ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನಲೆ ಪಾಲಿಕೆಯಲ್ಲಿ ಚುನಾವಣಾ ಚಟುವಟಿಕೆಗಳು ಗರಿಕೆದರಿವೆ. ಡಿ ಲಿಮಿಟೇಷನ್ ಸಂಬಂಧ ಈಗಾಗಲೇ ಕರಡು ಸಿದ್ದವಾಗಿದ್ದು, ಪಾಲಿಕೆ ವತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಡಿಲಿಮಿಟೇಷನ್ ವರದಿಯ ಅಂಶಗಳೇನು, ಯಾವೆಲ್ಲಾ ಮಾನದಂಡಗಳ ಮೇಲೆ ಡಿಲಿಮಿಟೇಷನ್ ಮಾಡಲಾಗಿದೆ ಎಂಬುದರ ಡೀಟೆಲ್ಸ್ ಇಲ್ಲಿದೆ.
ಸರ್ಕಾರಕ್ಕೆ ಡಿಲಿಮಿಟೇಷನ್ ರಿಪೋರ್ಟ್ ಸಲ್ಲಿಕೆ ಮಾಡಿದ ಬಿಬಿಎಂಪಿ !
ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂ ಆದೇಶ ಬಂದಿದ್ದೆ ತಡ ಪಾಲಿಕೆಯಲ್ಲಿ ಹಲವು ಕಾರ್ಯಗಳು ಆರಂಭವಾಗಿವೆ. ಎಂಟು ವಾರಗಳ ಒಳಗಾಗಿ ಡಿಲಿಮಿಟೆಡಷನ್ ಪಟ್ಟಿ ಸಿದ್ದ ಮಾಡಬೇಕೆಂಬ ಕೋರ್ಟ್ ಸೂಚನೆಯ ಬೆನ್ನಲ್ಲೇ ಪಾಲಿಕೆ ಕರಡು ಸಿದ್ದ ಪಡಿಸಿದ್ದು, ಡಿಲಿಮಿಟೇಷನ್ ವರದಿಯನ್ನ ಇಂದು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ವಾರ್ಡ್ ಮರುವಿಂಗಡಣೆ ಸಂಬಂಧ, ಮುಖ್ಯ ಆಯುಕ್ತರು, ಆಡಳಿತಾಧಿಕಾರಿ ಹಾಗೂ ಕಂದಾಯ ಇಲಾಖೆಯ ವಿಶೇಷ ಆಯುಕ್ತರನ್ನೊಳಗೊಂಡ ಕಮಿಟಿ ಸಂಪೂರ್ಣ ಕರಡು ಸಿದ್ದಪಡಿಸಿದ್ದು ರಾಜ್ಯ ಸರ್ಕಾರದ ಮುಂದಿಟ್ಟಿದೆ.

ಯಾವ ಮಾನದಂಡಗಳ ಮೇಲೆ ಡಿಲಿಮಿಟೇಷನ್ ಮಾಡಲಾಗಿದೆ ಎಂಬುದನ್ನ ನೋಡೊದಾದ್ರೆ…
– 198 ವಾರ್ಡ್ ಗಳನ್ನು 243 ವಾರ್ಡ್ ಗಳಾಗಿ ಪುನರ್ ವಿಂಗಡಣೆ
– 2011 ರ ಜನಗಣತಿ ಆಧರಾದ ಮೇಲೆ ಡಿಲಿಮಿಟೇಷನ್ ಪ್ರಕ್ರಿಯೆ
– ಒಂದು ವಾರ್ಡಿಗೆ 35 ಸಾವಿರ ಜನಸಂಖ್ಯೆ ನಿಗಧಿ
– ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ 86 ಲಕ್ಷ ಮತದಾರರರು
– ಮೊದಲ ಬಾರಿಗೆ 50 – 50 ಮಹಿಳಾ ಮೀಸಲಾತಿಗೆ ಅವಕಾಶ
ಪಾಲಿಕೆ 198 ಇದ್ದ ವಾರ್ಡ್ಗನ್ನ 243 ವಾರ್ಡ್ ಗೆ ಏರಿಕೆ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದು, ಈ ವರದಿಗೆ ಸರ್ಕಾರದ ಅನುಮೋದನೆ ಸಿಕ್ಕ ನಂತರ ಸಾರ್ವಜನಿಕರ ಮುಂದಿಡಲಿದೆ. ವಾರ್ಡ್ ವಿಂಗಡಣೆ ಪಟ್ಟಿ ಸಂಬಂಧ ಸಾರ್ವಜನಿಕ ಆಕ್ಷೇಪಣೆಗೆ ಒಂದು ವಾರ ಕಾಲಾವಕಾಶ ನೀಡಲಿದೆ. ಗಡಿ ಗುರುತಿಸಿರುವ ಬಗ್ಗೆ ಸಲಹೆ ಅಭಿಪ್ರಾಯ ಪಡೆಯಲಿದೆ. ನಂತರ ಅಂತಿಮ ಪಟ್ಟಿ ಸಿದ್ದವಾದ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಡಿ ಲಿಮಿಟೇಷನ್ ವರದಿ ಸಂಬಂಧ ಪಾಲಿಕೆಯ ಮಾಜಿ ನಾಯಕರು ಪ್ರತಿಕ್ರಿಯೆ ನೀಡಿದ್ದು ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿ ಅಂತಾರೆ ಅಬ್ದುಲ್ ವಾಜೀದ್. ಅಂತೂ ವಾರ್ಡ್ ಪುನರ್ ವಿಂಗಡಣೆ ವರದಿ ಸಿದ್ದವಾಗುವ ಮೂಲಕ ಚುನಾವಣಾ ಕಾರ್ಯ ಚುರುಕಾಗಿದ್ದು, ಬಿಬಿಎಂಪಿ ವರದಿಗೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಏನ್ ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.