ಒಂದು ವರ್ಷ ಹಿಂದೆ, ಎರಡು ವರ್ಷ ಮೂರು ತಿಂಗಳಿನ ಮಗುವನ್ನು ದುಡ್ಡಿಗಾಗಿ ಅಪಹರಿಸಿ , ಮಕ್ಕಳಿಲ್ಲದ ಹಿಂದೂ ಪೊಷಕರಿಗೆ ಮಾರಲಾಗಿತ್ತು. ಅದರೆ ಈಗ ಮಗುವನ್ನು ಮೂಲ ಪೋಷಕರೊಂದಿಗೆ ಮತ್ತೆ ಸೇರಿಸಲಾಗಿದೆ. ಮತ್ತೊಂದೆಡೆ ಒಂದು ವರ್ಷಕ್ಕೂ ಹೆಚ್ಚು ಕಾಲ ಮಗುವನ್ನು ನೋಡಿಕೊಂಡಿದ್ದ ಹಿಂದೂ ಪೋಷಕರು ಕೂಡ ಇದ್ದಾರೆ.
ಕಳೆದ ನವೆಂಬರ್ 2020 ರಲ್ಲಿ, ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ವ್ಯಾಪ್ತಿಯಲ್ಲಿ ಮುಸ್ಲಿಂ ಮಗು ಕಾಣೆಯಾಗಿದೆ ಎಂದು ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು, ಆದರೆ ಪೊಲೀಸರು ಪ್ರಕರಣವನ್ನು ಪರಿಹರಿಸಲು ಸಾಧ್ಯವಾಗಿರಲಿಲ್ಲ. ನಂತರದಲ್ಲಿ, ಆಂದರೆ ಇತ್ತೀಚೆಗೆ ಪ್ರಕರಣದ ತೀವ್ರತೆ ಹೆಚ್ಚಾದ ಕಾರಣ, ಪೊಲೀಸರು ಮರು ತನಿಖೆ ಆರಂಭಿಸಿದ್ದರು. ಹೊಸ ಸಾಕ್ಷ್ಯಗಳು ಮತ್ತು ಸತ್ಯಗಳು ಹೊರಹೊಮ್ಮಿದ್ದು, ಒಂದು ಸುಳಿವು ಆಧರಿಸಿ, ಮಗುವನ್ನು ಅಪಹರಿಸಿ 60,000 ರೂ.ಗೆ ಮಾರಾಟ ಮಾಡಿದ ಕಾರ್ತಿಕ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ತಿಕ್ ಬ್ಯಾಟರಾಯನಪುರದ ನಿವಾಸಿಯಾಗುದ್ದು, ಈ ಹಿಂದೆ ಬೈಕ್ ಕಳ್ಳತನ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಕಾರ್ತಿಕ್ ತಮಿಳುನಾಡಿನ ಬೆಂಗಳೂರಿನ ಹೊರವಲಯದಲ್ಲಿರುವ ಹೊಸೂರಿನಲ್ಲಿ ತರಕಾರಿ ಅಂಗಡಿಯನ್ನು ಪ್ರಾರಂಭಿಸಿದನು ಎಂದು ಪೊಲೀಸರು ಹೇಳಿದ್ದಾರೆ.
ಮಗು ಇಲ್ಲದ ದಂಪತಿಗಳು ದತ್ತು ಪಡೆಯಲು ನೋಡುತ್ತಿದ್ದರು ಎಂದು ಆತನ ಸ್ನೇಹಿತರೊಬ್ಬರು ಅವನಿಗೆ ಹೇಳಿದ್ದರು. ಬ್ಯಾಟರಾಯನಪುರದ ತನ್ನ ಗೆಳತಿಯ ಮನೆಯ ಬಳಿ ಮಗು ಆಟವಾಡುತ್ತಿರುವುದನ್ನು ಕಂಡ ಕಾರ್ತಿಕ್ ಗಮನಿಸಿದ್ದ. ನಂತರ ಮಕ್ಕಳಿಲ್ಲದ ದಂಪತಿಯನ್ನು ಭೇಟಿಯಾಗಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅದರ ತಂದೆ-ತಾಯಿ ಇಬ್ಬರೂ ಮೃತಪಟ್ಟರು ಈಗ ಮಗು ಅನಾಥವಾಗಿದೆ, ಎಂದು ಕಟ್ಟು ಕಥೆಯನ್ನು ಹೇಳಿ ನಂಬಿಸಿದ್ದನು ದಂಪತಿಗಳು ಆತನನ್ನು ನಂಬಿ ಮಗುವನ್ನು ಪಡೆಯಲು ಒಪ್ಪಿಕೊಂಡರು.
ನಂತರ, ಮಗುವನ್ನು ಅಪಹರಿಸಿ ಮಕ್ಕಳಿಲ್ಲದ ದಂಪತಿಗಳಿಗೆ ಮಾರಟ ಮಾಡಿದನು. ದಂಪತಿಗಳಿಗೆ ತುಂಬಾ ಸಂತೋಷವಾಯಿತು, ಅವರು ಮಗುವನ್ನು ಪಡೆದು, ಅವರು ಕಾರ್ತಿಕ್ ನ್ನು ಕಾನೂನಿನ ಪ್ರಕಾರ ಮಗುವನ್ನು ದತ್ತು ಪಡೆಯಲು ದಾಖಲೆಗಳನ್ನು ಕೇಳಿದರು. ಮರುದಿನ ಅದನ್ನು ಕೊಡುವುದಾಗಿ ಕಾರ್ತಿಕ್ ಹೇಳಿದನು, ಆದರೆ ಅವನು ಎಂದಿಗೂ ದಂಪತಿಗಳ ಬಳಿ ಹಿಂತಿರುಗಲಿಲ್ಲ.
ಅವನು ಈಗಾಗಲೇ ದಂಪತಿಗಳಿಂದ 60,000 ರೂಪಾಯಿಗಳನ್ನು ತೆಗೆದುಕೊಂಡಿದ್ದನು ಮತ್ತು ಅವನು ತನ್ನ ಮೊಬೈಲ್ ಸಂಖ್ಯೆಯನ್ನು ಸಹ ಬದಲಾಯಿಸಿದನು. ಪೊಲೀಸರ ಪ್ರಕಾರ, ಮಗು ಪಡೆದ ದಂಪತಿಗಳು ಒಂದು ತಿಂಗಳು ಕಾದಿದ್ದಾರೆ ಮತ್ತು ಆತನನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅವನು ಎಂದಿಗೂ ದಂಪತಿಗಳ ಕೈಗೆ ಸಿಗಲೇ ಇಲ್ಲ. ತದನಂತ ದಂಪತಿಗಳು ಈ ಕುರಿತು ಹೊಸೂರು ಪೊಲೀಸರಿಗೆ ದೂರು ನೀಡಿದ್ದರು. ಆದಾಗ್ಯೂ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಮಗು ಹೊಸ ಪೋಷಕರೊಂದಿಗೆ ಬೆಳೆಯಲು ಪ್ರಾರಂಭಿಸಿತು.
ನಂತರದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಕಳೆದ ವರ್ಷದಲ್ಲಿ ಈ ಪ್ರದೇಶಕ್ಕೆ (ಬ್ಯಾಟರಾಯನಪುರ) ಬರುವುದನ್ನು ನಿಲ್ಲಿಸಿದನು ಆದರೆ ಕಾರ್ತಿಕ್ ಒಂದು ಹುಡುಗಿಯನ್ನು ಭೇಟಿಯಾಗಲು ಬರುತ್ತಿದ್ದ ಆದರೆ ಇತ್ತೀಚೆಗೆ ಭೇಟಿ ಮಾಡುವುದನ್ನು ನಿಲ್ಲಿಸಿದರು ಎಂದು ಸ್ಥಳಿಯ ಜನರು ಹೇಳಿದ್ದಾರೆ. ನಂತರ ಹುಡುಗಿಯನ್ನು ಪೋಲಿಸರು ವಿಚಾರಿಸಿದಾಗ, ಆಕೆಯ ಗೆಳೆಯ ಬರುತ್ತಿದ್ದನೆಂದು ಹೇಳಿದ್ದಾದರು ಈಗ ಅವನೊಂದಿಗೆ ಯಾವುದೇ ಸಂಪರ್ಕದಲ್ಲಿಲ್ಲ ಎಂದು ಹೇಳುತ್ತಾಳೆ.
ಪೊಲೀಸರು ಆಕೆಯಿಂದ ಕಾರ್ತಿಕ್ ಫೋಟೋಗಳನ್ನು ತೆಗೆದುಕೊಂಡು ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಗಡಿ ಜಿಲ್ಲೆಗಳಿಗೆ ರವಾನಿಸಿದ್ದರು.
ನಂತರ, ಪೊಲೀಸರು ಕಾರ್ತಿಕ್ ನ ಮಾಜಿ ಗೆಳತಿ ಮತ್ತು ಆತನ ಸ್ನೇಹಿತರ ಮೂಲಕ ಕಾರ್ತಿಕ್ ಅವರ ಫೋನ್ ಸಂಖ್ಯೆಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಈ ಸಂಖ್ಯೆಯನ್ನು ಹೊಸೂರಿನಲ್ಲಿ ಪತ್ತೆ ಹಚ್ಚಲಾಯಿತು ಮತ್ತು ಪೊಲೀಸರು ಆತನನ್ನು ಅನುಮಾನದ ಮೇಲೆ ವಶಕ್ಕೆ ಪಡೆದುಕೊಂಡರು.
ಆರಂಭದ ದಿನಗಳಲ್ಲಿ, ಮಗುವಿನ ತಾಯಿ ಭಾಷೆಯಾದ ಉರ್ದುವನ್ನು ಮಗು ತೊದಲುತ್ತಿತ್ತು. ನಂತರ ಅದು ಹಿಂದೂ ದಂಪತಿಗಳೊಂದಿಗೆ ಬೆಳೆಯಲು ಆರಂಭಿಸಿದರಿಂದ ಉರ್ದು ಭಾಷೆಯನ್ನು ಸಂಪೂರ್ಣವಾಗಿ ಮರೆತು ಈಗ ದಂಪತಿಗಳು ಯಾವ ಭಾಷೆ (ಕನ್ನಡ) ಮಾತನಾಡುತ್ತಿದ್ದರೊ ಅದೇ ಭಾಷೆಯನ್ನು ಈಗ ಮಗು ಸರಳವಾಗಿ ಮಾತನಾಡುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
“ಇಬ್ಬರೂ ದಂಪತಿಗಳು ಇಲ್ಲಿ ಬಲಿಯಾಗಿದ್ದಾರೆ. ಮಗುವನ್ನು ತೆಗೆದುಕೊಂಡ ದಂಪತಿಗಳ ವಿರುದ್ಧ ನಾವು ಪ್ರಕರಣ ದಾಖಲಿಸಿಲ್ಲ, ಏಕೆಂದರೆ ಅವರು ಕಾನೂನುಬದ್ಧವಾಗಿ ದತ್ತು ಪಡೆಯಲು ಬಯಸಿದ್ದರು. ಅವರು ಮಗುವಿಗೆ ಎಂದಿಗೂ ಹಾನಿ ಮಾಡಿಲ್ಲ ಮತ್ತು ಅವರು ಮಗುವಿಗೆ ಎಲ್ಲವನ್ನೂ ನೀಡಿದ್ದಾರೆ “ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೂಲ ಪೋಷಕರು ಇಬ್ಬರು ಮಕ್ಕಳನ್ನು ಹೊಂದಿದ್ದರು, ಇದರಲ್ಲಿ ಅಪಹರಿಸಿದ ಮಗು ಸೇರಿದೆ. ಆದರೆ ಮೊದಲ ಮಗು ಕೆಲವು ಕಾಯಿಲೆಯಿಂದ ಸಾವನ್ನಪ್ಪಿತು ಮತ್ತು ಅವರಿಗೆ ಒಬ್ಬನೇ ಮಗು ಜನಿಸಿತು. ಮತ್ತೊಂದೆಡೆ, ದತ್ತು ಪಡೆದ ಪೋಷಕರು ಅವಳಿಗಳಿಗೆ ಜನ್ಮ ನೀಡಿದರು ಮತ್ತು ಎರಡೂ ಮಕ್ಕಳು ಸತ್ತರು ಮತ್ತು ದಂಪತಿಗಳು ಮತ್ತೆ ಗರ್ಭಧರಿಸಲು ಸಾಧ್ಯವಿಲ್ಲ. ಈಗ ಎರಡೂ ಕುಟುಂಬಗಳು ಮಗುವಿನ ಬಗ್ಗೆ ಒಂದೇ ರೀತಿಯ ಭಾವನೆಗಳನ್ನು ಮತ್ತು ಪ್ರೀತಿಯನ್ನು ಹೊಂದಿದರು.
ಮೂಲ ಪೋಷಕರು ಅಂದರೆ ಮುಸ್ಲಿಂ ಸಮುದಾಯದ ದಂಪತಿಗಳ ಮೊದಲ ಮಗು ಕಾಯಿಲೆಯಿಂದ ಮೃತಪಟ್ಟಿತ್ತು ಇದಾದ ನಂತರ ಅವರಿಗೆ ಮತ್ತೊಂದು ಮಗು ಜನಿಸಿತು. ಮತ್ತೊಂದೆಡೆ ದತ್ತು ಪಡೆದಿದ್ದ ಹಿಂದೂ ದಂಪತಿಗಳಿಗೆ ಎರಡು ಮಕ್ಕಳು ಜನಿಸಿತ್ತು ಕಾರಣಾಂತದಿಂದ ಎರಡು ಮಕ್ಕಳು ಸಾವನಪ್ಪದ್ದವು ಇದಾದ ನಂತರ ಅವರು ಗರ್ಭದರಿಸಲು ಸಾಧ್ಯವಾದರ ಕಾರಣ ಅಪಹರಿಸಿದ ಮಗುವನ್ನು ತಿಳಿಯದೆ ದತ್ತು ಪಡೆದಿದ್ದಾರೆ. “ಇಬ್ಬರೂ ಪೋಷಕರು ಮಗುವನ್ನು ನೋಡಿಕೊಳ್ಳಲು ಪರಸ್ಪರ ಒಪ್ಪಿಕೊಂಡಿದ್ದು. ಹಿಂದೂ ಹೆತ್ತವರ ನೋವನ್ನು ಅರ್ಥಮಾಡಿಕೊಂಡ ಮೂಲ ಪೋಷಕರ ಒಳ್ಳೆ ಗುಣವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ .ಇಬ್ಬರೂ ಪೋಷಕರು ಮಗುವಿಗೆ ಹೆಚ್ಚಿನ ಪ್ರೀತಿಯನ್ನು ನೀಡುತ್ತಾರೆ ಎಂದು ನಮಗೆ ಖಚಿತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ