ್ಯ ಗೌಡ, ಗೋಲ್ಡ್ ಸುರೇಶ್, ಗೌತಮಿ, ಮಂಜು ರಜತ್ ಹಾಗೂ ಐಶ್ವರ್ಯ ಈ ವಾರ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ.
ಆದರೆ ನಿನ್ನೆಯ ಎಪಿಸೋಡ್ ನಲ್ಲಿ ಕಿಚ್ಚ ಅವರು ರಜತ್ ಹಾಗೂ ಗೌತಮಿ ಅವರನ್ನ ಸೇಫ್ ಮಾಡಿದ್ದಾರೆ. ಇನ್ನುಳಿದ ಆರು ಸ್ಟ್ರಾಂಗ್ ಕಂಟೆಸ್ಟೆಂಟ್ಗಳಲ್ಲಿ ಯಾರಪ್ಪ ಎಲಿಮಿನೇಟ್ ಆಗ್ತರೆ ಎಂಬ ಪ್ರಶ್ನೆ ಒಂದುಡೇ ಮೂಡಿದರೆ, ಗೋಲ್ಡ್ ಸುರೇಶ್ ಅವರ ಹೆಸರು ಮತ್ತೊಂದೆಡೆ ಕೇಳ್ತಾ ಇದೆ.
ಇದೆಲ್ಲದರ ನಡುವೆ ಈ ವಾರ ಬಿಗ್ ಬಾಸ್ ಪ್ರೇಕ್ಷಕರಿಗಾಗಿ ವೋಟಿಂಗ್ ಲೈನ್ ತೆರೆದೆ ಇಲ್ಲ,ಇದು ಒಂದು ಟ್ವಿಸ್ಟ್ ಅಂತನೇ ಹೇಳಬಹುದು. ಆದರೆ ನಿನ್ನೆ ಕಿಚ್ಚಾ ಅವರು ಕಂಟೆಸ್ಟೆಂಟ್ ಗಳಿಗೆ ಕ್ಲಾಸ್ ತೆಗೆದುಕೊಳ್ಳುವಾಗ ನಾಳೆ ಯಾರು ಹೊರ ಹೋಗ್ತಾರೆ ನೋಡೋಣ ಎಂಬ ಮಾತುಗಳನ್ನು ಕೂಡ ಅಡಿದ್ರು.
ಇದೆಲ್ಲ ನೋಡ್ತಾ ಇದ್ರೆ ಈ ವಾರ ಎಲಿಮಿನೇಷನ್ ಇಲ್ವಾ ಅಥವಾ ಎಲಿಮಿನೇಟ್ ಮಾಡುವ ರೀತಿ ಮಾಡಿ ಸೀಕ್ರೆಟ್ ರೂಮ್ ಗೆ ಕಳಿಸ್ತಾರ ಎಂಬ ಪ್ರಶ್ನೆ ಕೂಡ ಸಾಕಷ್ಟು ಜನರಲ್ಲಿ ಮೂಡಿದೆ. ಇನ್ನು ನಿನ್ನ ಬಿಗ್ ಬಾಸ್ ಎಪಿಸೋಡ್ ನಲ್ಲಿ ಕಿಚ್ಚ ತ್ರಿವಿಕ್ರಮ್ ಹಾಗೂ ಗೌತಮಿ ಅವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹಾಗೂ ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ, ಅದರ ಬಗ್ಗೆಯೂ ಕೂಡ ಚರ್ಚೆ ನಡೀತಾನೆ ಇದೆ ಒಂದೆಡೆ ರಜತ್ ಅವರ ಹೆಸರು ಕೇಳಿ ಬರ್ತಾ ಇದ್ರೆ ಮತ್ತೊಂದೆಡೆ ಧನರಾಜ್ ಅವರಿಗೆ ಸಿಗಬೇಕು ಎಂಬ ಮಾತುಗಳು ಕೂಡ ಇವೆ.
ಒಟ್ಟಿನಲ್ಲಿ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬೇಕು ಅಂದ್ರೆ ಇವತ್ತಿನ ಬಿಗ್ ಬಾಸ್ ಎಪಿಸೋಡ್ ನ ತಪ್ಪದೆ ನೋಡಬೇಕು.