ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ಮನೆಕಡೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ಭೀಕರ ದಾಳಿ (Bear attack) ನಡೆಸಿರುವ ಘಟನೆ ಶಿವಮೊಗ್ಗದ (Shivamogga) ಭದ್ರಾವತಿಯಲ್ಲಿ ನಡೆದಿದೆ. 52 ವರ್ಷದ ದೇವೇಂದ್ರಪ್ಪ ಕರಡಿ ದಾಳಿಗೆ ಒಳಗಾದ ವ್ಯಕ್ತಿ.
ನವೆಂಬರ್ 8ರ ಮಧ್ಯಾಹ್ನ ದೇವೇಂದ್ರಪ್ಪ ಕಾಲ್ನಡಿಗೆಯಲ್ಲಿ ಬರುವಾಗ ಕರಡಿ ಅವರ ಮೇಲೆರಗಿದೆ. ಈ ವೇಳೆ ದೇವೆಂದ್ರಪ್ಪನವರ (Devndrappa) ತಲೆ, ಮೈ ಮತ್ತು ಕೈಯನ್ನು ಪರಚಿದ್ದು, ತೀವ್ರ ಸ್ವರೂಪದ ಗಾಯಗಳಾಗಿವೆ.
ಹೀಗಾಗಿ ತಲೆ ,ಮುಖ, ಹೊಟ್ಟೆ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ.ಈ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಗ್ರಾಮಸ್ಥರು ದೇವೆಂದ್ರಪ್ಪ ಅವರನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಕಲಿಸಿದ್ದಾರೆ. ಈ ಘಟನೆಯ ಬಗ್ಗೆ ಗ್ರಾಮಸ್ಥರು ಅರಣ್ಯಾಧಿಕಾರಿಗಳ ಮೇಲೆ ಆಕ್ರೋಶಗೊಂಡಿದ್ದು, ಕರಡಿಯನ್ನು ಸೆರೆಹಿಯುವಂತೆ ಒತ್ತಾಯಿಸಿದ್ದಾರೆ.