ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ಮುಗಿದ ನಂತರ ಎಲ್ಲಾ ಕಂಟೆಸ್ಟೆಂಟ್ಗಳು ಕೂಡ ಅವರ ಕೆಲಸಗಳಲ್ಲಿ ಬ್ಯುಸಿ ಇರ್ತಾರೆ. ಈ ಸಂದರ್ಭದಲ್ಲಿ ಚೈತ್ರ ಕುಂದಾಪುರ ಅವರು ಬಾತ್ ರೂಮ್ ನಲ್ಲಿ, ಇದ್ದಕ್ಕಿದ್ದ ಹಾಗೆ ಕೆಳಗೆ ಬೀಳ್ತಾರೆ. ಹಾಗೂ ಅವರನ್ನ ಗಮನಿಸಿದ ಬಿಗ್ ಬಾಸ್ ಗೌತಮಿ ಮತ್ತು ಮೋಕ್ಷಿತಗೆ ಚೈತ್ರ ಅವರಿಗೆ ಸಹಾಯ ಮಾಡಿ ಎಂದು ಹೇಳ್ತಾರೆ, ಈ ಸಂದರ್ಭದಲ್ಲಿ ಎಲ್ಲಾ ಕಂಟೆಸ್ಟೆಂಟ್ಗಳು ಕೂಡ ಬಿಗ್ ಬಾತ್ ರೂಮ್ ಏರಿಯಾ ಗೆ ಹೋಗಿ ಚೈತ್ರ ಅವರ ಪರಿಸ್ಥಿತಿಯನ್ನ ನೋಡಿ ಕನ್ಫೆಶನ್ ರೂಮ್ಗೆ ಎತ್ತಿಕೊಂಡು ಹೋಗ್ತಾರೆ.

ಅದಾದ ಬಳಿಕ ಅದಾದ ಬಳಿಕ ಮರುದಿನ ಚೈತ್ರಾ ಕುಂದಾಪುರ ಅವರು ಟ್ರೀಟ್ಮೆಂಟ್ ಮುಗಿಸಿಕೊಂಡು ಬಿಗ್ ಬಾಸ್ ಮನೆಗೆ ಬಂದಾಗ ಗಂಟೆಗಳ ಬಗ್ಗೆ ಮಾತನಾಡುತ್ತಾರೆ. ಅದು ಕೂಡ ಹೊರಗಡೆ ಯಾವ ರೀತಿ ಜನ ಆ ಕಂಟೆಸ್ಟೆಂಟ್ ಅನ್ನ ನೋಡ್ತಾ ಇದ್ದಾರೆ ಎಷ್ಟು ಡಿಮ್ಯಾಂಡ್ ಇದೆ ಏನು ಅದರ ಬಗ್ಗೆ ಚರ್ಚೆ ಆಗುತ್ತೆ. ಅದರಲ್ಲೂ ತ್ರಿವಿಕ್ರಮ್ ಅವರಿಗೆ ನಿಮಗೆ ಎಲ್ಲೂ ಬೆಲೆ ಇಲ್ಲ ಬಿಡಿ ಅಂತ ಹೇಳ್ತಾರೆ, ಹಾಗೂ ಧನರಾಜ್ ಅವರ ಪರ್ಫಾರ್ಮೆನ್ಸ್ ಏನು ಇಲ್ಲ ಎಂಬುದನ್ನು ಕೂಡ ಹೇಳ್ತಾರೆ ..ಹೀಗೆ ಒಬ್ಬೊಬ್ಬ ಕಂಟೆಸ್ಟೆಂಟ್ಗಳ ಬಗ್ಗೆಯೂ ಕೂಡ ಒಂದೊಂದು ವಿಚಾರವನ್ನು ಹೇಳುತ್ತಾರೆ.

ಇದೆಲ್ಲ ಆದ ಬಳಿಕ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ಗೋಸ್ಕರ ಪ್ರೇಕ್ಷಕರು ಕಾತುರದಿಂದ ಕಾಯ್ತಾ ಇದ್ರು. ಈ ಎಪಿಸೋಡ್ ನ ಸದ್ಯದ ರೋಮು ರಿಲೀಸ್ ಆಗಿದ್ದು ಚೈತ್ರ ಅವರಿಗೆ ಕಿಚ್ಚ ಅವರು ಸಿಕ್ಕಾಪಟ್ಟೆ ಕ್ಲಾಸನ್ನು ತೆಗ್ದುಕೊಳ್ತಾರೆ. ಇದನ್ನೆಲ್ಲ ಬಿಗ್ ಬಾಸ್ ಮನೆಯಲ್ಲಿ ಹೇಳುವಂತ ಉದ್ದೇಶ ಏನಿತ್ತು ಚೈತ್ರ ಎಂದು ಕಿಚ್ಚ ಸುದೀಪ್ ಕೇಳ್ತಾರೆ.ಇದಕ್ಕೆ ಚೈತ್ರ ನಾನೇ ಡಾಕ್ಟರ್ ಹತ್ರ ಕೇಳಿದೆ ಎಂಬ ಉತ್ತರವನ್ನು ನೀಡುತ್ತಾರೆ. ಇದಕ್ಕೆ ಕಿಚ್ಚ ತುಂಬಾ ಸಿಟ್ಟಿನಿಂದ ಪ್ರತಿಕ್ರಿಯೆಯನ್ನು ನೀಡುತ್ತಾರೆ.

ಇದೆಲ್ಲಾ ಆದ ನಂತರ ಬಿಗ್ ಬಾಸ್ ಮನೆಯ ಒಂದು ಕ್ಯಾಮೆರಾ ಬಳಿ ಹೋಗಿ ಇಂತಹ ವಾತಾವರಣದಲ್ಲಿ ನನಗೆ ಇರಲು ಸಾಧ್ಯವಿಲ್ಲ ನಾನು ಮನೆಗೆ ಹೋಗ್ತೀನಿ ಕ್ಯಾಮೆರಾ ಬಳಿ ಕೇಳಿಕೊಳ್ಳುತ್ತಾರೆ.











