ಏಪ್ರಿಲ್ ೮ರಿಂದ ಈ ಎರಡೂ ನಗರಗಳ ನಡುವೆ ಮೆಮು ರೈಲು ಸಂಚಾರ ಆರಂಭಿಸಲಿದೆ. ಈ ಮೂಲಕ ಬೆಂಗಳೂರು- ತುಮಕೂರು ನಡುವೆ ಪ್ರತಿದಿನ ಸಂಚರಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ.
ಬೆಂಗಳೂರು ಮತ್ತು ತುಮಕೂರು ನಡುವೆ ರೈಲ್ವೆ ವಿದ್ಯುತೀಕರಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡೆಮು ರೈಲು ಬದಲು ಮೆಮು ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಇದಕ್ಕೂ ಮುನ್ನ ಬೆಂಗಳೂರು-ತುಮಕೂರು ನಡುವೆ 8 ಬೋಗಿಗಳ ಡೆಮು ರೈಲು ಸಂಚರಿಸುತ್ತಿತ್ತು. ಇದೀಗ 16 ಬೋಗಿಗಳ ಮೆಮು ರೈಲು ಸಂಚರಿಸಲಿದೆ.
ಬೆಂಗಳೂರು ರೈಲು ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 9.30ಕ್ಕೆ ಹೊರಡುವ ರೈಲು 11 ಗಂಟೆಗೆ ತುಮಕೂರು ತಲುಪಲಿದೆ. ಇದೇ ರೈಲು 11.15ಕ್ಕೆ ತುಮಕೂರಿನಿಂದ ಹೊರಟು ಮಧ್ಯಾಹ್ನ 1.25ಕ್ಕೆ ಬೆಂಗಳೂರಿಗೆ ಮರಳಲಿದೆ.
ಮಧ್ಯಾಹನ್ 1.15ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 3.20ಕ್ಕೆ ತುಮಕೂರು ತಲುಪಲಿದ್ದು, 3.50ಕ್ಕೆ ತುಮಕೂರಿನಿಂದ ಹೊರಟು ಸಂಜೆ 5.25ಕ್ಕೆ ಬೆಂಗಳೂರಿಗೆ ಮರಳಲಿದೆ.