ಬಾಲಿವುಡ್ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್(53) ಪಾರ್ಥಿವ ಶರೀರಕ್ಕೆ ಪಶ್ಚಿಮ ಬಂಗಾಳ ಸರ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ಬೀಳ್ಕೊಡುಗೆ ಕೊಟ್ಟಿದೆ.
ಕೋಲ್ಕತ್ತಾದ ರಬೀಂದ್ರ ಸದನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪುಷ್ಪನಮನ ಸಲ್ಲಿಸುವ ಮೂಲಕ ಅಗಲಿದ ಗಾಯಕನಿಗೆ ವಿದಾಯ ಹೇಳಿದ್ದರು.
ಪೊಲೀಸರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವವನ್ನು ಸಲ್ಲಿಸಿದ್ದರು. ಕೆಕೆ ಕುಟುಂಬ ಸದಸ್ಯರನ್ನು ಬ್ಯಾನರ್ಜಿ ಸಂತೈಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳವಾರ ಕಾಲೇಜೊಂದರ ಕಾರ್ಯಕ್ರಮದ ಬಳಿಕ ತಂಗಿದ್ದ ಹೋಟೆಲ್ನಲ್ಲಿ ಕುಸಿದ್ದು ಬಿದಿದ್ದ ಕೆಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು.
ಬುಧವಾರ ಬೆಳ್ಳಗ್ಗೆ ಎಸ್ ಎಸ್ ಕೆ ಎಂ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ನಡೆಯಿತ್ತು. ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೆಕೆ ಪಾರ್ಥಿವ ಶರೀರವನ್ನ ನೇತಾಜಿ ಸುಭಾಷ್ ಚಂದ್ರಬೋಸ್ ವಿಮಾಣ ನಿಲ್ಧಾಣದ ಮೂಲಕ ಮುಂಬೈಗೆ ಕೊಂಡೊಯ್ಯಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.