ಬಿಗ್ ಬಾಸ್ ಕನ್ನಡ ಸೀಸನ್ 11 (Bigboss Kannada season 11) ನಲ್ಲಿ ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ಎರಡು ಕಾನ್ಸೆಪ್ಟ್ ಗಳು ನಡೆಯುತ್ತಿದೆ. ಈ ಎರಡೂ ಗುಂಪುಗಳಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಆಡುವ ಸಮಯದಲ್ಲಿ ಸಂಭವಿಸಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ ತ್ರಿವಿಕ್ರಂಗೆ (Trivikram) ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆಯೂ ಟಾಸ್ಕ್ ವೇಳೆ ಈ ರೀತಿ ಘಟನೆಗಳು ನಡೆದಿದ್ದು, ಈ ಸೀಸನ್ ಆರಂಭದಲ್ಲೇ ಅವಘಡ ಸಂಭವಿಸಿದೆ, ಜೊತೆಗೆ ಗೋಲ್ಡ್ ಸುರೇಶ್ ಗೂ (Gold Suresh) ಪೆಟ್ಟಾಗಿದೆ ಎನ್ನಲಾಗಿದೆ.
ಈ ಟಾಸ್ಕ್ ಆಡುವಾಗ, ಬಿಗ್ ಬಾಸ್ ನೀಡಿದ್ದ ಚೆಂಡು ಹಿಡಿದು ಓಡುತ್ತಿದ್ದ ಸ್ಪರ್ಧಿ ತ್ರಿವಿಕ್ರಂ ಬಿದ್ದಿದ್ದಾರೆ. ಇದರಿಂದ ಅವರಿಗೆ ಪೆಟ್ಟಾಗಿದೆ. ಹೀಗಾಗಿ ಅವರನ್ನು ಕನ್ಫೆಷನ್ ರೂಂಗೆ ಕರೆತರುವಂತೆ ಬಿಗ್ ಬಾಸ್ ಹೇಳಿರುವುದಾಗಿ ತಿಳಿದುಬಂದಿದೆ. ಆ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.






