ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಹಿಂದೆ ಜಾಗದ ಮೋಹ ಇದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಶುಕ್ರವಾರ (ಆಗಸ್ಟ್ 18) ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಹಿಂದೆ ಸ್ಥಳದ ವ್ಯಾಮೋಹ ಇದೆ ಎಂದು ಹೇಳಿಕೆ ನೀಡಿದ್ದಾರೆ
ಸಮುದಾಯವೊಂದರ ಪರಿವಾರದಂತಹ ಜಮೀನ್ದಾರರು ಹುಟ್ಟಲೇಬಾರದು. ತಾಲೂಕಿನ ಎಲ್ಲಾ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವಸಂತ ಬಂಗೇರ ಆರೋಪಿಸಿದರು.
“ನನ್ನ ತಂದೆಯೂ ಜಮೀನ್ದಾರು ಆಗಿದ್ದವರು. ಆದರೆ ಯಾರ ಜಮೀನನ್ನು ವಶಪಡಿಸಿಕೊಳ್ಳಲು ನಾನು ಬಿಡಲಿಲ್ಲ ಆ ಕಾರಣಕ್ಕಾಗಿ ನನ್ನ ಹೆಸರಿನಲ್ಲಿ ಇಂದಿಗೂ ಯಾವುದೇ ಜಮೀನಿಲ್ಲ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ಜಮೀನುಗಳನ್ನೇ ವಶಪಡಿಸಿಕೊಳ್ಳುತ್ತಿದ್ದಾರೆ.ಬಿಟ್ಟಿಯಾಗಿ ಜಮೀನು ಸಿಕ್ಕಿದರೆ ಆ ಪರಿವಾರಕ್ಕೆ ಭಾರೀ ಖುಷಿ” ಎಂದು ಬಂಗೇರ ಟೀಕಿಸಿದರು.
ಇಂತಹ ಜಮೀನ್ದಾರಿಕೆಯನ್ನು ವಿರೋಧಿಸಬೇಕು. ಆಗ ಸೌಜನ್ಯಾ ಪ್ರಕರಣ ರೀತಿ ಘಟನೆಗಳು ನಡೆಯುವುದಿಲ್ಲ ಎಂದು ವಸಂತ ಬಂಗೇರ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? 10-15 ಶಾಸಕರು ಕಾಂಗ್ರೆಸ್ ಸೇರ್ಪಡೆ: ಸಚಿವ ಚಲುವರಾಯಸ್ವಾಮಿ ಸ್ಫೋಟಕ ಹೇಳಿಕೆ
“ವಿರೋಧಿಸದೇ ಇದ್ದಲ್ಲಿ ಇಂತಹ ಘಟನೆಗಳು ನಡೆಯುತ್ತದೆ. ಸೌಜನ್ಯಾ ಪ್ರಕರಣ ಇದೇ ಕಾರಣಕ್ಕೆ ನಡೆದಿರುವುದು. ಸೌಜನ್ಯಾ ಕೊಲೆ ನಡೆದಿರುವುದೂ ಜಾಗದ ವಿಚಾರಕ್ಕಾಗಿ ಎಂದು ವಸಂತ ಬಂಗೇರ ಆರೋಪಿಸಿದರು.
ಬಂಗೇರ ಅವರು ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದೆ.