ತ್ವಜೆಯನ್ನು ಮೆಂಟೇನ್ ಮಾಡೋದುಕೋಸ್ಕರ ಸಾಕಷ್ಟು ಜನ ವಿಧವಿಧವಾದ ಫೇಸ್ ಪ್ಯಾಕ್ ಗಳನ್ನ ಬಳಸ್ತಾರೆ. ಈ ಪ್ಯಾಕ್ಗಳಿಂದ ಕೆಲವೊಬ್ಬರಿಗೆ ಮುಖದ ಪಿಂಪಲ್ ಮಾರ್ಕ್ಸ್ ಹೋಗುತ್ತದೆ, ಕಪ್ಪು ಕಲೆಗಳನ್ನ ನಿವಾರಣೆ ಮಾಡುತ್ತದೆ, ಹಾಗೆ ಇದೆಲ್ಲದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ತುಂಬಾನೇ ಟ್ರೆಂಡ್ ಅಲ್ಲಿರುವ ಒಂದು ಫೇಸ್ ಪ್ಯಾಕ್ ಅಂದ್ರೆ ಕಾಫಿ ಪೌಡರ್ ಫೇಸ್ ಪ್ಯಾಕ್. ಕಾಫಿ ಪೌಡರ್ ಜೊತೆಗೆ ಬೇರೆ ಬೇರೆ ಪದಾರ್ಥಗಳನ್ನ ಬೆರೆಸಿ ಮನೆಯಲ್ಲಿಯೇ ಫೇಸ್ ಪ್ಯಾಕ್ ಗಳನ್ನ ತಯಾರಿಸಿಕೊಳ್ಳುತ್ತಾರೆ. ಇದರಿಂದ ನಮ್ಮ ತ್ವಚೆಗೆ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನ ಮಾಹಿತಿ ಹೀಗಿದೆ.
ಗ್ಲೋಯಿಂಗ್ ಸ್ಕಿನ್
ಕಾಫಿ ಯು ನ್ಯಾಚುರಲ್ ಎಕ್ಸ್ ಫೋಲಿಯೇಟರ್ ಆಗಿದ್ದು, ಚರ್ಮದ ಡೀಪ್ ಲೇಯರ್ ಗಳಲ್ಲಿ ಇರುವಂತಹ ಡೆಡ್ ಸ್ಕಿನ್ ಅನ್ನ ಹೊರತೆಗೆದು ಕ್ಲಿಯರ್ ಸ್ಕಿನ್ ಅನ್ನ ನಿಮ್ಮದಾಗಿಸುತ್ತದೆ. ಹಾಗೂ ಕಾಫಿ ಪೌಡರ್ ಸ್ಕಿನ್ ಗೆ ಬೇಕಾದಂತಹ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ ಹಾಗೂ ಮುಖದಲ್ಲಿ ಆಗುವಂಥ ಡ್ಯಾಮೇಜಸ್ ಅನ್ನ ತಡೆದು ಹೊಳೆಯುವ ತ್ವಚೆಯನ್ನ ನಿಮ್ಮದಾಗಿಸುತ್ತದೆ.
ಆಯ್ಲಿ ಸ್ಕಿನ್ ಅನ್ನ ತಡೆಯುತ್ತದೆ
ತ್ವಜೆಯಲ್ಲಿ ಪ್ರೊಡ್ಯೂಸ್ ಆಗುವಂತಹ ಆಯ್ಲಿನೆಸ್ ಅನ್ನ ಕಾಫಿ ಪೌಡರ್ ಹೀರಿಕೊಳ್ಳುತ್ತದೆ ಹಾಗೂ ಆಯ್ಲಿ ಸ್ಕಿನ್ ನಿಂದ ಮೂಡುವಂಥ ಮೊಡವೆಗಳನ್ನ ಕೂಡ ತಡೆಗಟ್ಟುತ್ತದೆ ಹಾಗೂ ಕಾಫಿ ಪೌಡರ್ ಜೊತೆಗೆ ಚಿಟಿಕೆಯಷ್ಟು ಅರಿಶಿಣವನ್ನ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಇರುವಂತಹ ಕಲೆಗಳು ಅಥವಾ ಮೊಡವೆಯಿಂದ ಮೂಡಿರುವಂತಹ ಕಲೆಗಳಾಗಿರಬಹುದು ತಕ್ಷಣಕ್ಕೆ ನಿವಾರಣೆ ಆಗುತ್ತಿದೆ.
ಏಜಿಂಗ್ ಸಮಸ್ಯೆಯಿಂದ ಮುಕ್ತಿ
ಕೆಲವೊಬ್ಬರಿಗೆ ಚಿಕ್ಕ ವಯಸ್ಸಿನಲ್ಲಿ ತ್ವಜೆಯಲ್ಲಿ ವೃಂಕಲ್ಸ್ ಅಥವಾ ಸುಕ್ಕು ಕಟ್ಟುವುದು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದಾಗಿ ಏಜ್ ಆದಂತೆ ಕಾಣಿಸುತ್ತಿವೆ. ಇಂಥವರು ಕಾಫಿ ಪೌಡರ್ ಗೆ ಸ್ವಲ್ಪ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಆಂಟಿಆಕ್ಸಿಡೆಂಟ್ಗಳು ಹಾಗೂ ಫ್ರೀ ರಾಡಿಕಲ್ಸ್ ಗಳಿಂದ ಉಂಟಾಗುವ ಸಮಸ್ಯೆಯನ್ನು ತಡೆಗಟ್ಟುತ್ತದೆ ಹಾಗೂ ಸುಕ್ಕುಗಳನ್ನ ನಿವಾರಣೆ ಮಾಡುತ್ತದೆ.
ಒಂದು ಟೇಬಲ್ ಸ್ಪೂನ್ ನಷ್ಟು ಕಾಫಿ ಪುಡಿಗೆ ಚಿಟಿಕೆಯಷ್ಟು ಅರಿಶಿಣ ಹಾಗೂ ಅದಕ್ಕೆ ಬೇಕಾದಷ್ಟು ನೀರನ್ನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಅನ್ನ ತಯಾರಿಸಿ. ಪ್ರತಿದಿನ ಈ ಫೇಸ್ ಪ್ಯಾಕ್ ಅನ್ನ ನಿಮ್ಮ ಮುಖಕ್ಕೆ ಅಪ್ಲೈ ಮಾಡುವುದರಿಂದ ಈ ಎಲ್ಲಾ ಲಾಭಗಳು ನಿಮ್ಮದಾಗುತ್ತದೆ.