ಇಂದಿನ ಬಿಗ್ ಬಾಸ್ ಎಪಿಸೋಡ್ ನಲ್ಲಿ ಪ್ರತಿಯೊಬ್ಬ ಕಂಟೆಸ್ಟೆಂಟ್ ಕೂಡ ತಮ್ಮ ನೋವಿನ ದಿನಗಳನ್ನು ಬಿಗ್ ಬಾಸ್ ಬಳಿ ಹೇಳಿಕೊಂಡು ಕಣ್ಣೀರನ್ನು ಹಾಕುತ್ತಾರೆ.

ಹೌದು ಬಿಗ್ ಬಾಸ್ ಇಂದು ಎಲ್ಲಾ ಕಂಟೆಸ್ಟೆಂಟ್ಗಳು ಕೂಡ ತಮ್ಮ ನೋವಿನ ದಿನಗಳನ್ನು ಹಾಗೂ ಯಾರ ಜೊತೆಯೂ ಹಂಚಿಕೊಂಡಿರದ ವಿಚಾರವನ್ನು ಹೇಳಿಕೊಳ್ಳಬಹುದು ಎಂದು ಕನ್ಫ್ಯೂಷನ್ ರೂಮ್ಗೆ ಕರೆದು ಒಬ್ಬೊಬ್ಬ ಕಂಟೆಸ್ಟೆಂಟ್ ಬಳಿ ಕೇಳಿದಾಗ ,ಪ್ರತಿಯೊಬ್ಬರು ಕೂಡ ತಮ್ಮ ಒಂದೊಂದು ಕಥೆಯನ್ನು ಹೇಳಿಕೊಂಡು ಕಣ್ಣೀರನ್ನು ಇಡುತ್ತಾರೆ.
ಇವತ್ತಿನ ಪ್ರೊಮೋ ಹೊರಬಿದ್ದಿದ್ದು, ಆ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರು ತಮ್ಮ ಕಷ್ಟದ ದಿನಗಳಲ್ಲಿ ಬೇರೆಯವರ ಮನೆಗೆ ಹೋಗಿ ಮುಸರೆ ತೊಳೆದಿದ್ದೆ ಎಂಬ ವಿಚಾರ ಹೇಳಿಕೊಂಡು ಕಣ್ಣೀರನ್ನು ಹೇಳುತ್ತಾರೆ.

ಹಾಗೂ ಉಗ್ರ ಮಂಜು ಅವರು ನನ್ನ ಜೀವನದ ಒಂದು ಕೆಟ್ಟ ಪರಿಸ್ಥಿತಿಯಲ್ಲಿ, ನನ್ನನ್ನು ಮಾತನಾಡಿಸುವರು ಯಾರು ಇರಲಿಲ್ಲ, ಊಟ ತಿಂಡಿ ವಿಚಾರಿಸುವವರು ಇರಲಿಲ್ಲ, ಕೆಟ್ಟ ಚಟಕ್ಕೆ ಒಳಗಾಗಿದ್ದೆ ಎಂದು ಬೇಸರವನ್ನು ವ್ಯಕ್ತಪಡಿಸಿ ಅಳತೊಡಗುತ್ತಾರೆ.

ಐಶ್ವರ್ಯ ಸಿಂಧೂಗಿ ನನ್ನ ತಾಯಿಯ ಕೊನೆಯ ದಿನಗಳಲ್ಲಿ, ಅವರ ಜೊತೆ ಸರಿಯಾಗಿ ಮಾತನಾಡಲಿಲ್ಲ. ಅದು ಎಂದಿಗೂ ನನ್ನನ್ನು ಇಂದಿಗೂ ಕಾಡುತ್ತದೆ ಎಂಬ ವಿಚಾರವನ್ನ ವ್ಯಕ್ತಪಡಿಸುತ್ತಾರೆ.

ಹೀಗೆ ಪ್ರತಿಯೊಬ್ಬರೂ ಕೂಡ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಾ ಬೇಸರವನ್ನು ಹೊರಹಾಕಿದ್ದಾರೆ.