ಭಾರತಕ್ಕೂ ಇಂಡಿಯಾಗೂ ಯಾವುದೇ ವ್ಯತ್ಯಾಸವಿಲ್ಲ, ನಮ್ಮ ಸಂವಿಧಾನ ಈ ಎರಡು ಹೆಸರಿಗೂ ಮಹತ್ವ ನೀಡಿದೆ. ಕೆಲವರು ಸುಮ್ಮನೆ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಭಾರತ್ ಎಂಬುದು ನಾಗರಿಕತೆಯ ಆರಂಭದಿಂದಲೂ ಇರುವ ಮೂಲ ಹೆಸರು. ಆದರೆ ಇತ್ತೀಚಿನ ದಿನಗಳಲ್ಲಿ, ಹತಾಶೆಗೊಂಡಿರುವ ಕೆಲವು ಜನರು ವಿವಾದ ಸೃಷ್ಟಿಸುತ್ತಿದ್ದಾರೆ. ನಮ್ಮ ದೇಶವನ್ನು ಭಾರತ ಅಥವಾ ಇಂಡಿಯಾ ಎಂದು ಕರೆಯಬೇಕೆ ಎಂಬ ಬಗ್ಗೆ ಕೆಲವು ದಿನಗಳಿಂದ ವಿವಾದ ನಡೆಯುತ್ತಿದೆ. ಆದರೆ ಭಾರತಕ್ಕೂ ಇಂಡಿಯಾ ಯಾವುದೇ ವ್ಯತ್ಯಾಸವಿಲ್ಲ. ಭಾರತ ಎಂಬುದು ಈ ದೇಶದ ಹೆಸರು. ಇಂಗ್ಲಿಷ್ ಜನರು ದೇಶಕ್ಕೆ ಇಂಡಿಯಾ ಎಂಬ ಹೆಸರನ್ನು ನೀಡಿದರು. ನಮ್ಮ ಸಂವಿಧಾನವು ಭಾರತ ಮತ್ತು ಇಂಡಿಯಾ ಎರಡಕ್ಕೂ ಮಹತ್ವ ನೀಡಿದೆ ಎಂದು ಹೇಳಿದ್ದಾರೆ.

ಪಠ್ಯಪುಸ್ತಕಗಳಲ್ಲಿ ಭಾರತ ಎಂದು ನಮೂದಿಸಬೇಕೆಂಬ ಶಿಫಾರಸಿನ ಮೇಲಿನ ಗಲಾಟೆಗೆ ಪ್ರತಿಕ್ರಿಯಿಸಿದ ಅವರು, ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ಅಭಿವೃದ್ಧಿ ಪ್ರಕ್ರಿಯೆಯಲ್ಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ವಿವಿಧ ಪಠ್ಯಕ್ರಮಕ್ಕೆ ಸೂಚನೆ ನೀಡಿದೆ.