ಊಟದ ನಂತರ ಹೆಚ್ಚಾಗಿ ವೀಳ್ಯದೆಲೆ ಅಡಿಕೆಯನ್ನ ತಿನ್ನುತ್ತಾರೆ. ವೀಳ್ಯದೆಲೆ ಸೇವಿಸುವುದು ದಶಕಗಳಿಂದಲೂ ಬಂದಿದೆ. ಇದು ನಮ್ಮ ಸಾಂಪ್ರದಾಯಿಕ ಪದ್ಧತಿ ಕೂಡ ಆಗಿದೆ.ಹಿರಿಯರ ಕಾಲದಿಂದಲು ವೀಳ್ಯದೆಲೆ ಹಾಗೂ ಅಡಿಕೆಯನ್ನು ಪ್ರತಿಯೊಂದು ಸಮಾರಂಭದಲ್ಲಿ ಪೂಜೆಯಲ್ಲಿ,ಹೀಗೆ ಪ್ರತಿಯೊಂದಕ್ಕೂ ಹೆಚ್ಚು ಬಳಸ್ತಾಯಿದ್ರು.ವೀಳ್ಯದೆಲೆಗೆ ತನ್ನದೆ ಆದ ಪ್ರಾಮುಖ್ಯತೆ ಇದೆ.ಇದೆಲ್ಲದರ ಜೊತೆಗೆ ಆಯುರ್ವೇದದ ಪ್ರಕಾರ ವೀಳ್ಯದೆಲೆಯನ್ನ ಸೇವಿಸುವುದರಿಂದ ನಮ್ಮ ಆರೋಗ್ಯಕೆ ಸಾಕಷ್ಟು ಲಾಬವಿದೆ..
ಜೀರ್ಣಕ್ರಿಯೆ
ಊಟದ ನಂತರ ವೀಳ್ಯದೆಲೆಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.ಅದರಲ್ಲೂ ಕೂಡ ಬಾಡುಟ ಮಾಡಿದವರು ವೀಳ್ಯದೆಲೆಯನ್ನ ತಿನ್ನುತ್ತಾರೆ ಕಾರಣ ಡೈಜೆಶನ್ ಬೇಗನೆ ಆಗುತ್ತದೆ..ಜೊತೆಗೆ ಚಯಾಪಚಯವನ್ನು ಹೆಚ್ಚಿಸುತ್ತದೆ ಹಾಗೂ ರಕ್ತಪರಿಚಲನೆಗೆ ಒಳ್ಳೆಯದು.
ಡಯಾಬಿಟೀಸ್ ಗೆ ಒಳ್ಳೆಯದು
ವೀಳ್ಯದೆಲೆಯು ಆಂಟಿ ಹೈಪರ್ಗ್ಲಿಸಮಿಕ್ ಅಂಶವನ್ನು ಹೊಂದಿದ್ದು ಇದು ಸಕ್ಕರೆಯ ಸಮಸ್ಯೆಯನ್ನ ನಿಯಂತ್ರಿಸುವುದಕ್ಕೆ ಸಹಕಾರಿ. ವಿಳ್ಯದೆಲೆಯು ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ.. ಇನ್ನು ಟೈಪ್ 2 ಡಯಾಬಿಟೀಸ್ ಇರುವವರು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಸೇವಿಸೋದು ಉತ್ತಮ.
ಮಲಬದ್ಧತೆ ನಿವಾರಣೆ
ವೀಳ್ಯದೆಲೆಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿದ್ದು ಅದು ನಮ್ಮ ದೇಹದಲ್ಲಿ ಇರುವಂತಹ ರಾಡಿಕಲ್ಸ್ನ ತೆರೆದುಳಿಸುವುದಕ್ಕೆ ಸಹಾಯಕಾರಿ.ಹಾಗೂ ನಮ್ಮ ದೇಹದಲ್ಲಿ ಇರುವಂತ ಪಿ ಎಚ್ ಲೆವೆಲ್ ಅನ್ನ ಬ್ಯಾಲೆನ್ಸ್ ಮಾಡಿದರ ಜೊತೆಗೆ ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಆಯುರ್ವೇದದ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ವೀಳ್ಯದೆಲೆ ಕಷಾಯವನ್ನು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ಇದಲ್ಲದರ ಜೊತೆಗೆ ಗಾಯವನ್ನ ಬೇಗನೆ ನಿವಾರಣೆ ಮಾಡುತ್ತದೆ ಹಾಗೂ ವೀಳ್ಯದೆಲೆ ಸೇವನೆ ಮಾಡುವುದರಿಂದ ಜಾಯಿಂಟ್ ಪೈನ್ಸ್ ಗೂ ಉತ್ತಮ .ಜೊತೆಗೆ ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ. ಹೀಗೆ ಹೇಳ್ತಾ ಹೋದ್ರೆ ವೀಳ್ಯದೆಲೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.