![](https://pratidhvani.com/wp-content/uploads/2024/07/FB_IMG_1719906969473-630x1024.jpg)
ನಟ ಭುವನ್ ಹಾಗೂ ನಟಿ ಹರ್ಷಿಕಾ ಜೋಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ವಿಐಪಿ ಅತಿಥಿಗಳು, ಅಭಿಮಾನಿಗಳು ಹಾಗು ಸ್ನೇಹಿತರ ಜೊತೆ ತಮ್ಮ ಮದುವೆಯನ್ನು ಬಹಳ ವಿಜೃಂಭಣೆಯಿಂದ ಕೊಡವ ಸಂಪ್ರದಾಯದ ಪ್ರಕಾರ ಮಾಡಿದ ಈ ಜೋಡಿ ಈಗ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಹರ್ಷಿಕಾ ಈಗ ಐದು ತಿಂಗಳ ಗರ್ಭಿಣಿ.
![](https://pratidhvani.com/wp-content/uploads/2024/04/Harshika-Poonacha-Bhuvan-Ponnanna-2.webp)
ಇದೇ ಅಕ್ಟೋಬರ್ ತಿಂಗಳಲ್ಲಿ ತಮ್ಮ ಪಾಪುವಿನ ಆಗಮನವನ್ನು ತಿಳಿಸಲು ಪಕ್ಕಾ ಪುರಾತನ ಕೊಡವ ಸಾಂಪ್ರದಾಯ, ಉಡುಪು, ಕೊಡಗಿನ ‘ಐನ್ ಮನೆ’ (ದೊಡ್ಡಮನೆ), ಕೋವಿ, ಉಪಕರಣಗಳು, ಜೀವನಶೈಲಿ ಎಲ್ಲವನ್ನು ಬಿಂಬಿಸುವ ಶೈಲಿಯಲ್ಲಿ ಒಂದು ಫೋಟೋ ಶೂಟ್ ಹಾಗು ಅದ್ಭುತವಾದ ವಿಡಿಯೋ ವನ್ನು ಮಾಡಿ ಜನರಿಗೆ ಅರ್ಪಿಸಿದ್ದಾರೆ.
![](https://pratidhvani.com/wp-content/uploads/2024/04/harshika-poonacha-101391458-1024x768.webp)
“ಇಂದಿನವರೆಗು ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲು ಇರಲಿ. ಅಕ್ಟೋಬರ್ ಗೆ ಕಾತುರದಿಂದ ಕಾಯುತ್ತಿದ್ದೇವೆ” ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗು ಹಿತೈಷಿಗಳಿಗೆ ಸಿಹಿ ಸುದ್ದಿ ಹಂಚಿ ಸಂತಸ ತಂದಿದ್ದಾರೆ.