ಕನ್ನಡ ಬಿಗ್ ಬಾಸ್ ಸೀಸನ್ 11 ಸದ್ಯ 10ನೇ ವಾರಕ್ಕೆ ಕಾಲಿಟ್ಟಿದ್ದು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಎಲ್ಲವೂ ಕೂಡ ಅದ್ಭುತವಾಗಿಯೇ ನಡೆಯಿತು ಸಂಡೆ ಅನ್ನೋದಕ್ಕಿಂತ ಫನ್ ಡೇ ಅಂತ ಹೇಳಿದ್ರೆ ತಪ್ಪಾಗಲ್ಲ. ಅದರಲ್ಲೂ ಸುದೀಪ್ ಅವರು ಕಂಟೆಸ್ಟೆಂಟ್ಗಳಿಗೆ ನೀಡಿದಂತಹ ಆಕ್ಟಿವಿಟೀಸ್ ಗಳು ಅಬ್ಬಬ್ಬಾ ಪ್ರೇಕ್ಷಕರನ್ನ ನಕ್ಕು ನಗಿಸಿದೆ.
ಇನ್ನು ಎಲ್ಲರಿಗೂ ಗೊತ್ತಿರುವ ಹಾಗೆ ಸಂಡೆಯ ಎಪಿಸೋಡ್ ನಲ್ಲಿ ಎಲಿಮಿನೇಷನ್ ಇದ್ದೇ ಇರುತ್ತದೆ. ನಿನ್ನೆಯ ಬಿಗ್ ಬಾಸ್ ಪ್ರೊಮೊದಲ್ಲಿ ಇಂದು ಶೋಭಿತ ಅವರು ಮನೆಗೆ ಹೋಗಲು ಕಣ್ಣೀರಾಗ್ತಾಯಿದ್ರು ಎಂಬ ವಿಚಾರ ತಿಳಿದು ಬಂದಿತ್ತು. ಆದರೆ ಮತ್ತೊಂದು ಕಡೆ ಚೈತ್ರ ಅಥವಾ ಐಶ್ವರ್ಯ ನಡುವೆ ಯಾರಾದರೂ ಒಬ್ಬರು ಹೋಗಬಹುದು. ಅದರಲ್ಲೂ ಐಶ್ವರ್ಯ ಅವರು ಹೊರಹೋಗ್ತಾರೆ ಎಂಬ ಚರ್ಚೆಗಳು ಹೆಚ್ಚು ನಡಿತಾ ಇತ್ತು.
ಆದರೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ ನಾಮಿನೇಟ್ ಆದ ಕಂಟೆಸ್ಟೆಂಟ್ಗಳಲ್ಲಿ ಒಬ್ಬೊಬ್ಬರಾಗಿ ಸೇವ್ ಆಗ್ತಾ ಬರ್ತಾರೆ. ಕೊನೆಯಲ್ಲಿ ಶಿಶಿರ್, ಚೈತ್ರ ,ಐಶ್ವರ್ಯ ಹಾಗೂ ಶೋಭಿತ ಉಳಿದುಕೊಂಡಾಗ ಸುದೀಪ್ ಅವರು ಎಲ್ಲಾ ಕಂಟೆಂಟ್ ಗಳ ಬಳಿ ಈ ವಾರ ಯಾರು ಮನೆಯಿಂದ ಹೊರ ಹೋಗ್ಬೇಕು ಎಂದು ಕೇಳಿದಾಗ ಹೆಚ್ಚು ಜನ ಸ್ಪರ್ಧಿಗಳು ಶೋಭಾ ಅವರ ಹೆಸರನ್ನು ಹೇಳ್ತಾರೆ..
ಆದರೆ ಶೋಭಿತ ಅವರಿಗೆ ಹೆಚ್ಚು ವೋಟ್ ಇದ್ದಿದ್ರಿಂದ ಅವರು ಸೇಫ್ ಆಗ್ತಾರೆ. ಸೇವ್ ಆಗ್ತಾಇದ್ದಂತೆ ಶೋಭಾ ಅವರು ಕಣ್ಣೀರು ಹಾಕ್ತಾ ನಾನು ಬಿಗ್ ಬಾಸ್ ಮನೆಯಲ್ಲಿ ಇರಲ್ಲ ಸರ್, ನನಗೆ ಇರೋದಕ್ಕೆ ಆಗ್ತಾ ಇಲ್ಲ ನಾನು ತುಂಬಾ ಲೋ ಆಗಿದ್ದೇನೆ , ಹೆಲ್ತ್ ಸರಿ ಇಲ್ಲ ಎಂಬ ಕಾರಣವನ್ನು ಹೇಳ್ತಾರೆ.. ಆದ್ರೆ ಸುದೀಪ್ ಅವರು ಶೋಭಾ ಅವರಿಗೆ ಸಮಾಧಾನ ಮಾಡಿ ಶೋಭಾ ವರು ಹೋಗೋದಿಲ್ಲ ಎಂಬುದಾಗಿ ಒಪ್ಪಿಕೊಳ್ಳುತ್ತಾರೆ.
ನಂತರ ಉಳಿದ ಮೂರು ಗಂಟೆಗಳಲ್ಲಿ ಚೈತ್ರ ಅವರು ಸೇಫ್ ಆಗ್ತಾರೆ ಕೊನೆಯಲ್ಲಿ ಐಶ್ವರ್ಯ ಹಾಗೂ ಶಿಶಿರ್ ಉಳಿದುಕೊಂಡಾಗ ಮತ್ತೆ ಸುದೀಪ್ ಎಲ್ಲರ ಬಳಿ ಯಾರು ಈ ವಾರ ಉಳಿದುಕೊಳ್ಳಬೇಕು ಎಂಬ ಪ್ರಶ್ನೆಯನ್ನು ಕೇಳಿದಾಗ ಹೆಚ್ಚು ಜನ ಶಿಶಿರವರ ಹೆಸರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಶೋಭಾ ಅವರನ್ನು ಕೇಳಿದಾಗ ಸರ್ ನಾನು ನಿಮ್ಮ ಜೊತೆ ಮಾತನಾಡಬೇಕು ಎಂದು ಶೋಭಾ ಅವರು ಕೇಳಿಕೊಳ್ಳುತ್ತಾರೆ. ಆದರೆ ಸುದೀಪ್ ಒಪ್ಪಿಕೊಳ್ಳುವುದಿಲ್ಲ.
ನಂತರ ಶೋಭಾ ಅವರು ಪೋಸ್ಟ್ ಮಾಡಿ ಸರ್ ಮಾತಾಡ್ಲೆ ಬೇಕು ಎಂದು ಕೇಳಿದಾಗ ಸುದೀಪ್ ಅವರು ಚಾನ್ಸನ್ನ ನೀಡ್ತಾರೆ ಆ ಸಂದರ್ಭದಲ್ಲಿ ಶೋಭಾ ಅವರು ನಾನು ಮನೆಯಿಂದ ಹೊರ ಹೋಗ್ತೀನಿ ಸರ್ ನನಗೆ ಇರೋದಕ್ಕೆ ಆಗ್ತಾ ಇಲ್ಲ ಎಂದು ಕೈ ಮುಗಿದು ಕಣ್ಣೀರನ್ನು ಹಾಕುತ್ತಾರೆ.
ಇದಕ್ಕೆ ಸುದೀಪ್ ಅವರು ಕೊಂಚ ಕೋಪಗೊಳ್ತಾರೆ ಜೊತೆಗೆ ನಿಮ್ಮ ಹೆಲ್ತ್ ಸರಿ ಇಲ್ಲವೆಂದರೆ ನಾವು ಫೋರ್ಸ್ ಮಾಡುವುದಕ್ಕೆ ಆಗಲ್ಲ, ನಿಮ್ಮ ಪರವಾಗಿ ನಿಮಗೆ ವೋಟ್ ಮಾಡಿದಂತಹ ಜನರಿಗೆ ನಾನು ಸಾರಿನ ಕೇಳ್ತೀನಿ ಎಂದು ಸುದೀಪ್ ಶೋಭಾ ಅವರು ಮನೆಯಿಂದ ಹೋರಾ ಹೋಗಬಹುದು ಎಂದು ಐಶ್ವರ್ಯ ಮತ್ತು ಶಿಶಿರವರಿಗೆ ಕಂಗ್ರಾಜುಲೇಷನ್ಸ್ ನೀವು ಸೇಫ್ ಆಗಿದ್ದೀರಾ ಎಂದು ಹೇಳುತ್ತಾರೆ.
ಆದ್ರೆ ಬಿಗ್ ಬಾಸ್ ಇಂದಿನ ಪ್ರೊಮೋ ಅವರ ಬಿದ್ದಿದ್ದು ಶೋಭಾ ಅವರು ಗಾರ್ಡನ್ ಏರಿಯಾದಲ್ಲಿ ನಿಂತುಕೊಂಡು ಬಿಗ್ ಬಾಸ್ ಹಾಗೂ ನನಗೆ ವೋಟ್ ಮಾಡಿದಂತ ಪ್ರತಿಯೊಬ್ಬರಿಗೂ ಸಾರೀ ನನಗೆ ಈ ಮನೆಯಲ್ಲಿ ಇರೋದಕ್ಕೆ ಆಗ್ತಾ ಇಲ್ಲ ಎಂದು ಹೇಳುತ್ತಾರೆ ಮತ್ತೆ ಕಣ್ಣೀರ್ ಹಾಕ್ತಾ ನನಗೆ ಹೋಗುವುದಕ್ಕೆ ಇಷ್ಟ ಇಲ್ಲ ಎಂಬ ಮಾತುಗಳನ್ನು ಕೂಡ ಆಡ್ತಾರೆ.
ಒಟ್ಟಿನಲ್ಲಿ ಶೋಭಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತಾರೆ ಅಥವಾ ಇವರ ಉಳಿದುಕೊಳ್ಳುತ್ತಾರೆ ಏನು ಎಂಬುದನ್ನ ಇವತ್ತಿನ ಎಪಿಸೋಡ್ ನೋಡಿ ತಿಳಿದುಕೊಳ್ಳಬೇಕಿದೆ.