
ಗ್ವಾಲಿಯರ್ : ಮಧ್ಯಪ್ರದೇಶದ ( Madhya Pradesh)ಗ್ವಾಲಿಯರ್’ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಸಾಫ್ಟ್ವೇರ್ (Software)ಎಂಜಿನಿಯರ್ ತನ್ನ ಮೊದಲ ಹೆಂಡತಿ ಇರುವಾಗಲೇ ಐವರು ಮಹಿಳೆಯರನ್ನ (Five women)ಮದುವೆಯಾಗಿದ್ದಾನೆ. (married)ಆಘಾತಕಾರಿ ಎನ್ನುವಂತೆ ಆತನೇ ಕುಟುಂಬವೇ ಕುಟುಂಬವೇ ಅವಿವಾಹಿತ ಎಂದು ಬಿಂಬಿಸಿ ಐದು ಮದುವೆ ಮಾಡಿಸಿದೆ.(Married five times)

ಆತನ ಮೊದಲ ಪತ್ನಿ ಗ್ವಾಲಿಯರ್ ಪೊಲೀಸರಿಗೆ ದೂರು ನೀಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು, ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.ಆತ ದೇಶದಿಂದ ಪಲಾಯನ ಮಾಡಲು ಯೋಜಿಸಿದ್ದು, ಪಾಸ್ಪೋರ್ಟ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಬೇಕೆಂದು ಪತ್ನಿ ಈಗ ವಿನಂತಿಸಿದ್ದಾಳೆ. ಮಹಿಳಾ ಅಪರಾಧ ವಿಭಾಗದ ಡಿಎಸ್ಪಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಾಹಿತಿಯ ಪ್ರಕಾರ, ಮೊದಲ ಪತ್ನಿ ಮಮತಾ ಜಮ್ರಾ ಮೇ 13, 2018 ರಂದು ಸಿಂಗ್ ಶೇಖರ್’ನನ್ನ ವಿವಾಹವಾದರು.ಮದುವೆಯಾದ ಸ್ಪಲ್ಪ ದಿನಗಳ ಬಳಿಕೆ ಆತ ಕೆಲಸದ ಕಾರಣ ನೀಡಿ ದಿನಗಳವರೆಗೆ ಕಣ್ಮರೆಯಾಗುತ್ತಿದ್ದ.ಅನುಮಾನಗೊಂಡ ಮಮತಾ, ಆತ ಹಲವಾರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುವುದನ್ನ ಕಂಡುಕೊಂಡಿರುವುದಾಗಿ ಎಂದು ಬಹಿರಂಗಪಡಿಸಿದಳು.ಆಶ್ಚರ್ಯಕರವಾಗಿ, ಆತನ ಕುಟುಂಬವೇ ಈ ಮದುವೆಗಳನ್ನು ಆಯೋಜಿಸುತ್ತದೆ. ಇನ್ನು ತಮ್ಮ ಮಗ ಉನ್ನತ ಶಿಕ್ಷಣ ಪಡೆದಿದ್ದು, ಅವಿವಾಹಿತ ಎಂದು ಬಿಂಬಿಸುತ್ತಿತ್ತು.