ರಾಜಕಾರಣ ನಿಂತ ನೀರಲ್ಲ. ಆಪರೇಷನ್ ಕಮಲ ಅನ್ನೊದು ಅವರ ಹುಚ್ಚು ಕನಸು. ರಮೇಶ್ ಜಾರಕಿಹೊಳಿ, ಸಿ.ಪಿ. ಯೋಗೀಶ್ವರ್ ಎಚ್ ಡಿ ಕುಮಾರಸ್ವಾಮಿ ಅ ವರಿಗೆಲ್ಲ ಮಾನ ಮರ್ಯಾದೆ ಇದಿಯಾ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ಅವರ ನಾಯಕತ್ವ ಇದ್ದರೂ 110 ದಾಟಿಲ್ಲ. ರಮೇಶ್ ಜಾರಕಿಹೊಳಿ, ಸಿ.ಪಿ. ಯೋಗೀಶ್ವರ್ ರಿಂದ ಆಪರೇಷನ್ ಕಮಲ ಶುರುವಾಗಿದೆ. ಇವರ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಇವರಿಗೇನಾದರೂ ಮಾನ ಮರ್ಯಾದೆ ಇದಿಯಾ…? ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ಹೆಚ್.ಡಿ ಕುಮಾರಸ್ವಾಮಿ ಸಹ ಆಪರೇಷನ್ ಕಮಲ ಮಾಡಲು ಹೊರಟಿದ್ದಾರೆ. ಅವರೊಂದಿಗೆ 3-4 ಜನರಿದ್ದಾರೆ. ಸರ್ಕಾರ ಬಿಳಿಸುವ ತಾಕತ್ತು, ಶಕ್ತಿ ಅವರಿಗಿಲ್ಲ. ನಮ್ಮ ಎಂ.ಎಲ್.ಎ. ಜೊತೆಗೆ ಕೆಲವರು ಮಾತನಾಡುತ್ತಿದ್ದಾರೆ. 50 ಕೋಟಿ ಕೊಡ್ತಿವಿ ಅಂತಾ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಕ್ರಾಂತಿ ಬಳಿಕ ಸರ್ಕಾರ ಬೀಳುತ್ತೆ ವಿಚಾರಕ್ಕೆ ಪ್ರತಿಕ್ತಿಸಿದ ಅವರು, ರಕ್ತದಲ್ಲಿ ಬರೆದುಕೊಡುತ್ತೇನೆ ನಮ್ಮ ಸರ್ಕಾರ ಬೀಳಲ್ಲ. ಕಾಂಗ್ರೆಸ್ ಮೂರು ಬಾಗಿಲು ಎಂಬ ಕಟೀಲು ಹೇಳುತ್ತುದ್ದಾರೆ ಅವರು ಹರಕು ಬಾಯಿ ಮನುಷ್ಯ. ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಇರಲ್ಲ ಅಂತ ಹೇಳಿದ್ರು. ಈಗ ಎಲ್ಲಿ ಹೋಗಿದ್ದಾರೆ ನಳೀನ್. ಬಿಜೆಪಿದು 6 ಬಾಗಿಲು ಆಗಿದೆ. ಅಶೋಕ್, ಸಂತೋಷ್, ಯತ್ನಾಳ್, ಯಡಿಯೂರಪ್ಪ, ಬೊಮ್ಮಾಯಿ ಹೀಗೆ 6 ಬಾಗಿಲು ಇದೆ. ನಳೀನ್ ಕುಮಾರ್ ಗೆ ಮಾನಾ ಮರ್ಯಾದೆ ಇದೆಯಾ…? ಎಂದು ಪ್ರಶ್ನಿಸಿದ್ದಾರೆ.
ಆಪರೇಷನ್ ಕಮಲ ಬಿಜೆಪಿಯವರ ಹುಚ್ಚು ಕನಸು. ಇವರ ಯೋಗ್ಯತೆಗೆ ಯಡಿಯೂರಪ್ಪನವರ ಸಾರಥ್ಯ ಇದ್ರೂ ಎಷ್ಟು ಗೆದ್ದರು. ಚಾಲೆಂಜ್ ಮಾಡ್ತೇನೆ. ನಮ್ಮ ಸರ್ಕಾರನಾ ಬಿಳಿಸಲಿ ನೋಡೋಣ. ಇವರಿಗೆ ಮಾನ ಮರ್ಯಾದೆ ಇದಿದ್ರೆ ವಿರೋಧ ಪಕ್ಷ ನಾಯಕರನ್ನ ಮಾಡುತ್ತಿದ್ದರು. ನಾವು ಉತ್ತಮ ಆಡಳಿತ ಕೊಡುತ್ತಿದ್ದೆವೆ ಎಂದು ಹೇಳಿದ್ದಾರೆ .

ಕೆಲವಂದಿಷ್ಟು ಜನರಿದ್ದಾರೆ, ಯೋಗೇಶ್, ರಮೇಶ್ ಜಾರಕಿಹೊಳಿ ಅಂತವರು ಹೀಗೆ ಮಾಡುತ್ತಿದ್ದಾರೆ. ತಮ್ಮ ಪಕ್ಷದಲ್ಲಿ ಅಸ್ಥಿತ್ವ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಕುಮಾರ್ ಸ್ವಾಮಿ ಅವರು ಅಮಿತ್ ಷಾಗೆ ಕರ್ನಾಟಕ ದಲ್ಲಿ ಚೆಂಜ್ ಮಾಡ್ತೇವೆ ಅಂತ ಹೇಳಿ ಬಂದಿದ್ದಾರೆ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಬೆಂಬಲದಿಂದ ಮುಖ್ಯಮಂತ್ರಿ ಆದವರು. ಪಕ್ಷ ಬೀಳಿಸಲು ಸಣ್ಣ ಷಡ್ಯಂತರ ನಡಿದಿದೆ. ನೂರು ಕೋಟಿ ಕೊಟ್ಟರೂ ಯಾರು ಹೋಗಲ್ಲ. ಯಾಕಂದ್ರೆ 17 ಜನ ಹೋಗಿ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಹುಲಿ ಉಗುರಿಗೂ ಹಿಂಧುತ್ವ ಬೆರೆಸಿದ ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ್ಯಾರೋ ತಲೆ ಕೆಟ್ಟಿರಬೇಕು. ಆರಗ ಜ್ಞಾನೇಂದ್ರಗೆ ಬುದ್ದಿ ಇಲ್ಲ. ಅವರದ್ದು ಬರೇ ತಲೆ ಹರಟೆ ಜಾಸ್ತಿ. ಅಧಿಕಾರಿಗಳು ಸವದಿ ಅವರ ಮನೆಗೂ ಹೋಗಿದ್ದಾರೆ. ಎಲ್ಲಾ ಪಕ್ಷದವರ ಮನೆಗೂ ಹೋಗಿದ್ದಾರೆ. ಇದರಲ್ಲಿ ಪಕ್ಷ ಎಲ್ಲಿಂದ ಬಂತು. ಮಲೆನಾಡಿನ ಮನೆಗಳಲ್ಲಿ ಜಿಂಕೆ ಕೊಂಬು, ಕೋಣದ ಕೊಂಬು ಸಿಗೋದು ಮಾಮೂಲು. ಕಾಡಲ್ಲಿ ಸಿಕ್ಕವನ್ನು ತಂದು ಇಟ್ಟುಕೊಂಡಿರುತ್ತಾರೆ. ಅರಣ್ಯ ಇಲಾಖೆಗೆ ಕೊಡಲು ಎರಡು ತಿಂಗಳು ಅವಕಾಶವಿದೆ ಎಂದು ಹೇಳಿದ್ದಾರೆ.