ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ಗಳು 50 ದಿನಗಳನ್ನು ಕಂಪ್ಲೀಟ್ ಮಾಡಿ 51ನೇ ದಿನಕ್ಕೆ ಕಾಲಿಟ್ಟಿದ್ದಾರೆ. ಜಗಳ, ಖುಷಿ, ಸಂತಸ, ಅಳು ,ನೋವು ಇದೆಲ್ಲದರ ನಡುವೆ ಹಾಫ್ ಸೆಂಚುರಿಯನ್ನ ಬಾರಿಸಿದ ಸಂತಸ ಸ್ಪರ್ಧಿಗಳಲ್ಲಿ ಮನೆ ಮಾಡಿದೆ.
ಬಿಗ್ ಬಾಸ್ ಮನೆಯಲ್ಲಿ ಜಗಳ ಅನ್ನುವಂತದ್ದು ತುಂಬಾನೆ ಕಾಮನ್ ಆಗಿದೆ. ಜಗಳ ಇಲ್ಲದ ದಿನ ಅಥವಾ ಎಪಿಸೋಡನ್ನ ನೋಡಿದ್ದು ಬಹಳಾನೇ ಕಮ್ಮಿ. ಆದರೆ ಇಷ್ಟು ದಿನಕ್ಕೆ ಹೋಲಿಸಿದರೆ ಇವತ್ತಾಳಿದ ಜಗಳ ಅಳತೆಗೆ ಮೀರಿದ್ದು. ಈ ಜಗಳ ಆಗಿದ್ದು ವೈಟ್ ಕಾರ್ಡ್ ಎಂಟ್ರಿ ರಜತ್ ಹಾಗೂ ಗೋಲ್ಡ್ ಸುರೇಶ್ ನಡುವೆ.
ಹೌದು ಬಿಗ್ ಬಾಸ್ ನ ಇಂದಿನ ಪ್ರೋಮೋ ಹೊರಬಿದ್ದಿದು ,ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದ್ದಾರೆ. ಅದುವೆ ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ಇದು ಬಿಗ್ ಬಾಸ್ ಆಟದ ನಿಯಮವಾಗಿತ್ತು.
ಈ ಟಾಸ್ಕ್ ಆಡುವಾಗ ಮಂಜು ಹಾಗೂ ಗೋಲ್ಡ್ ಸುರೇಶ್ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಇವರ ಮಾತು ನ ನಡುವೆ ರಜತ್ ಎಂಟ್ರಿ ಆಗಿ ಗೋಲ್ಡ್ ಸುರೇಶ್ ಮೇಲೆ ಇಗ್ಗ ಮಗ ಪದಗಳನ್ನ ಬಳಸುತ್ತಾರೆ. ಈ ಪದಗಳನ್ನು ಕೇಳಿಸಿಕೊಂಡ ಗೋಲ್ಡ್ ಸುರೇಶ್ ಬೇಸರಗೊಂಡು ನಾನಿನ್ನು ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ ಇವನು ನನ್ನ ಅಪ್ಪನ ಇಂಥ ಮಾತುಗಳನ್ನ ಆಡೋದಕ್ಕೆ ಬಿಗ್ ಬಾಸ್ ಬಾಗಿಲನ್ನ ಓಪನ್ ಮಾಡಿ ನಾನು ಹೊರಗೆ ಹೋಗ್ತೀನಿ ಎಂಬ ಮಾತುಗಳನ್ನ ಆಡ್ತಾರೆ.
ರಜತ್ ಅವರ ಈ ವರ್ತನೆ ಕಂಟೆಸ್ಟೆಂಟ್ ಗಳಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಕೂಡ ಬೇಸರ ತಂದಿದೆ ರಜತ್ ಮಾಡಿದ್ದು ಸರಿ ಅಲ್ಲ ಎಂಬುಬುದನ್ನು ಕಾಮೆಂಟ್ ಸೆಕ್ಷನ್ ನಲ್ಲಿ ತಿಳಿಸಿದ್ದಾರೆ.