ಬಾಬಾ ಸಾಹೇಬ್ ಅಂಬೇಡ್ಕರ್ (Ambedkar) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit sha) ಹೇಳಿಕೆ ಖಂಡಿಸಿ ವಿವಿಧ ದಲಿತ ಸಂಘಟನೆಗಳಿಂದ ಬೀದರ್ (Bidar) ಬಂದ್ ಕರೆ ನೀಡಲಾಗಿದೆ. ಈ ಹಿನ್ನಲೆ ಈಗಾಗಲ್ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನೌಬಾದ್ ಬಸವೇಶ್ವರ ಸರ್ಕಲ್‌ದಿಂದ ಬೀದರ್ ಅಂಬೇಡ್ಕರ್ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ಸಾಗುವ ವೇಳೆ ಕೈಯಲ್ಲಿ ಕೋಲು, ಬಡಿಗೆ ಹಿಡಿದು ಪ್ರತಿಭಟನಾ ರ್ಯಾಲಿಗೆ ಮುಂದಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ.
ಆ ನಂತರ ಕೋಲು, ಬಡಿಗೆ ಕಿತ್ತುಕೊಂಡು ಶಾಂತ ರೀತಿಯಾಗಿ ಪ್ರತಿಭಟನಾ ರ್ಯಾಲಿ ಮಾಡುವಂತೆ ಸೂಚನೆ ನೀಡಲಾಗಿದ್ದು, ಈ ವೇಳೆ ಪ್ರತಿಭಟನಾಕಾರರು, ಪೊಲೀಸರ ನಡುವೆ ವಾಗ್ವಾದ ನಡೆದಿದೆ.

ಡಿಎಸ್‌ಪಿ ಶಿವನಗೌಡ ಪಾಟೀಲ್ ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಯಾರನ್ನ ಕೇಳಿ ಪ್ರತಿಭಟನಾ ರ್ಯಾಲಿ ಮಾಡುತ್ತಿದ್ದೀರಿ ಅಂತಾ ಪೊಲೀಸರ ತಾಕೀತು ಮಾಡಿದ್ದಾರೆ. ಆ ಬಳಿಕ ಶಾಂತ ರೀತಿಯ ಪ್ರತಿಭಟನಾ ರ್ಯಾಲಿಗೆ ಪೊಲೀಸರು ಅವಕಾಶ ಮಾಡಿಕಿತ್ತಿದ್ದಾರೆ.