ಬಿಗ್ ಬಾಸ್ ಕನ್ನಡ ಸೀಸನ್ 11 , 43 ದಿನಗಳನ್ನು ಪೂರೈಸಿ, 44ನೇ ದಿನಕ್ಕೆ ಕಾಲಿಟ್ಟಿದೆ .ಎಲ್ಲಾ ಕಂಟೆಸ್ಟೆಂಟ್ಗಳು ಕೂಡ ಭರ್ಜರಿಯಾಗಿ ಆಟವನ್ನು ಆಡ್ತಾ ಇದ್ದಾರೆ. ಇನ್ನು ಪ್ರತಿ ಸೀಸನ್ ರೀತಿ ಈ ಬಾರಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯ ಹಾಗೂ ಸುರೇಶ್ ನಡುವೆ ಊಟದ ವಿಚಾರಕ್ಕಾಗಿ ಜಗಳ ನಡೆಯುತ್ತದೆ.
ನಿನ್ನೆ ಬಿಗ್ ಬಾಸ್ ಕಂಟೆಸ್ಟ್ಗಳಿಗೆ ಒಂದು ಆಕ್ಟಿವಿಟಿಯನ್ನು ಮಾಡಿಸ್ತಾರೆ. ಮನೆಯಲ್ಲಿ ಒಂದಿಷ್ಟು ಕೆಂಪು ಹೂಗಳು ಹಾಗೂ ಒಂದಿಷ್ಟು ಕಪ್ಪು ಹೂಗಳನ್ನ ಇಟ್ಟು ,ಈ ಮನೆಯಲ್ಲಿ ನಿಮ್ಮ ಫ್ರೆಂಡ್ ಯಾರು ಅವರಿಗೆ ಕೆಂಪು ಹೂವನ್ನ ಕೊಡಿ ಹಾಗೂ ನೀವು ಯಾರನ್ನು ದ್ವೇಷಿಸುತ್ತೀರಾ ಅವರಿಗೆ ಕಪ್ಪು ಹೂವನ್ನು ನೀಡಿ, ಜೊತೆಗೆ ಕಾರಣ ಹೇಳಿ ಎಂದು ಕಂಟೆಸ್ಟಂಟ್ ಗಳಿಗೆ ಹೇಳುತ್ತಾರೆ. ಈ ಒಂದು ಆಕ್ಟಿವಿಟಿಯಲ್ಲಿ ಅತಿ ಹೆಚ್ಚು ಕಪ್ಪು ಹೂಗಳನ್ನು ಪಡೆದವರು ಗೋಲ್ಡ್ ಸುರೇಶ್. ಈ ವಿಚಾರವಾಗಿ ಅವರು ಬೇಸರವನ್ನು ವ್ಯಕ್ತಪಡಿಸುತ್ತಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಅನ್ನೋದು ಪ್ರತಿ ವಾರನೂ ಇರುತ್ತದೇ, ಕಳೆದ ವಾರ ನಾಮಿನೇಷನ್ ಇದ್ರೂ ಕೂಡ ಎಲಿಮಿನೇಷನ್ ಇರಲಿಲ್ಲ. ಆದರೆ ಈ ವಾರ ಖಂಡಿತವಾಗಿಯೂ ಎಲಿಮಿನೇಷನ್ ಇದ್ದೇ ಇರುತ್ತೆ. ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಡುತ್ತಾರೆ ಜೊತೆಗೆ ಎಚ್ಚರಿಕೆಯನ್ನು ಕೂಡ ನೀಡುತ್ತಾರೆ.

ಪ್ರತಿ ಬಾರಿ ಕ್ಯಾಪ್ಟನ್ ಆದವರಿಗೆ ಒಂದು ಸ್ಪೆಷಲ್ ಅಧಿಕಾರ ಇರುತ್ತದೇ, ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಯಾರು ಕ್ಯಾಪ್ಟನ್ ಆಗುತ್ತಾರೋ ಅವರು ಒಬ್ಬ ಕಂಟೆಸ್ಟೆಂಟ್ ಅನ್ನ ಡೈರೆಕ್ಟಾಗಿ ನಾಮಿನೇಟ್ ಮಾಡುವ ಅಧಿಕಾರವಿರುತ್ತದೆ, ಆದರೆ ಕಳೆದ ಬಾರಿ ಮಂಜು ಹಾಗೂ ತ್ರಿವಿಕ್ರಮ್ ನಡುವೆ ನಡೆದ ಮಾತುಕತೆಯಲ್ಲಿ ನಿನಗೆ ನಾನು ಸಪೋರ್ಟ್ ಮಾಡ್ತೀನಿ ಆದ್ರೆ ನೀನು ಕ್ಯಾಪ್ಟನ್ ಆದರೆ ನನ್ನನ್ನು, ಗೌತಮಿ ಹಾಗೂ ಮೋಕ್ಷಿತನನ್ನು ನಾಮಿನೇಟ್ ಮಾಡಬಾರದು ಎಂಬ ಒಪ್ಪಿಗೆ ಪಡೆಯುತ್ತಾರೆ. ಈ ವಿಚಾರ ವೀಕೆಂಡ್ ಎಪಿಸೋಡ್ ನಲ್ಲಿ ಅಂದ್ರೆ ಕಿಚ್ಚ ಸುದೀಪ್ ಅವರ ಮುಂದೆ ಕೂಡ ಚರ್ಚೆ ಆಗುತ್ತೆ.

ಈ ವಿಚಾರದಿಂದಾಗಿ ಇನ್ನು ಮುಂದೆ ಕ್ಯಾಪ್ಟನ್ ಆದವರಿಗೆ ಡೈರೆಕ್ಟ್ ನಾಮಿನೇಷನ್ ಮಾಡುವ ಅಧಿಕಾರವನ್ನ ಬಿಗ್ ಬಾಸ್ ಹಿಂಪಡೆಯುತ್ತಾರೆ. ಇದರಿಂದ ಕಂಟೆಸ್ಟೆಂಟ್ಗಳು ಹಾಗೂ ತ್ರಿವಿಕ್ರಮ್ ಕೂಡ ಶಾಕ್ ಆಗ್ತಾರೆ. ಇದರ ಜೊತೆಗೆ ಈ ವಾರ ಒಂದು ಜೋಡಿ ಅಂದ್ರೆ ಇಬ್ಬರೂ ಕೂಡ ಡಿಸೈಡ್ ಮಾಡಿ ಮತ್ತೊಂದು ಜೋಡಿಯನ್ನ ನಾಮಿನೇಟ್ ಮಾಡಬೇಕಾಗಿರುತ್ತದೆ, ಅದನ್ನು ಅವರ ಮುಂದೆಯೇ ಡೈರೆಕ್ಟಾಗಿ ಕಾರಣವನ್ನು ಹೇಳಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಹೇಳುತ್ತಾರೆ.

ಸದ್ಯ ಬಿಗ್ ಬಾಸ್ ನ ಇವತ್ತಿನ ಪ್ರೋಮೋ ಹೊರ ಬಿದ್ದಿದ್ದು, ಈ ಪ್ರೊಮೋದಲ್ಲಿ ಒಂದಿಷ್ಟು ಜೋಡಿಗಳು ಸುರೇಶ್ ಹಾಗೂ ಅನುಷಾ ಅವರನ್ನ ಡೈರೆಕ್ಟ್ ನಾಮಿನೇಟ್ ಮಾಡ್ತಾರೆ, ಜೊತೆಗೆ ಕಾರಣವನ್ನು ಕೂಡ ಹೇಳುತ್ತಾರೆ ಕಾರಣ ಕೇಳಿದ ಅನುಷಾ ಕೋಪಗೋಳ್ತಾರೆ. ಅನುಷಾ ಹಾಗೂ ಸುರೇಶ್ ಅವರನ್ನು ಬಿಟ್ಟು ಈ ವಾರ ಯಾವಲ್ಲಾ ಜೋಡಿ ನಾಮಿನೇಟ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.










