
ನವದೆಹಲಿ : ಅಮೆರಿಕದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗ ಸಭೆಯ ನಿಮಿತ್ತ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಿಚಯಿಸುವಾಗ ಗೊಂದಲಕ್ಕೀಡಾದ ಹೆಸರು ಮರೆತ ಪ್ರಸಂಗ ನಡೆದಿದೆ.
We really don’t have a president.
— Gunther Eagleman™ (@GuntherEagleman) September 21, 2024
Biden completely FORGOT he was at a press conference with the Prime Minister of India.
The entire world is laughing at us.
This guy is COOKED. pic.twitter.com/useM07uh0R
ಎಲ್ಲರಿಗೂ ಧನ್ಯವಾದ ತಿಳಿಸಿದ ಬೈಡನ್, ನಂತರ ಮುಂದೆ ಯಾರನ್ನು ಕರೆಯಬೇಕೆಂದು ಹಲವು ಬಾರಿ ನೆನಪಿಸಿಕೊಂಡರೂ ನೆನಪಾಗದೇ, ‘ಹೂ ಈಸ್ ನೆಕ್ಸ್ಟ್’ ಎಂದು ಕೂಗಿದರು ವೇದಿಕೆ ಎದುರಿಗಿದ್ದ ಅಧಿಕಾರಿಗಳು ಪ್ರಧಾನಿ ಮೋದಿಯವರತ್ತ ಸನ್ನೇ ಮಾಡಿದರು ಬಳಿಕ ಮೋದಿಯವರನ್ನು ಆಹ್ವಾನಿಸಿದ ಪ್ರಸಂಗವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗ್ರಾಸವಾಗಿದೆ.
ಜೋ ಬೈಡನ್ ಅವರಿಗೆ ಮರೆವು ಹೆಚ್ಚಾಗಿದೆ. ಭಾಷಣದ ಮಧ್ಯೆ ಸ್ತಬ್ಧರಾಗಿ ಸುಮ್ಮನೆ ನಿಲ್ಲುವುದು, ಮುಂದೆ ಏನು ಹೇಳಬೇಕು ಎಂದು ಮರೆತುಬಿಡುವುದು ಇಂತಹ ಪ್ರಸಂಗಗಳು ಆಗಾಗ ನಡೆಯುತ್ತಿದ್ದು, ಹಲವರು ಈ ಬಗ್ಗೆ ಟೀಕಿಸುತ್ತಲೇ ಇದ್ದಾರೆ ಇಂದು ಸಹ ಮೋದಿ ಹೆಸರನ್ನು ಹೇಳುವಾಗ ಬೈಡನ್ ಒಂದು ಕ್ಷಣ ಅವರ ಹೆಸರನ್ನೇ ಮರೆತುಬಿಟ್ಟುದ್ದಕ್ಕೆ ಟೀಕೆಗೆ ಕಾರಣವಾಗುತ್ತಿದೆ.