ಸರ್ಕಾರಗಳು ( governments) ಬದಲಾದ ಹಾಗೆ ಹೊಸ ಹೊಸ ಯೋಜನೆಗಳು (schemes) ಜಾರಿಯಾಗುತ್ತದೆ ಇನ್ನು ಆಡಳಿತ ವಿಭಾಗದಲ್ಲೂ ಕೂಡ ಸಾಕಷ್ಟು ಬದಲಾವಣೆಗಳು (changes) ನಡೆಯುತ್ತಿರುತ್ತವೆ, ತಮ್ಮದೇ ಆದ ಯೋಜನೆಗಳನ್ನು ಹೊಂದಿರುವ ನಾಯಕರು ( leader) ಆ ಯೋಜನೆಗಳನ್ನ ಕಾರ್ಯರೂಪಕ್ಕೆ ತರಲು ವಿವಿಧ ತಂತ್ರಗಳನ್ನ ಹಣೆಯುತ್ತಾರೆ. ಕೆಲವೊಮ್ಮೆ ಅಧಿಕಾರಿಗಳ ಬಳಿ ಚರ್ಚಿಸಿ ಹಿಂದಿನ ಸರ್ಕಾರದ ಯೋಜನೆಗಳನ್ನು ಕಿತ್ತೊಗಿದು ಹೊಸ ಯೋಜನೆಗಳಿಗೆ ನಾಂದಿ ಹಾಡುತ್ತಾರೆ.

ಇದೀಗ ಇಂತಹದ್ದೇ ಯೋಜನೆಗೆ ಕಾಂಗ್ರೆಸ್( Congress) ಸರ್ಕಾರ ಮುಂದಾಗಿದೆ ಈಗಾಗಲೇ ವಿವಿಧ ಇಲಾಖೆಗಳೊಂದಿಗೆ ನೂತನ ಸರ್ಕಾರ ಸಭೆ, ಚರ್ಚೆಯನ್ನ ನಡೆಸಿದೆ ಇಂದೂ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿವಿಧ ಯೋಜನೆಗಳ ಕುರಿತು ಚರ್ಚೆಯನ್ನು ನಡೆಸಿದೆ ಅದರಲ್ಲೂ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳನ್ನ ( guarantee schemes) ಜಾರಿಗೆ ತರುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಿಎಂ ಸಿದ್ದರಾಮಯ್ಯ( CM Siddaramaiah) ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಹತ್ವದ ಸಭೆಯನ್ನು ನಡೆಸಿದರು. ಜೊತೆಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದರು.

ಇದೀಗ ಮತ್ತೊಂದು ಬೆಳವಣಿಗೆಗೆ ಸಾಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್( DCM D.K Shivakumar) ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಅಧಿಕಾರಿಗಳೊಂದಿಗೆ ಸಭೆಯನ್ನ ನಡೆಸಿದ್ದಾರೆ ಈಗಾಗಲೇ ಬೆಂಗಳೂರು ನಗರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿಗೆ ತರಲು ಹಲವು ಮಾರ್ಗಸೂಚಿಗಳನ್ನ ತಯಾರು ಮಾಡ್ತಾ ಇದೆ ಇದಕ್ಕೆ ಪೂರಕವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಡಿಎ ಅಧಿಕಾರಿಗಳ ಜೊತೆ ಸಭೆ ನಡೆಸಿ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ

ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ‘ಬೆಟರ್ ಬೆಂಗಳೂರು’ ನಿರ್ಮಾಣಕ್ಕಾಗಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದೆ. ಬೆಂಗಳೂರಿನ ವೈಭವವನ್ನು ಮರಳಿ ತರಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ.” ಎಂದು ಬರೆದುಕೊಂಡಿದ್ದಾರೆ
ಒಟ್ಟಾರೆಯಾಗಿ ಡಿ.ಕೆ ಶಿವಕುಮಾರ್ ಅವರ ಬೆಟರ್ ಬೆಂಗಳೂರು( better Bengaluru) ಯೋಜನೆ ಯಾವ ರೀತಿಯಲ್ಲಿ ಇರಲಿದೆ ಅದು ಯಾವ ರೀತಿಯಾಗಿ ಜಾರಿಗೆ ಬರಲಿದೆ ಎಂಬ ಕುತೂಹಲ ಬೆಂಗಳೂರಿನ ನಾಗರಿಕರಲ್ಲಿ ಮನೆಮಾಡಿದೆ.