ತುಮಕೂರು:ತಲ್ವಾರ್ ಎಂಬ ಹಿಡಿದು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಭೂಪನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ ತಾಲ್ಲೂಕಿನಾದ್ಯಂತ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ದಿನಾಂಕ:-12/10/2024 ರಂದು ಗುಬ್ಬಿ ಟೌನ್ ಸಂತೇ ಮೈದಾನದಲ್ಲಿ ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ ಸೈಯದ್ ಶರೂಖ್ ಮತ್ತು ಮುಕೀಶ್ ಪಾಷ್ ರವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು.
Press Note: ತಲ್ವಾರ್ ಝಳಪಿಸಿರುವ ಪ್ರಕರಣದ ಆರೋಪಿಯ ಬಂಧನ.#TumakuruDistrictPolice#GubbiPS@venkatashok pic.twitter.com/hXLQmpTZ02
— SP Tumakuru (@SPTumkur) October 17, 2024
ತಮ್ಮಗಳ ಸ್ವಾಧೀನದಲ್ಲಿದ್ದ ತಲ್ವಾರ್ ಗಳನ್ನು ತೋರಿಸಿ ವಿಚಿತ್ರವಾಗಿ ಜನರಿಗೆ ಭಯ ಹುಟ್ಟುವ ರೀತಿಯಲ್ಲಿ ಜನರನ್ನುಮುಂದೆ ಹೋಗದಂತೆ ಅಡ್ಡಗಟ್ಟಿ ರಸ್ತೆಗೆ ಅಡ್ಡಲಾಗಿ ತಲ್ವಾರ್ ನಿಂದ ಸೈಯದ್ ಶರೂಖ್ ರವರು ಜೋರಾಗಿಚೀರಾಡಿಕೊಂಡು ತಲ್ವಾರ್ ನ್ನು ಹಿಡಿದುಕೊಂಡು ವಿಚಿತ್ರವಾಗಿ ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಕೇಕ್ ನ್ನು.
ಕತ್ತರಿಸಿರಿಸುವ ವಿಚಾರವು ಈ ದಿನ ತಡವಾಗಿ ಮಾಹಿತಿ ಬೆಳಕಿಗೆ ಬಂದಿದ್ದು, ಸದರಿ ವಿಚಾರವಾಗಿ ತಲ್ವಾರ್ಹಿಡಿದುಕೊಂಡು ಜನರನ್ನು ಅಡ್ಡಗಟ್ಟಿ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿರುವ ಸೈಯದ್ ಶರೂಖ್ ಮತ್ತು.
ಮುಕೇಶ್ ಪಾಷ ರವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಗುಬ್ಬಿಪೊಲೀಸ್ ಠಾಣಾ ಮೊ ನಂ 377/2024 ಕಲಂ 126(2) ಬಿಎನ್ಎಸ್ ರೆ/ವಿ 25 1(ಬಿ) (ಬಿ) ಆರಮ್ಸ್ ಆಕ್ಟ್.
1959 ರೀತ್ಯಾ ಪ್ರಕರಣ ದಾಖಲಾಗಿತ್ತು.
ಈ ವಿಚಾರವಾಗಿ ಕಾರ್ಯಾಚರಣೆ ಕೈಗೊಂಡು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಸೈಯದ್ ಶರೂಖ್ ರವರನ್ನು ಬಂಧಿಸಲಾಗಿದ್ದು. ಮತ್ತೊಬ್ಬ ಆರೋಪಿ-2 ಮುಕೀತ್ ಪಾಷ ರವರನ್ನು ಬಂದಿಸುವ ಕಾರ್ಯ ಮುಂದುವರೆದಿರುತ್ತೆ. ಬಂದಿತ ಆರೋಪಿಯನ್ನು ಎಲ್ಲಾ ಆಯಾಮಗಳಿಂದಲೂ ಹೆಚ್ಚಿನ ತನಿಖೆ ಮುಂದುವರೆದಿದೆ.
ಆರೋಪಿಗಳ ಹೆಸರು ಮತ್ತು ವಿಳಾಸ:ಸೈಯದ್ ಶರೂಖ್ ಬಿನ್ ಸೈಯದ್ ಆಲಿ.26 ವರ್ಷ. ಮೊಬೈಲ್ ಅಂಗಡಿ ವ್ಯಾಪಾರ, ಕೆ ಹೆಚ್.ಬಿ ಕಾಲೋನಿ ಗುಬ್ಬಿ ಟೌನ್.
ಸದರಿ ಆರೋಪಿಗಳ ಪತ್ತೆಗೆ ಅಪರ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ವಿ ಮರಿಯಪ್ಪ ಕೆ.ಎಸ್.ಪಿ.ಎಸ್. ಮತ್ತು ಶ್ರೀ ಅಬ್ದುಲ್ ಖಾದರ್ ಕೆ.ಎಸ್.ಪಿ.ಎಸ್ ರವರ ನೇತೃತ್ವದಲ್ಲಿ ಸಿರಾ ಉಪವಿಭಾದ ಡಿವೈಎಸ್ಪಿ ಶ್ರೀ ಬಿ.ಕೆ ಶೇಖರ್. ಗುಬ್ಬಿ ವೃತ್ತದ ಸಿ.ಪಿ.ಐ ಶ್ರೀ ಗೋಪಿನಾಥ್.ವಿ. ಹಾಗೂ ಗುಬ್ಬಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಸುನೀಲ್ ಕುಮಾರ್.ಜಿ.ಕೆ. ಗುಬ್ಬಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ್ ಕುಮಾರ್, ವಿಜಯ್ ಕುಮಾರ್, ರವರುಗಳು ಆರೋಪಿಗಳ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದು ಸದರಿ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಶ್ಲಾಘಿಸಲಾಗಿರುತ್ತದೆ.