ಬಿಗ್ ಬಾಸ್ ಸ್ಪರ್ಧಿಗಳು ಒಟ್ಟು ೬೦ ದಿನಗಳನ್ನು ಪೂರೈಸಿದ್ದಾರೆ..ಇನ್ನು ನಿನ್ನೆ ಬಿಗ್ ಬಾಸ್ , ಸ್ಪರ್ಧಿಗಳನ್ನು ಎರಡು ತಂಡಗಳಾಗಿ ವಿಭಜಿಸಿದ್ದಾರೆ. ಒಂದು ತಂಡದ ಕ್ಯಾಪ್ಟನ್ ಗೋಲ್ಡ್ ಸುರೇಶ್ ಆಗಿದ್ರೆ ಮತ್ತೊಂದು ತಂಡದ ಕ್ಯಾಪ್ಟನ್ ಧನರಾಜ್ ಅವರಾಗಿರ್ತಾರೆ ,ಹಾಗೂ ಎರಡು ತಂಡಗಳು ಕೂಡ ಒಂದೊಂದು ನ್ಯೂಸ್ ಚಾನೆಲ್ ಗಳಾಗಿವೆ..ಒಂದು ಚಾನೆಲ್ ನ ಆಂಕರ್ ಐಶ್ವರ್ಯ ಆದ್ರೆ, ಮತ್ತೊಂದು ಚಾನೆಲ್ ನ ಆಂಕರ್ ಚೈತ್ರಾ ಆಗಿದ್ದಾರೆ.
ಎರಡು ನ್ಯೂಸ್ ಚಾನೆಲ್ಗಳಿಗೂ ಸುದ್ದಿಯನ್ನು ಅಂದ್ರೆ ಮುಖ್ಯಾಂಶಗಳನ್ನ ನೀಡಲು ಹೇಳ್ತಾರೆ,ಅದು ಕೂಡ ಬಿಗ್ ಬಾಸ್ ಮನೆಯ ಮುಖ್ಯಾಂಶಗಳು, ಈ ಬ್ರೇಕಿಂಗ್ ನ್ಯೂಸ್ ಅಥವಾ ಮುಖ್ಯಾಂಶಗಳನ್ನು ಹೇಳುವಾಗ ಅಪೋಸಿಟ್ ತಂಡದವರ ವಿಚಾರವನ್ನು ತೆಗೆದುಕೊಂಡು ಸಕತ್ತಾಗಿ ರೋಸ್ಟ್ ಮಾಡ್ತಾರೆ. ಈ ಟಾಸ್ಕ್ ನಲ್ಲಿ ಗೋಲ್ಡ್ ಸುರೇಶ್ ಅವರ ತಂಡ ಹೆಚ್ಚು ಪಾಯಿಂಟ್ಸ್ ಗಳನ್ನ ಪಡೆದು ವಿನ್ ಆಗ್ತಾರೆ.
ಇನ್ನು ಎರಡನೇ ಟಾಸ್ಕ್ ಅಂದ್ರೆ ಬಿಗ್ ಬಾಸ್ ಎರಡು ತಂಡಗಳಿಗೂ ಕೂಡ ಅಡುಗೆಯನ್ನು ಮಾಡಲು ಹೇಳುತ್ತಾರೆ ಆದರೆ ಎರಡು ತಂಡದ ಕ್ಯಾಪ್ಟನ್ಗಳು ಕೂಡ ಅಪೋಸಿಟ್ ತಂಡದಲ್ಲಿ ಯಾರು ಅಡುಗೆ ಮಾಡಬೇಕು ಎಂದು ಆಯ್ಕೆ ಮಾಡುತ್ತಾರೆ ಒಂದು ತಂಡದಿಂದ ಹನುಮಂತು ಹಾಗೂ ಮತ್ತೊಂದು ತಂಡದಿಂದ ತ್ರಿವಿಕ್ರಮ ಅವರು ಅಡುಗೆ ಮಾಡಲು ರೆಡಿ ಆಗ್ತಾರೆ. ಇವರಿಬ್ಬರಿಗೂ ಕೂಡ ಹೆಡ್ಫೋನ್ಸ್ ಅನ್ನ ಹಾಕಲಾಗಿರುತ್ತದೆ ಹಾಗೂ ಅವರ ತಂಡದ ಇತರೆ ಕಂಟೆಸ್ಟೆಂಟ್ಗಳು ಏನು ಅಡಿಗೆ ಮಾಡಬೇಕು ಎಂಬುದನ್ನು ಗೈಡ್ ಮಾಡಬೇಕು.
ಈ ಅಡುಗೆ ಟಾಸ್ಕ್ ನಲ್ಲೂ ಕೂಡ ತ್ರಿವಿಕ್ರಮೌರು ಚೆನ್ನಾಗಿ ಅಡುಗೆ ಮಾಡಿದ್ದಾರೆ ಎಂದು ಗೋಲ್ಡ್ ಸುರೇಶ್ ಅವರ ತಂಡ ಅತಿ ಹೆಚ್ಚು ಅಂಕಗಳನ್ನ ಗಳಿಸಿ ವಿನ್ ಆಗ್ತಾರೆ. ಮತ್ತೊಂದು ವಿಚಾರ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಯಾವುದೇ ರೀತಿಯ ಜಗಳಗಳು ಕಲಹ ಅಥವಾ ಮನಸ್ತಾಪ ಆಗಿಲ್ಲ ಎಲ್ಲವೂ ಕೂಡ ಆರಾಮಾಗಿ ಆಟವನ್ನು ಆಡಿದ್ದಾರೆ.
ಇನ್ನು ಬಿಗ್ ಬಾಸ್ ಇಂದಿನ ಪ್ರೊಮೋ ಒಂದು ಹೊರ ಬಿದ್ದಿದ್ದು , ಇವತ್ತು ಎಸ್ ಆರ್ ನೋ ರೌಂಡ್ ನಡೆಯಲಿದೆ, ಇಲ್ಲಿ ಎರಡು ತಂಡಗಳು ಕೂಡ ತಮ್ಮ ಆಪೋಸಿಟ್ ತಂಡದವರಿಗೆ ಮೂರು ಸವಾಲುಗಳನ್ನು ನೀಡಬೇಕು. ಮೊದಲಿಗೆ ಧನರಾಜ್ ತಂಡದವರು ಗೋಲ್ಡ್ ಸುರೇಶ್ ತಂಡದವರಿಗೆ ಸವಾಲನ್ನು ನೀಡುತ್ತಾರೆ. ಅದರಲ್ಲಿ ಐಶ್ವರ್ಯ ಅವರು ಮೂರು ಹಾಗಲಕಾಯಿಯನ್ನು ತಿನ್ನಬೇಕು ಎಂದು ಹೇಳ್ತಾರೆ .ಹಾಗೂ ಗೌತಮಿ ಅವರಿಗೆ ಮೆಣಸಿನಕಾಯಿಯನ್ನು ತಿನ್ನಬೇಕು ಎಂದು ಹೇಳ್ತಾರೆ. ಇದಕ್ಕೆ ಇವರಿಬ್ಬರು ಒಪ್ಪಿಕೊಂಡು ತಿಂತಾರೆ.
ಹಾಗೂ ಗೋಲ್ಡ್ ಸುರೇಶ್ ತಂಡ ಧನರಾಜ್ ಅವರ ತಂಡಕ್ಕೆ ಸವಾಲನ ನೀಡುವಾಗ ಮಂಜು ರಜತ್ ಅವರಿಗೆ ಕೂದಲನ್ನ ಬೋಳಿಸಬೇಕು ಎಂದು ಸವಾಲನ್ನು ನೀಡುತ್ತಾರೆ. ಇದಕ್ಕೆ ರಜತ್ ಒಪ್ಪಿಕೊಂಡು ಕೂದಲನ್ನ ಬೋಳಿಸ್ತಾರೆ. ಈ ಟಾಸ್ಕ್ ನ ನಡುವೆ ತ್ರಿ ವಿಕ್ರಂ ಹಾಗೂ ಚೈತ್ರ ಅವರಿಗೆ ಜೋರು ಜಗಳವಾಗಿ ಏಕವಚನದಲ್ಲಿ ಪದ ಬಳಕೆಯಾಗುತ್ತದೆ.
ಒಟ್ಟಿನಲ್ಲಿ ಇಂದಿನ ಬಿಗ್ ಬಾಸ್ ನಲ್ಲಿ ಜಗಳ ಜೋರಾಗಿದ್ದು ಯಾರ ನಡುವೆ ಮನಸ್ತಾಪಗಳು ಹೆಚ್ಚಾಗುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.