ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ಈವರೆಗೂ ಒನ್ ಮ್ಯಾನ್ ಶೋ ಆಗಿರುವುದಂತೂ ಖಂಡಿತ. ಈಗಾಗಲೇ ಅರ್ಧ ಸೀಜನ್ ಮುಗಿದಿದ್ದು ಗಿಲ್ಲಿ ನಟ ಸಂಪೂರ್ಣ ಶೋಅನ್ನು ಆವರಿಸಿಕೊಂಡಿದ್ದಾರೆ. ತಮ್ಮ ಮಾತಿನಿಂದಲೇ ಲಕ್ಷಾಂತರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಗಿಲ್ಲಿ ನಟ ಅವರ ಆಟಕ್ಕೆ ಅನೇಕ ಸೆಲೆಬ್ರೆಟಿಗಳು ಫಿದಾ ಆಗಿದ್ದಾರೆ.

ಬಹುತೇಕ ಜನರು ಈಗಾಗಲೇ ಗಿಲ್ಲಿಯೇ ಈ ಬಾರಿಯ ಬಿಗ್ ಬಾಸ್ ವಿನ್ನರ್ ಎಂದು ಘೋಷಿಸಿದ್ದಾರೆ. ಇನ್ನು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಗಿಲ್ಲಿಯೇ ಗೆಲ್ಲಬಹುದು ಎಂದು ಹೇಳುತ್ತಿದ್ದು, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ್, ಗಿಲ್ಲಿ ಆಟವನ್ನು ಮನಸಾರೆ ಹೊಗಳಿದ್ದಾರೆ.

ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಸಿನಿಮಾ ನೋಡಲು ಬಂದ ಸಂದರ್ಭದಲ್ಲಿ ಸುದ್ದಿ ಸೈಕಲ್ ಚಾನೆಲ್ ಜೊತೆ ಮಾತನಾಡಿದ ಗೌತಮಿ, ʼಬಿಗ್ ಬಾಸ್‌ಅನ್ನು ಪೂರ್ತಿ ನೋಡೋಕೆ ಆಗುತ್ತಿಲ್ಲ. ಆದರೆ ಹೆಚ್ಚಿನ ಸಂಚಿಕೆ ನೋಡಿದ್ದೇನೆ. ಈ ಬಾರಿ ಒನ್ ಮ್ಯಾನ್ ಶೋ ಥರಾ ಆಗಿದೆ. ನನ್ನ ಪ್ರಕಾರ ಗಿಲ್ಲಿನೇ ಚೆನ್ನಾಗಿ ಆಡುತ್ತಿದ್ದಾರೆ. ಇಲ್ಲಿ ಎಲ್ಲೋ ಒಂದು ಕಡೆ ವೈಯಕ್ತಿಕವಾಗಿ ಹೋಗಿರುವುದಕ್ಕೆ ಕೆಲವರಿಗೆ ಬೇಸರ ಆಗಿರಬಹುದು. ಆದರೆ ಗಿಲ್ಲಿ ತುಂಬಾ ಚೆನ್ನಾಗಿ ಆಡುತ್ತಿದ್ದಾರೆʼ ಎಂದು ಹೇಳಿದರು.
Gouthami supports Gilli – calls him best entertainer 🔥 #bbk12 pic.twitter.com/9hUvl4giIn
— Venkat ⚡️ (@WealthArigato) November 28, 2025












