ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ (BAMCEF) ಬೇಡಿಕೆಯ ಮೇರೆಗೆ ಮೇ 25 ರಂದು ಭಾರತ್ ಬಂದ್ ಘೋಷಿಸಲಾಗಿದೆ.
ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಜಾತಿ ಆಧಾರಿತ ಜನಗಣತಿ ನಡೆಸಲು ಕೇಂದ್ರ ಸರ್ಕಾರ ನಿರಾಕರಿಸಿದ್ದರಿಂದ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಮೇ 25 ರಂದು ಭಾರತ್ ಬಂದ್‌ಗೆ ಬಹುಜನ ಮುಕ್ತಿ ಪಾರ್ಟಿ ಮತ್ತು ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಕೂಡ ಬೆಂಬಲ ನೀಡಿದ್ದಾರೆ.
ಭಾರತೀಯ ಯುವ ಮೋರ್ಚಾದ ರಾಷ್ಟ್ರೀಯ ಸಂಚಾಲಕರ ಪ್ರಕಾರ, ಅವರ ಬೇಡಿಕೆಗಳು ಇಂತಿವೆ :
1. ಚುನಾವಣೆಯಲ್ಲಿ ಇವಿಎಂಗಳ ಬಳಕೆಯನ್ನು ನಿಲ್ಲಿಸುವುದು
2. ಜಾತಿ ಆಧಾರಿತ ಜನಗಣತಿ
3. ಖಾಸಗಿ ವಲಯದಲ್ಲಿ SC/ST/OBC ಮೀಸಲಾತಿ
4. ರೈತರಿಗೆ MSP ಖಾತರಿ ನೀಡುವ ಕಾನೂನು
5. NRC/CAA/NPR ಅನುಷ್ಠಾನಗೊಳಿಸದಿರುವುದು
6. ಹಳೆಯ ಪಿಂಚಣಿ ಯೋಜನೆ ಪುನರಾರಂಭ

7. ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಪಂಚಾಯತ್ ಚುನಾವಣೆಗಳಲ್ಲಿ OBC ಮೀಸಲಾತಿಯಲ್ಲಿ ಪ್ರತ್ಯೇಕ ಮತದಾನ
8. ಪರಿಸರ ಸಂರಕ್ಷಣೆಯ ನೆಪದಲ್ಲಿ ಬುಡಕಟ್ಟು ಜನರನ್ನು ಸ್ಥಳಾಂತರಿಸಬಾರದು
9. ಲಸಿಕೆಯನ್ನು ಕಡ್ಡಾಯಗೊಳಿಸದಿರುವುದು.
10. Covid-19 ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರ ವಿರುದ್ಧ ರಹಸ್ಯವಾಗಿ ಮಾಡಲಾದ ಕಾರ್ಮಿಕ ಕಾನೂನುಗಳ ವಿರುದ್ಧ ರಕ್ಷಣೆ.
ಬಹುಜನ ಮುಕ್ತಿ ಪಾರ್ಟಿ (ಬಿಎಂಪಿ) ಪಕ್ಷವು ಮೇ 25 ರಂದು ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬಂದ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಭಾರತ್ ಬಂದ್ ಅನ್ನು ಯಶಸ್ವಿಗೊಳಿಸುವಂತೆ ಜನರನ್ನು ಒತ್ತಾಯಿಸಿದೆ. ಆದರೆ, ಭಾರತ್ ಬಂದ್ ದೇಶಾದ್ಯಂತ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಸರ್ಕಾರಿ ಕಚೇರಿಗಳ ಜೊತೆಗೆ ಖಾಸಗಿ ಕಚೇರಿಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರಿಗೆ ಸೇವೆಯ ಮೇಲೆ ಯಾವುದೇ ಪರಿಣಾಮ ಬೀರುವ ನಿರೀಕ್ಷೆಯೂ ಇಲ್ಲ.