ಮಾಜಿ ಸಚಿವ ಎಚ್ ಡಿ ರೇವಣ್ಣ(Revanna)ವಿರುದ್ಧ ಕೆ.ಆರ್.ನಗರ (KR Nagar) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಪ್ರಕರಣಕ್ಕೆ (Kidnap case) ಸಂಬಂಧಪಟ್ಟಂತೆ ಈಗಾಗಲೇ ರೇವಣ್ಣರನ್ನ ಎಸ್ಐಟಿ (SIT) ಬಂಧಿಸಿ ನಾಲ್ಕು ದಿನ ಕಸ್ಟಡಿಗೆ ಪಡೆದುಕೊಂಡಿತ್ತು . ಸದ್ಯ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಇದೇ ಕೇಸ್ ಗೆ ಸಂಬಂಧಪಟ್ಟ ಹಾಗೆ ಈಗ ಭವಾನಿ ರೇವಣ್ಣಾಗೂ (Bhavani revanna) ಸಂಕಷ್ಟ ಎದುರಾಗಿದೆ.
ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ದೂರಿನಲ್ಲಿ ನೀಡಿರುವ ಹೇಳಿಕೆ ಮತ್ತು ಎಫ್ಐಆರ್ (FIR) ನಲ್ಲಿ ಭವಾನಿ ರೇವಣ್ಣ ಹೆಸರು ಉಲ್ಲೇಖ ಆಗಿರೋದ್ರಿಂದ ,ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಈ ಮುಂಚೆ ಭವಾನಿ ರೇವಣ್ಣರಿಗೆ ನೋಟಿಸ್ (Notice) ಜಾರಿ ಮಾಡಿದ್ದರು .ಆದರೆ ಇದಕ್ಕೆ ಭವಾನಿಯವರ ಕಡೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ .ಇದೀಗ ಎಸ್ಐಟಿ ಎರಡನೇ ನೋಟೀಸ್ ಜಾರಿ ಮಾಡಿದೆ.
ವಾಟ್ಸಪ್ (Whatsapp) ಮೂಲಕ ಭವಾನಿ ರೇವಣ್ಣರಿಗೆ ಎಸ್ಐಟಿ ಎರಡನೇ ನೋಟಿಸ್ ಜಾರಿ ಮಾಡಿದ್ದು , ವಿಚಾರಣೆಗಾಗಿ ಅವರ ಬರುವಿಕೆಗಾಗಿ ಅಧಿಕಾರಿಗಳು ಕಾದಿದ್ದಾರೆ . ಒಂದುವೇಳೆ ಭವಾನಿ ರೇವಣ್ಣ ಉತ್ತರಿಸದಿದ್ದಲ್ಲಿ, ಮೂರನೇ ನೋಟಿಸ್ ಅನ್ನು ಕೂಡ ಎಸ್ಐಟಿ ಅಧಿಕಾರಿಗಳು ರವಾನೆ ಮಾಡಲಿದ್ದಾರೆ .ಆ ನಂತರ ಭವಾನಿ ರೇವಣ್ಣರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳು ಇದೆ .ಆದರೆ ಅಲ್ಲಿವರೆಗೆ ಭವಾನಿ ರೇವಣ್ಣ ಅವರ ನಡೆ ಏನು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.