ಗ್ವಾಲಿಯಾರ್: ಇಲ್ಲಿನ ನ್ಯೂ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ (Team India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಟಿ20 ಸರಣಿ (T20 Series) ಭಾನುವಾರ (ಅಕ್ಟೋಬರ್ 06) ಶುರುವಾಗಲಿದ್ದು, ಸರಣಿಯಿಂದ (Series) ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ.
ಇನ್ನೂ ಸರಣಿಯ ಮೊದಲ ಪಂದ್ಯ ಶುರುವಾಗುವ ಮುನ್ನವೇ ಟೀಮ್ ಇಂಡಿಯಾಗೆ ದೊಡ್ಡ ಹೊಡೆತ ಬಿದಿದ್ದು, ಸರಣಿಯಿಂದ ಸ್ಟಾರ್ ಆಟಗಾರರೊಬ್ಬರು ಹೊರಬಿದ್ದಿದ್ದಾರೆ. ಇವರ ಬದಲಿಯಾಗಿ ಹೈದರಾಬಾದ್ ಮೂಲದ ಆಟಗಾರನನ್ನು ಬಿಸಿಸಿಐ ನೇಮಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಟೀಮ್ ಇಂಡಿಯಾವನ್ನು ಗಾಯದ ಸಮಸ್ಯೆ ಬಿಟ್ಟು ಬಿಡದೆ ಕಾಡುತ್ತಿದ್ದು, ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿ ಪ್ರತಿಷ್ಠಿತ ಟೂರ್ನಿ ಹಾಗೂ ಸರಣಿಯಿಂದ ಹೊರಗುಳಿಯುತ್ತಿದ್ದಾರೆ. ಫಿಟ್ನೆಸ್ ಕಾಯ್ದುಕೊಳ್ಳಲು ಆಟಗಾರರು ವರ್ಷಾನುಗಟ್ಟಲೆ ಹೆಣಗಾಡುತ್ತಿರುವ ನಡುವೆಯೇ ಇದೀಗ ಮತ್ತೋರ್ವ ಸ್ಟಾರ್ ಆಟಗಾರ ಗಾಯಕ್ಕೆ ತುತ್ತಾಗಿರುವುದು ಆಯ್ಕೆ ಸಮಿತಿ ಹಾಗೂ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
🚨 NEWS 🚨
— BCCI (@BCCI) October 5, 2024
Shivam Dube ruled out of #INDvBAN T20I series.
The Senior Selection Committee has named Tilak Varma as Shivam’s replacement.
Details 🔽 #TeamIndia | @IDFCFIRSTBank
ಟೀಮ್ ಇಂಡಿಯಾದ ಸ್ಟಾರ್ ಅಲ್ರೌಂಡರ್ ಶಿವಂ ದುಬೆ ಬ್ಯಾಕ್ ಇಂಜುರಿಯಿಂದಾಗಿ ಬಾಂಗ್ಲಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿ ದುಬೆ ಬದಲಾಗಿ ಹೈದರಾಬಾದ್ ಮೂಲದ ಮುಂಬೈ ಇಂಡಿಯನ್ಸ್ ತಂಡದ ಸ್ಪೋಟಕ ಬ್ಯಾಟರ್ ತಿಲಕ್ ವರ್ಮಾರನ್ನು ನೇಮಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ಪೋಸ್ಟ್ ಮಾಡಿದೆ. ಟೀಮ್ ಇಂಡಿಯಾ ಪರ 33 ಟಿ20 ಪಂದ್ಯಗಳನ್ನು ಆಡಿರುವ ದುಬೆ 448 ರನ್ ಗಳಿಸಿ 11 ವಿಕೆಟ್ ಪಡೆದಿದ್ದಾರೆ.
ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿ.ಕೀ), ಸೂರ್ಯಕುಮಾರ್ (ನಾಯಕ), ರಿಯಾನ್ ಪರಾಗ್, ನಿತೀಶ್ ರೆಡ್ಡಿ/ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ/ವರುಣ್ ಚಕ್ರವರ್ತಿ, ಮಯಾಂಕ್ ಯಾದವ್, ಅರ್ಷದೀಪ್/ಹರ್ಷಿತ್ ರಾಣಾ.