ಕಪಿಲಾ ನದಿಯಲ್ಲಿ ಯುವಕ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದು ಆಕಸ್ಮಿಕ ಘಟನೆ ಅಲ್ಲ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ನಾಪತ್ತೆಯಾಗಿರುವ ಯುವಕ ಅಬ್ದುಲ್ ರಹೀಮಾ ಪಾಷ ತಂದೆ ಮುನಾವರ್ ಪಾಷಾ ಆರೋಪಿಸಿದ್ದಾರೆ.
ನಂಜನಗೂಡು ತಾಲ್ಲೂಕು ಹೆಜ್ಜಿಗೆ ಗ್ರಾಮದ ಕಪಿಲಾ ನದಿಗೆ ಅಬ್ದುಲ್ ಸೇರಿ ಮೂವರು ಯುವಕರಲ್ಲಿ ಬಿದ್ದಿದ್ದು ಇಬ್ಬರು ಈಜಿ ದಡ ಸೇರಿದ್ದರು ಆದರೆ ಅಬ್ದುಲ್ ರಹೀಂ ನಾಪತ್ತೆಯಾಗಿರುವುದು ಈಗ ಆತನ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಗನನ್ನು ಸಮಯ ನೋಡಿ ಕೊಲೆ ಮಾಡಲಾಗಿದೆ, ಆತ ಬಟ್ಟೆ ಚಪ್ಪಲಿ ಬಿಚ್ಚದೆ ನೀರಿಗೆ ಬಿದ್ದಿದ್ದಾನೆ ಆತನ ಜೊತೆಯವರೇ ಕೊಲೆ ಮಾಡಲು ಈ ರೀತಿ ಮಾಡಿದ್ದಾರೆ. ನ್ಯಾಯ ಕೇಳಲು ಹೋದರೆ ಸರ್ಕಲ್ ಇನಸ್ಪೆಕ್ಟರ್ ತೆಗಳುತ್ತಾರೆ. ನನ್ನ ಮಗ ಅಬ್ದುಲ್ ರಹೀಂ ಪಾಷಾ ತೊಟ್ಟಿದ್ದ ಬಟ್ಟೆಯಲ್ಲಿಯೇ ನೀರಿಗೆ ಬಿದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ನಾಪತ್ತೆಯಾದ ಅಬ್ದುಲ್ ತಂದೆ ಮುನಾವರ್ ಗಂಭೀರ ಆರೋಪ ಮಾಡಿದ್ದಾರೆ. ಇತ್ತ ಅಬ್ದುಲ್ ಗಾಗಿ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ..