ಬಿಗ್ ಬಾಸ್ ಸೀಸನ್ 11 ಸ್ಪರ್ಧಿಯಾಗಿ ಜನಪ್ರಿಯತೆ ಪಡೆದ ನಟಿ ಯಮುನಾ ಶ್ರೀನಿಧಿ, ಈಗ ʼಯಜಮಾನʼ ಕನ್ನಡ ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮ್ಮ ಅಮೋಘ ಪ್ರತಿಭೆಯಿಂದ ಪ್ರಸಿದ್ಧರಾದ ಯಮುನಾ ಅವರು ತುಳಸಿ ಪಾತ್ರದ ಮೂಲಕ ಧಾರಾವಾಹಿಗೆ ಹೊಸ ಮಟ್ಟದ ನಾಟಕೀಯತೆ, ಕುತೂಹಲ ಮತ್ತು ರೋಮಾಂಚನವನ್ನು ತರಲು ಸಿದ್ಧರಾಗಿದ್ದಾರೆ.

ಧಾರಾವಾಹಿಯಲ್ಲಿ, ಯಮುನಾ ಅಭಿನಯಿಸುವ ತುಳಸಿ — ಕುತಂತ್ರಿ, ಮಹತ್ವಾಕಾಂಕ್ಷಿ ಮತ್ತು ಗುರಿ ಸಾಧನೆಗಾಗಿ ಏನನ್ನೂ ಬಿಟ್ಟುಕೊಡದ ಸ್ವಭಾವದವಳು. ಕುಟುಂಬದ ಶಾಂತಿ ಮತ್ತು ಏಕತೆಯನ್ನು ಭಂಗಪಡಿಸುವ ಅವಳ ಸೂಕ್ಷ್ಮ ಸಂಚುಗಳು ಕಥೆಗೆ ಹೊಸ ತಿರುವುಗಳನ್ನು ನೀಡುತ್ತವೆ. ವಿಶೇಷವಾಗಿ, ತನ್ನ ಮಗ ಪ್ರಣವ್ ಜಾನ್ಸಿಯನ್ನು ಮದುವೆಯಾಗಬೇಕೆಂದು ಒತ್ತಾಯಿಸುವ ತುಳಸಿಯ ಯೋಜನೆಗಳು ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿ ಇಡುತ್ತವೆ. ಜೊತೆಗೆ ಜಾನ್ಸಿಯ ತಾಯಿಯನ್ನು ಗುಪ್ತವಾಗಿ ಬಂಧಿಸಿರುವುದು ಕಥೆಯ ರೋಚಕತೆ ಮತ್ತು ಭಾವನಾತ್ಮಕ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಯಮುನಾ ಶ್ರೀನಿಧಿಯ ಪ್ರವೇಶದೊಂದಿಗೆ, “ಯಜಮಾನ” ಧಾರಾವಾಹಿ ಹೊಸ ಎತ್ತರಕ್ಕೆ ಏರಲು ಸಜ್ಜಾಗಿದೆ. ಅವರ ಶಕ್ತಿಯುತ ನಟನೆಯೊಂದಿಗೆ, ಹೆಚ್ಚುತ್ತಿರುವ ಕುಟುಂಬ ಸಂಘರ್ಷಗಳು, ಭಾವನಾತ್ಮಕ ಕತೆ ಮತ್ತು ತಿರುವು-ಮರುತಿರುವುಗಳಿಂದ ಕೂಡಿದ ಕಂತುಗಳು ಪ್ರೇಕ್ಷಕರನ್ನು ಕಟ್ಟಿ ಹಾಕಲಿವೆ.

ಸೂಪರ್ ಹಿಟ್ಟಾದ ರಾಘುವಿನ ಕ್ರೇಜಿ ಲುಕ್!
ಜಾನ್ಸಿಗೆ ಅಪಘಾತ ಆದ ಮೇಲೆ ಅವಳ ನೆನಪಿನ ಶಕ್ತಿ ಹೋಗಿದೆ. ಅವಳು ರಾಘುವನ್ನ ಮರೆತಿದ್ದಾಳೆ. ತುಳಸಿ ಸಂಚು ಮಾಡಿರುವುದನ್ನು ತಪ್ಪಿಸಬೇಕಾದ ರಾಘು ಹೊಸ ಲುಕ್ ನೊಂದಿಗೆ ಬಂದಿರೋದು ಜನರಿಗೆ ಬಹಳ ಇಷ್ಟವಾಗಿದೆ. ರಾಘುವಿನ ಈ ಲುಕ್ ಅಪಾರ ಜನಪ್ರಿಯತೆ ಗಳಿಸಿ ಸಿಕ್ಕಾಪಟ್ಟೆ ವೈರಲ್ ಆಗಿದೆ!
ಕಲರ್ಸ್ ಕನ್ನಡದಲ್ಲಿ ಪ್ರತಿ ಸಂಜೆ 6 ಕ್ಕೆ ಪ್ರಸಾರವಾಗುತ್ತಿರುವ “ಯಜಮಾನ” ಧಾರಾವಾಹಿ ತಪ್ಪದೆ ನೋಡಿ.










