ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (Shivaraj kumar) ಹಾಗೂ ನರ್ತನ್ (Narthan) ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಭೈರತಿ ರಣಗಲ್ (Bhairathi ranagal) ಸಿನಿಮಾದ ಎರಡನೇ ಟೀಸರ್ ಬಿಡುಗಡೆಯಾಗಿದೆ. ಈಗಾಗಲೇ ಸಿನಿಮಾ ಬಗ್ಗೆ ವ್ಯಾಪಕ ಕ್ರೇಜ್ ಹೆಚ್ಚಾಗಿದ್ದು ಈ ಟೀಸರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಶ್ರೀಮುರುಳಿ (Sri muruli) ಮತ್ತು ಶಿವಣ್ಣ ನಟಿಸಿದ್ದ ಮಪ್ತಿ ಸಿನಿಮಾದ ಪ್ರೀಕ್ವೆಲ್ ಇದಾಗಿದ್ದು, ಮತ್ತೆ ಸಿನಿಮಾದಲ್ಲಿ ಕೇವಲ ಒಂದಷ್ಟು ದೃಶ್ಯಗಳಲ್ಲಿ ಮಾತ್ರ ಈ ಪಾತ್ರ ಬಂದು ಹೋಗಿತ್ತು. ಆದ್ರೆ ಶಿವಣ್ಣನ ಮಾಸ್ ಲುಕ್ ಗೆ ಪ್ರೇಕ್ಷಕರು ಫಿದಾ ಆದ ಕಾರಣ ಮಪ್ತಿ ಸಿನಿಮಾದಷ್ಟೇ ಭೈರತಿ ರಣಗಲ್ ಪಾತ್ರ ಕೂಡ ಕ್ರೇಜ್ ಹುಟ್ಟುಹಾಕಿತ್ತು.

ಹೀಗಾಗಿ ಇದೇ ಟೈಟಲ್ ನಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಂಡ ನಿರ್ದೇಶಕ ನರ್ತನ್, ಇದೀಗ ಸಂಪೂರ್ಣ ಚಿತ್ರವನ್ನು ಕಟ್ಟುಕೊಟ್ಟಿದ್ದಾರೆ. ನವೆಂಬರ್ 15ಕ್ಕೆ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.





