ಹೆಚ್ಚು ಜನ ತಮ್ಮ ತ್ವಚೆ ಹಾಗೂ ಮುಖದ ಬಗ್ಗೆ ಕಾಳಜಿಯನ್ನ ವಹಿಸುತ್ತಾರೆ. ಅದರಲ್ಲೂ ಪ್ರತಿದಿನ ಬೆಳಗ್ಗೆ ತಣ್ಣೀರಿನಿಂದ ಮುಖವನ್ನ ತೊಳೆಯುವುದರಿಂದ ಸಾಕಷ್ಟು ಲಾಭಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ
ರಕ್ತ ಪರಿಚಲನೆ ಸುಧಾರಿಸುತ್ತದೆ
ಪ್ರತಿ ದಿನ ತಣ್ಣೀರಿನಿಂದ ಮುಖ ತೊಳೆಯುವುದು ಮುಖ್ಯ.ತಣ್ಣೀರು ರಕ್ತದ ಹರಿವು ಮತ್ತು ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮಕ್ಕೆ ಆರೋಗ್ಯಕರ ಮತ್ತು ಕಾಂತಿಯುತ ಹೊಳಪನ್ನು ನೀಡುತ್ತದೆ.

ಮುಖದ ಊತವನ್ನು ಕಡಿಮೆ ಮಾಡುತ್ತದೆ
ತಣ್ಣೀರಿನಿಂದ ಮುಖ ತೊಳೆಯುವುದು ಮುಖ್ಯ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಹಾಗೂ ಮುಖದಲ್ಲಿ ಊತವನ್ನು ಕಡಿಮೆ ಮಾಡುತ್ತದೆ.
ರಂಧ್ರಗಳನ್ನು ಬಿಗಿಗೊಳಿಸುತ್ತದೆ
ಹೆಚ್ಚು ಜನಕ್ಕೆ ಮುಖದಲ್ಲಿ ಪೋರ್ಸ್ ಜಾಸ್ತಿ ಇರುತ್ತದೆ. ಪ್ರತಿದಿನ ಬೆಳಗ್ಗೆ ತಪ್ಪದೇ ತಣ್ಣೀರಿನಿಂದ ಮುಖವನ್ನ ತೊಳೆಯುವುದರಿಂದ ಫೋರ್ಸ್ ಅನ್ನ ಬಿಗಿಗೊಳಿಸುತ್ತದೆ. ಅವುಗಳನ್ನು ಚಿಕ್ಕದಾಗಿ ಮತ್ತು ಹೆಚ್ಚು ಪರಿಷ್ಕೃತವಾಗಿ ಕಾಣುವಂತೆ ಮಾಡುತ್ತದೆ.

ಮೊಡವೆಗಳನ್ನು ಕಡಿಮೆ ಮಾಡುತ್ತದೆ
ತಣ್ಣೀರು ರಂಧ್ರಗಳನ್ನು ಮುಚ್ಚಿ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.