

ರಾಜ್ಯದ (State) ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಮಳೆಯಿಂದ ಅಪಾರ ಹಾನಿ(Damage) ಉಂಟಾಗುತ್ತಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಮಳೆ ಹಾನಿ ಪ್ರದೇಶಕ್ಕೆ(Area) ಡಿಸಿಎಂ ಡಿಕೆ ಶಿವಕುಮಾರ್(DKS) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬೆಂಗಳೂರಿನ ಯಲಹಂಕ ವ್ಯಾಪ್ತಿಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ರಮಣಶ್ರೀ ಅಪಾರ್ಟ್ ಮೆಂಟ್(Ramana Shree Apartment), ನಾರ್ತವುಡ್ ವಿಲ್ಲಾದಲ್ಲಿ ಮತ್ತು ರಾಜಕಾಲುವೆಯನ್ನೂ ಡಿಕೆ ಶಿವಕುಮಾರ್ ಪರಿಶೀಲನೆ (Verification) ನಡೆಸಿದ್ದಾರೆ. ಈ ವೇಳೆ ಬಿಬಿಎಂಪಿ(BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್(Tushar Girinath) ಅವರಿಂದ ಪ್ರವಾಹ (Flood) ಕುರಿತು ಮಾಹಿತಿ ಪಡೆದರು. ಭೇಟಿ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಸ್ಥಳೀಯ ನಿವಾಸಿಗಳು(Residents) ಅಧಿಕಾರಿಗಳ ವಿರುದ್ದ ದೂರು (Complaint) ನೀಡಿದರು.
