ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರ ಡಿಕೆ ಸುರೇಶ್ (Dk sures) ಭದ್ರಕೋಟೆ.. ಡಿಕೆ ಸಹೋದರರ ಕೋಟೆಯನ್ನ ಛಿದ್ರಗೊಳಿಸಲು ಬಿಜೆಪಿ (Bjp) ಡಾ. ಸಿಎನ್ ಮಂಜುನಾಥ್ (Dr.Manjunath) ಅವರ ಅಸ್ತ್ರ ಪ್ರಯೋಗಿಸಿದ್ದು, ಸಾಕಷ್ಟು ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಮೊದಲಿನಿಂದಲೂ ಗೂಂಡಾಗಿರಿಯ ಆರೋಪ ಮಾಡ್ತಿದ್ದ ಕಮಲಪಡೆ ಒಂದು ಹೆಜ್ಜೆ ಮುಂದಕ್ಕಿಟ್ಟಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಅತಿ ಸೂಕ್ಷ್ಮ ಕ್ಷೇತ್ರವಾಗಿ ಪರಿಗಣನೆ ಮಾಡುವಂತೆಚುನಾವಣಾ ಆಯೋಗಕ್ಕೆ (Eletion commission) ಡಾ. ಸಿಎನ್ ಮಂಜುನಾಥ್ ಪತ್ರ ಬರೆದಿದ್ರು. ಪ್ರಭಾವಿಯೊಬ್ಬರು ಇಲ್ಲಿ ಸ್ಪರ್ಧಿಸಿದ್ದು, ಆಡಳಿತ ದುರುಪಯೋಗ ಸಾಧ್ಯತೆ ಇದೆ ಎಂದಿದ್ರು, ಇದೀಗ ಬೆಂಗಳೂರು ಗ್ರಾಮಾಂತರವನ್ನ ಸೂಕ್ಷ್ಮ (sensitive) ಲೋಕಸಭಾ ಕ್ಷೇತ್ರ ಅಂತ ಪರಿಗಣನೆ ಮಾಡಲಾಗಿದ್ದು, ಅರೆಸೇನಾ (para military) ಪಡೆ ನೇಮಿಸಲು ಚುನಾವಣಾ ಆಯೋಗ ಸೂಚಿಸಿದೆ.

ಪ್ರಾಚಾರದ ಆರಂಭದಿಂದಲೂ, ಇಲ್ಲಿ ಭಯದ ವಾತಾವರಣವಿದೆ, ಗೂಂಡಾಗಿರಿ ನಡೆಯುತ್ತಿದೆ ಮದು ಆರೋಪಿಸಿದ್ದ ಬಿಜೆಪಿ, ಚುನಾವಣಾ ಆಯೋಗದ ಮೂಲಕ ಅರೆಸೇನಾ ಪಡೆ (para military) ಕರೆತರಲು ಸಜ್ಜಾಗಿದ್ದು ಬೆಂ.ಗ್ರಾ. ಕ್ಷೇತ್ರ ಕದನ ಮತ್ತೊಂದು ಹಂತ ತಲುಪಿದೆ.