ಕನ್ನಡ ಕಿರುತೆರೆಯಲ್ಲೇ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 10 ನೇ ಸೀಸನ್ ಮತ್ತೆ ಶುರುವಾಗಿದೆ. ಶುರುವಾದ ದಿನಗಳಿಂದಲೂ ಒಂದಲ್ಲ ಒಂದು ರೀತಿ ಚರ್ಚೆಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಬಾರಿ ಬಿಗ್ ಬಾಸ್ ಅಭ್ಯರ್ಥಿಗಳ ಭಾಷೆ ತೀರ ಕೆಳಮಟ್ಟದ್ದಾಗಿದ್ದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ, ಗಂಡಸ್ತರ ಆಡು ಎಂಬ ವಿನಯ್ ಮಾತಿನಿಂದ ಹೆಣ್ಣು ಮಕ್ಕಳು ಅಲ್ಲದೇ ಅನೇಕ ನೆಟ್ಟಿಗರು ಇದನ್ನು ವಿರೋಧಿಸಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಗಾರ್ಡನ್ ಏರಿಯಾದಲ್ಲಿ ಹಳ್ಳಿಯ ರೀತಿಯಲ್ಲಿ ಸೆಟ್ ನಿರ್ಮಾಣ ಆಗಿದೆ. ಹಳ್ಳಿಯಲ್ಲಿ ನಡೆಯುವ ಚಟುವಟಿಕೆಗಳನ್ನೇ ಆಯ್ದುಕೊಂಡು ಟಾಸ್ಕ್ ನೀಡಲಾಗುತ್ತಿದೆ. ಮಡಿಕೆ ಮಾಡುವ ಟಾಸ್ಕ್ನ ಸ್ಪರ್ಧಿಗಳಿಗೆ ಮೊದಲು ನೀಡಲಾಗಿತ್ತು, ಈ ವೇಳೆ ವಿನಯ್ ಆಡಿದ ಮಾತು ಸಂಗೀತಾ ಕೋಪಕ್ಕೆ ಕಾರಣ ಆಗಿದೆ.
ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ, ಗಂಡಸ್ತರ ಆಡು, ಎಂದು ವಿನಯ್ ಕೂಗಾಡಿದರು. ಇದಕ್ಕೆ ಸಂಗೀತಾ ಸಿಟ್ಟಾಗಿ, ‘ಬಳೆ ಹಾಕ್ಕೊಂಡ್ರೆ ಏನಿವಾಗ? ಏನೋ ಇವಾಗ’ ಎಂದು ಪ್ರಶ್ನೆ ಮಾಡಿದರು. ಇಡೀ ಮನೆ ರಣರಂಗವಾಗಿ ಬದಲಾಯಿತು.
ಸದ್ಯ ವಿನಯ್ ಅವರು ಬಳಕೆ ಮಾಡಿದ ಬಳೆ ಶಬ್ದ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಮಹಿಳೆಯರು ಬಳೆ ಹಾಕುತ್ತಾರೆ. ಈ ರೀತಿ ಬಳೆ ಹಾಕಿದ ಅನೇಕ ಮಹಿಳೆಯರು ಹಲವು ಸಾಧನೆ ಮಾಡಿದ್ದಾರೆ. ಬಳೆ ಹಾಕಿದವರ ಕೈಯಲ್ಲಿ ಏನೂ ಆಗಲ್ಲ ಎಂಬರ್ಥದಲ್ಲಿ ವಿನಯ್ ಮಾತಾಡಿದ್ದಾರೆ. ಮಹಿಳೆಯರ ಬಗ್ಗೆ ಇಷ್ಟ ತುಚ್ಚವಾಗಿ ನೋಡುವ ಮಾತಾಡುವ ವಿನಯ್ ಅವರು ಕ್ಷಮೆಯಾಚಿಸಬೇಕು. ವೀಕೆಂಡ್ನಲ್ಲಿ ಈ ವಿಚಾರ ಇಟ್ಟುಕೊಂಡು ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಕಳೆದ ವಾರ ಅವರನ್ನು ಸುದೀಪ್ ಹೊಗಳಿದ್ದರು. ಅವರಿಗೆ ಎದುರಾಳಿ ಯಾರೂ ಇಲ್ಲ ಎಂದು ಹೇಳಲಾಯಿತು. ಇದು ವೀಕ್ಷಕರ ಅಸಮಾಧಾನಕ್ಕೆ ಕಾರಣ ಆಗಿತ್ತು. ಅವರು ತಪ್ಪು ಮಾಡಿದ ಬಗ್ಗೆ ಏಕೆ ಮಾತನಾಡಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಈಗ ವಿನಯ್ ಅವರ ಮಾತು ಎಲ್ಲೆ ಮೀರುತ್ತಿದೆ.
ಬಿಗ್ ಬಾಸ್ 10 ನೇ ಸೀಸನ್ ಆರಂಭ ದಿನದಿಂದಲೂ ನಟ ವಿನಯ್ ಗೌಡ (Vinay Gowda) ಅವರು ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಈಗ ಮಹಿಳೆಯರ ಬಳೆ ಬಗ್ಗೆ ಮಾತಾಡಿ ಈ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಮುಂದೆ ಏನಾಗುತ್ತೇ ಕಾದು ನೋಡಬೇಕಿದೆ.