ಪ್ರತಿಯೊಂದು ತರಕಾರಿಗಳಲ್ಲೂ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಆರೋಗ್ಯವನ್ನ ಚೆನ್ನಾಗಿ ಇಟ್ಟುಕೊಳ್ಳಲು ತರಕಾರಿಗಳನ್ನ ಹೆಚ್ಚು ತಿನ್ನುವುದು ಉತ್ತಮ. ಅದರಲ್ಲೂ ನಿಮ್ಮ ಡಯಟ್ ನಲ್ಲಿ ಬೀಟ್ರೂಟ್ ಅನ್ನ ಸೇರಿಸುವುದರಿಂದ ಸಾಕಷ್ಟು ಪೋಷಕಾಂಶಗಳು, ನ್ಯಾಚುರಲ್ ಶುಗರ್ , ಫೈಬರ್ ,ಮೆಗ್ನೀಷಿಯಂ ,ಪೊಟ್ಯಾಶಿಯಂ ,ಸೋಡಿಯಂ ಅಂಶ ನಿಮ್ಮ ದೇಹಕ್ಕೆ ಸೇರುತ್ತದೆ. ವಾರಕ್ಕೆ ಮೂರು ಬಾರಿ ಅಥವಾ ಐದು ದಿನ ಬೀಟ್ರೂಟ್ ಜ್ಯೂಸ್ ,ಬೀಟ್ರೂಟ್ ನಿಂದ ಮಾಡಿದ ಇತರೆ ಪದಾರ್ಥಗಳನ್ನ ಸೇವಿಸುವುದರಿಂದ ಆರೋಗ್ಯದಲ್ಲಿ ಏನಿಲ್ಲ ಬದಲಾವಣೆಗಳಾಗುತ್ತದೆ ಅನ್ನೋದರ ಮಾಹಿತಿ ಇಲ್ಲಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬೀಟ್ರೂಟ್ ದೇಹಕ್ಕೆ ಆತ್ಯಗತ್ಯ ಪ್ರತಿನಿತ್ಯ ನೀವು ಸೇವಿಸುವುದರಿಂದ ಆರೋಗ್ಯಕ್ಕೆ ಎಲ್ಲಾ ರೀತಿಯ ಲಾಭವು ದೊರಕುತ್ತದೆ ಅದರಲ್ಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕಾಯಿಲೆಗಳು ದೂರವಾಗಿ ಆರೋಗ್ಯವಾಗಿರೋದಕ್ಕೆ ಸಹಾಯವಾಗುತ್ತದೆ.
ವೈಟ್ ಲಾಸ್
ತೂಕ ಇಳಿಸಲು ನಾನಾ ರೀತಿಯ ಪ್ರಯತ್ನ ಮಾಡಿದವರಿಗೆ ಬೀಟ್ರೂಟ್ ಒಂದು ಉತ್ತಮ ಪರಿಹಾರ. ಪ್ರತಿದಿನ ಬೀಟ್ರೂಟ್ ಜ್ಯೂಸನ್ನ ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ .ಅದರಲ್ಲೂ ಬೆಲ್ಲಿ ಫ್ಯಾಟ್ ಸೊಂಟದ ಕೊಬ್ಬು ಹೀಗೆ ಅತಿಯಾಗಿ ಕೊಲೆಸ್ಟ್ರಾಲ್ ಇದ್ದರೆ ಅದು ನಿವಾರಣೆಯಾಗುತ್ತದೆ. ಪ್ರತಿದಿನ ನಿಮ್ಮ ಡಯಟ್ ನಲ್ಲಿ ಬೀಟ್ರೂಟ್ ಅನ್ನ ಸೇರಿಸುವುದರಿಂದ ಇದರಲ್ಲಿ ಹೆಚ್ಚಾಗಿ ಫೈಬರ್ ಅಂಶ ಇರುತ್ತದೆ ಇದು ಹಸಿವನ್ನ ಕಡಿಮೆ ಮಾಡುತ್ತದೆ ಹಾಗೂ ಕೊಬ್ಬನ್ನು ಕಡಿಮೆ ಮಾಡಲು ಪ್ರಯೋಜನಕಾರಿ.
ರಕ್ತದೊತ್ತಡ
ದೇಹದಲ್ಲಿ ರಕ್ತ ಕಡಿಮೆ ಇದ್ದರೆ ಬ್ಲಡ್ ಪ್ಲೋ ಸರಿಯಾಗಿ ಆಗದಿದ್ದರೆ ಬೀಟ್ರೂಟನ್ನ ಸೇವಿಸುವುದು ಉತ್ತಮ. ಬೀಟ್ರೂಟ್ ನಲ್ಲಿರುವ ನೈಟ್ರೇಟ್ ರಕ್ತ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗೂ ರಕ್ತದ ಒತ್ತಡವನ್ನ ನಿಯಂತ್ರಿಸುತ್ತದೆ. ಪಿರೇಡ್ಸ್ ತೊಂದರೆಯಾಗಿದ್ದರೆ ಅಥವಾ ಇರ್ರೆಗುಲರ್ ಪಿರಿಯಡ್ಸ್ ಆಗಿದ್ದರೆ ಇದಕ್ಕೆ ಪರಿಹಾರವನ್ನು ನೀಡುತ್ತದೆ.
ಇಷ್ಟು ಮಾತ್ರವಲ್ಲದೆ ತ್ವಜೆಗೆ ತುಂಬಾನೇ ಒಳ್ಳೆಯದು. ಮೂತ್ರನಾಳದಲ್ಲಿ ಕಾಣಿಸಿಕೊಳ್ಳುವ ಸೋಂಕುಗಳನ್ನು ಗುಣಪಡಿಸುವುದಕ್ಕೆ ತುಂಬಾನೇ ಸಹಾಯಕಾರಿ ಹಾಗೂ ಹೃದಯದ ಕಾಯಿಲೆಗಳನ್ನ ದೂರ ಮಾಡುತ್ತದೆ.