ಬೆಂಗಳೂರು: ಮದ್ಯ ಪ್ರಿಯರಿಗೆ (Liquor) ಒಂದು ವಾರಗಳ ಕಾಲ ಬಿಗ್ ಶಾಕ್ ಎದುರಾಗಿದ್ದು, ಈಗಿನಿಂದಲೇ ಮದ್ಯ ಖರೀದಿಸಲು ಮುಗಿ ಬೀಳುತ್ತಿದ್ದಾರೆ.
ಜೂನ್ 1 ರಿಂದ ರಾಜ್ಯದ ಮದ್ಯಪ್ರಿಯರಿಗೆ ಶಾಕ್ ಎದುರಾಗಿದ್ದು, ಬರೋಬ್ಬರಿ ಮೊದಲ ಒಂದು ವಾರ ಮದ್ಯ ಸಿಗುವುದಿಲ್ಲ. ಜೂನ್ 1 ರಿಂದ 6ರ ವರೆಗೆ ವೈನ್ ಶಾಪ್, ಎಂಆರ್‌ಪಿ ಔಟ್ ಲೇಟ್ ಗಳು(MRP Outlet) ಬಂದ್ ಆಗುತ್ತಿದೆ. ಹೀಗಾಗಿ ಮದ್ಯ ಪ್ರಿಯರು ಒಂದು ವಾರದ ಎಣ್ಣೆಯನ್ನು ಈಗಿನಿಂದಲೇ ಸ್ಟಾಕ್ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ (Lok Sabha Elections Result) ಇರುವುದರಿಂದ ಬೆಂಗಳೂರು ಜಿಲ್ಲಾಡಳಿತ ಮದ್ಯ ಮಾರಾಟವನ್ನು ಬಂದ್ ಮಾಡುವಂತೆ ಆದೇಶ ನೀಡಿದೆ.
ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ ಜೂನ್ 1ರ ಸಂಜೆ 4 ಗಂಟೆಯಿಂದಲೇ ಬಾರ್ ಬಂದ್ ಆಗಲಿದ್ದು, ಜೂನ್ 3 ರವರೆಗೆ ಬಂದ್ ಆಗಲಿವೆ. ಜೂನ್ 4 ರಂದು ದೇಶದ್ಯಾಂತ ಲೋಕಸಭಾ ಚುನಾವಣೆಯ(Lokasabha Election) ಮತ ಎಣಿಕೆ ನಡೆಯಲಿದೆ. ಹಾಗಾಗಿ ಅಂದೂ ಸಹ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಜೂನ್ 6 ರಂದು ಎಂಎಲ್‌ಸಿ ಮತ ಎಣಿಕೆ ಇರುವುದರಿಂದಾಗಿ ಅಂದು ಕೂಡ ಬಂದ್ ಆಗಿರಲಿವೆ. ಹೀಗಾಗಿ ಜೂನ್(June) ತಿಂಗಳ ಮೊದಲ ವಾರ ಮದ್ಯ ಪ್ರಿಯರಿಗೆ ಎಣ್ಣೆ ಸಿಗುವುದು ಕಷ್ಟವಾಗಿದೆ.